ಫಲಾನುಭವಿಗೆ ಹಣ ಕೇಳಿದರೆ ಅಧಿಕಾರಿಗಳಿಗೆ ಕ್ರಮ: ಪಟ್ಟಣ

0
28
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಅನುಕೂಲವಾಗಲೆಂದು ವಿವಿಧ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲಾಗಿದೆ. ಗ್ರಾ.ಪಂ ಸದಸ್ಯರಾಗಲಿ, ಮಧ್ಯವರ್ತಿಗಳಾಗಲಿ ಫಲಾನುಭವಿಗಳಿಂದ ಹಣ ವಸೂಲಿ ಮಾಡಲು ಮುಂದಾದಲ್ಲಿ ನೇರವಾಗಿ ದೂರ ನೀಡಬೇಕು. ಲಂಚ ಪಡೆದವರ ಯಾರೆ ಆದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಎಚ್ಚರಿಕೆ ನೀಡಿದರು.
ತಾಲೂಕಿನ ಆನೆಗುದ್ದಿ ಗ್ರಾಮದಲ್ಲಿ 12 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ, 3.95 ಲಕ್ಷ ವೆಚ್ಚದಲ್ಲಿ ಬಸ್‌ ತಂಗುದಾನ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ಹಾಗೂ ವಿವಿಧ ಯೋಜನೆಯ ವಸತಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು. ಆನೆಗುದ್ದಿ ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ರೂ. 40 ಲಕ್ಷ, ಸಿದ್ದಲಿಂಗೇಶ್ವರ ದೇವಸ್ಥಾನದ ಹತ್ತಿರ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ. 12 ಲಕ್ಷ ಹಾಗೂ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ 12 ಲಕ್ಷ ರೂ ಸೇರಿದಂತೆ ಆನೆಗುದ್ದಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಗ್ರಾಮಸ್ಥರ ಹಲವು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವದು ಎಂದು ಭರವಸೆ ನೀಡಿದರು.
ಮಾಜಿ ಜಿಪಂ.ಸದಸ್ಯ ಗಂಗಪ್ಪ ಬೂದಿ ಮಾತನಾಡಿ, ಬಸನಗೌಡ ಪ್ಯಾಟಿಗೌಡರ, ಉಮೇಶ ಬಾಳಿ, ಭೀಮಣ್ಣ ಬೂದಿ, ಗ್ರಾಪಂ.ಉಪಾಧ್ಯಕ್ಷ ಬಸವರಾಜ ಸೊರಗಾವಿ, ಗ್ರಾಪಂ.ಸದಸ್ಯರಾದ ಲಕ್ಷ್ಮಣ ಪಮ್ಮಾರ, ದಾನವ್ವ ಮುರಡಿ, ಕೃಷ್ಣಾ ಲಮಾಣಿ ಮುಂತಾದವರು ಮಾತನಾಡಿದರು.
ಮುಖಂಡರಾದ ಬಸನಗೌಡ ಪ್ಯಾಟಿಗೌಡರ, ಉಮೇಶ ಬಾಳಿ, ಭೀಮಣ್ಣ ಬೂದಿ, ಗ್ರಾಪಂ.ಉಪಾಧ್ಯಕ್ಷ ಬಸವರಾಜ ಸೊರಗಾವಿ, ಗ್ರಾಪಂ.ಸದಸ್ಯರಾದ ಲಕ್ಷ್ಮಣ ಪಮ್ಮಾರ, ದಾನವ್ವ ಮುರಡಿ, ಕೃಷ್ಣಾ ಲಮಾಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಹಾದೇವ ಬೊರ್ಜಿ ಸ್ವಾಗತಿಸಿದರು. ಹಣಮಂತ ಸೊರಗಾವಿ ನಿರೂಪಿಸಿದರು. ಪಿಡಿಓ ವಿಜಯಕುಮಾರ ವನಕ್ಯಾಳ ವಂದಿಸಿದರು.

loading...