ಬಿಜೆಪಿ ಟಿಕೆಟ್‌ ಆಕಾಂಕ್ಷಿಯಲ್ಲಿ ನಾನು ಒಬ್ಬ : ಶಾಸಕ ಡಾ.ವಿಶ್ವನಾಥ

0
27
loading...

ಬೈಲಹೊಂಗಲ: ಬೈಲಹೊಂಗಲ ವಿಧಾನಸಭಾ ಮತ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಲ್ಲಿ ನಾನು ಒಬ್ಬ, ಆದರೆ ಪಕ್ಷ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು ಬಿಜೆಪಿ ಗೆಲುವಿಗೆ ಶ್ರಮಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವುದಾಗಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆದ ಮತಕ್ಷೇತ್ರದ ಅಭಿವೃದ್ದಿಗಾಗಿ ಪ್ರಣಾಳಿಕೆ ತಯಾರಿಯ ಜನಪರ ಶಕ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ನಾಲ್ಕುವರೆ ವರ್ಷಗಳಿಂದ ವಿರೋಧ ಪಕ್ಷದಲ್ಲಿದ್ದರೂ ನೂರಾರು ಕೋಟಿ ಅನುದಾನ ತಂದು ಕ್ಷೇತ್ರದ ನೀರಾವರಿ, ರಸ್ತೆ, ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ, ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳ ಅಭಿವೃದ್ದಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಕ್ಷೇತ್ರದ ಬೈಲಹೊಂಗಲ-ಮುನವಳ್ಳಿ ಮತ್ತು ಹಲಕಿ ಕ್ರಾಸ-ಗೋಕಾಕ ಸೇರುವ ರಸ್ತೆಗಳನ್ನು ಮೇಲ್ದರ್ಜಗೆ ಏರಿಸಲು ಕೇಂದ್ರ ಸಾರಿಗೆ ಸಚಿವ ನೀತಿನ ಗಡ್ಕರಿ ಭರವಸೆ ನೀಡಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಜನರಿಗೆ ಉತ್ತಮ ಆರೋಗ್ಯ ನೀಡಲು ಸುಮಾರು ರೂ.5 ಕೋಟಿ ಅನುದಾನದಲ್ಲಿ ಬೆಳವಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜಗೆ ಏರಿಸಲಾಗಿದ್ದು ಕೆಲವೇ ದಿನಗಳಲ್ಲಿ ಐದಾರು ವೈದ್ಯರ ತಂಡ, ಏಕ್ಸರೇ, ತುರ್ತು ನಿಗಾ ಘಟಕ ಪ್ರಾರಂಭವಾಗಲಿದ್ದು ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಈ ನಿಟ್ಟಿನಲ್ಲಿ ಸಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತಿಕರಿಸಲು ಕ್ರಮಕೈಗೊಳ್ಳಲಾಗಿದೆ. ಮುಂಬುರುವ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನದೊಂದಿಗೆ ಕ್ಷೇತ್ರದ ಜಮೀನುಗಳಿಗೆ ಹೋಗುವ ರಸ್ತೆ, ಕುಡಿಯುವ ನೀರು ಮತ್ತು ಅತ್ಯಾಧುನಿಕ ವಿದ್ಯುತ್‌ ಸಂಪರ್ಕಕ್ಕೆ ಕ್ರಮ ಕೈಗೊಳ್ಳಲಾಗವುದು ಎಂದರು.

ಆಧ್ಯಾತ್ಮ ಚಿಂತಕ ನಿಂಗಪ್ಪ ಬೂದಿಹಾಳ, ಮಾಜಿ ಕಸಾಪ ತಾಲೂಕಾ ಅಧ್ಯಕ್ಷ, ಸಾಹಿತಿ ಎಸ್‌.ಆರ್‌.ಕಮ್ಮಾರ, ನಿವೃತ್ತ ಪ್ರೋ.ಎಂ.ಎಂ.ನೇಗಿನಹಾಳ, ಕಲಾವಿದ ಸಿ.ಕೆ.ಮೆಕ್ಕೆದ ಮಾತನಾಡಿ, ಕ್ಷೇತ್ರದ ಅಭಿವೃದ್ದಿಗಾಗಿ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು. ವೇದಿಕೆ ಮೇಲೆ ನಿವೃತ್ತ ಸಾರಿಗೆ ಸಂಸ್ಥೆಯ ನೌಕರರ ಮುಖಂಡ ಬಿ.ಬಿ.ಸಂಗನಗೌಡರ, ರೈತ ಮುಖಂಡ ಮಲಕಾಜಪ್ಪ ಕುಡೋಳ್ಳಿ, ತೆರಿಗೆ ಸಲಹೆಗಾರ ಗಂಗಾಧರ ವಾಲಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಗೂಳಪ್ಪ ಹೊಸಮನಿ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ ಇದ್ದರು.
ಈ ಸಂದರ್ಭದಲ್ಲಿ ಕ್ಷೇತ್ರದ ನ್ಯಾಯವಾದಿಗಳು, ನಿವೃತ್ತ ನೌಕರರು, ವೈದ್ಯರು, ಮಾಜಿ ಸೈನಿಕರು, ಪ್ರಗತಿಪರ ರೈತರು, ಸ್ರ್ತೀ ಶಕ್ತಿ ಸಂಘದ ಪ್ರಮುಖರು, ಸಾಹಿತಿಗಳು, ವಿದ್ಯಾರ್ಥಿ ಮುಖಂಡರು, ರೀಕ್ಷಾ ಹಾಗೂ ವಾಹನ ಚಾಲಕರು, ಕೂಲಿ ಕಾರ್ಮಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದು.

loading...