ಬಸ್ ಡೇ ಆಚರಣೆ : ಮಹಿಳೆಯರ ವಿಶೇಷ ಬಸ್ ಉದ್ಘಾಟನೆ

0
37
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಾರ್ವಜನಿಕರು ಯಾವಾಗಲೂ ಸುರಕ್ಷೀತ ಪ್ರಯಾಣ ಮಾಡಬೇಕು ಹಾಗೂ ವೃದ್ಧರೂ ಮಹಿಳೆ ಹಾಗೂ ಅಂಗವಿಕಲರಿಗೆ ಮೀಸಲಿದ್ದ ಸೀಟು ಬಿಟ್ಟುಕೊಂಡಿ ಎಂದು ಐಜಿಪಿ ಅಲೋಕ ಕುಮಾರ ಹೇಳಿದರು.
ಅವರು ಮಂಗಳವಾರದಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದ ವತಿಯಿಂದ ಬಸ್ ಡೇ ಆಚರಣೆ ಹಾಗೂ ಮಹಿಳೆ ವಿಶೇಷ ವಾಹನ ಉದ್ಘಾಟನೆ ಮಾಡಿ ಮಾತನಾಡಿದರು.
ಮೊದಲು ಬಸ್ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡುವುದರ ಮೂಲಕ ಸಾಮಾನ್ಯ ಸುರಕ್ಷೀತ ಪ್ರಯಾಣ ಮಾಡಿ ಎಂದು ಬಸ್ ಡೇ ಬಗ್ಗೆ ಜಾಗೃತಿ ಮೂಡಿಸಿದರು.
ಜನರು ಯಾವಾಗಲೂ ಸಹ ಸುರಕ್ಷೀತ ಪ್ರಯಾಣ ಮಾಡಬೇಕು. ಬಸ್ ಕಂಡಕ್ಟರ್ ಟಿಕೇಟ್‍ಗೊಸ್ಕರ ಪ್ರಯಾಣಿಕರೊಂದಿಗೆ ಜಗಳವಾಡದೆ ಸಮಾಧಾನದಿಂದ ವರ್ತಿಸಿ ಎಂದರು.
ಭಾರತ ದೇಶ ವಿಶೇಷವಾದ ತನ್ನದೇಯಾದ ಸಂಸ್ಕøತಿ ಹೊಂದಿದೆ. ಹಿರಿಯರಿಗೆ, ಮಹಿಳೆರಿಗೆ ವಿಶೇಷ ಗೌರವ ನೀಡಲಾಗುತ್ತದೆ. ಬಸ್‍ನಲ್ಲಿ ಮಹಿಳೆ, ವೃದ್ಧರೂ. ಅಂಗವಿಕರಲರಿಗೆ ಸೀಟ್ ಮಿಸಲಾಗಿ ಇಟ್ಟಿರುತ್ತದೆ. ಆ ಸೀಟ್ ನಲ್ಲಿ ಕೂಡದೆ ಅವರಿಗೆ ಬಿಟ್ಟುಕೊಂಡಿ ಎಂದು ಸೂಚನೆ ನೀಡಿದರು. ದಿನ ಪ್ರತಿ ಮಕ್ಕಳ ಶಾಲಾ ಕಾಲೇಜ್ ತೆರಳಲು ಬಸ್ ಗಳನ್ನು ಅವಲಂಭಿಸಿದ್ದಾರೆ. ಆದ್ದರಿಂದ ಬಸ್ ಸರಿಯಾದ ಸಮಯಕ್ಕೆ ತೆಗೆದುಕೊಂಡು ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಹೇಳದರು.
ಡಿಸಿಪಿ ಸೀಮಾ ಲಾಟ್ಕರ ಸುಳೇಬಾವಿದಿಂದ ವಡಗಾಂವಗೆ ನೇರವಾಗಿ ತೆರಳುವ ಮಹಿಳಾ ವಿಶೇಷ ಬಸ್ ಉದ್ಘಾಟನೆ ನೆರೆವೆರಿಸಿ ಮಾತನಾಡಿ. ಮಹಿಳೆಯರ ಸುರಕ್ಷೀತ ಪ್ರಯಾಣಕ್ಕೆ ಮಹಿಳೆಯರಿಗೆ ವಿಶೇಷ ಬಸ್ ಬೀಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಈ ಸಂಧರ್ಬದಲ್ಲಿ ವಿಭಾಗಿಯ ಸಾರಿಗೆ ಅಧಿಕಾರಿ ಬಿ.ಡಿ ಜಾಧವ, ಆಡಳಿತಾಧಿಕಾರಿ ಜಾಹಜ್, ಘಟಕ ವ್ಯವಸ್ಥಾಪಕ ನೀತಿನ ಗಡದೆ, ಮುನ್ನಾಸಾಬ್ ಜೋಗಿನ, ಕಾರ್ಮಿಕ ಮುಖಂಡರಾದ ಐ.ಎಸ್ ಮದ್ವಾಳ, ಸಿ.ಎಸ್ ಬಿಡ್ನಾಳ, ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...