ಬೈಕ್‌ ಸವಾರರ ಜೀವ ಉಳಿಸಲು ಹೆಲ್ಮೆಟ್ ಕಡ್ಡಾಯ: ಬೊಮ್ಮನಹಳ್ಳಿ

0
34
loading...

ಕನ್ನಡಮ್ಮ ಸುದ್ದಿ- ಧಾರವಾಡ: ಕುಟುಂಬಕ್ಕೆ ಆಧಾರ ಸ್ತಂಭ ಆದವರೇ ಅಪಘಾತದಲ್ಲಿ ಗಾಯಗೊಂಡಾಗ ಎದುರಾಗುವ ಪರಿಸ್ಥಿತಿ ನೋಡೋಕೆ ಆಗುವುದಿಲ್ಲ ಸಾರ್ವಜನಿಕÀರಿಗೆ ಅನುಕೂಲ ವಾಗುವ ಮತ್ತಷ್ಟೂ ಕಾರ್ಯಗಳು ನಡೆಯಬೇಕು. ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು. ಕಮೀಷನರೇಟ್‌ ಘಟಕದ ಸಂಚಾರಿ ಪೊಲೀಸ ಠಾಣೆ ಪೊಲೀಸ್‌ ಅಕಾರಿ ಮತ್ತು ಸಿಬ್ಬಂದಿಗಳಿಗೆ ಐಎಸ್‌ಐ ಮಾರ್ಕ ಹೆಲ್ಮೇಟ್‌ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೈಕ್‌ ಸವಾರರ ಜೀವ ಉಳಿಸಲು ಹೆಲ್ಮೆಟ್ ಕಡ್ಡಾಯ ಮಾಡಿದೆ, ಹೆಲ್ಮೆಟ್ ಇಲ್ಲದೇ ಸವಾರಿ ಮಾಡುವುದು ಆ ಕ್ಷಣ ರೋಮಾಂಚನ ಗೊಳಿಸಬಹುದೇ ಹೊರತು, ಅಪಘಾತವಾದರೆ ಜೀವನ ಉಳಿಸುವುದಿಲ್ಲ. ಸುರಕ್ಷತೆ ಕ್ರಮ ಜರುಗಿಸದಿದ್ದರೆ ಇಡೀ ಕುಟುಂಬದೊಂದಿಗೆ ಸಂತೋಷದಿಂದ ಬದುಕಲು ಆಗುವುದಿಲ್ಲ. ಪೊಲೀಸರು ತಾವು ಹೆಲ್ಮೆಟ್ ಧರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವುದು ಸಮಾಜಕ್ಕೆ ಮಾದರಿ. ಪೊಲೀಸ್ ಇಲಾಖೆ ಸಾರ್ವಜನಿಕ ಸೇವಕ ಹಾಗೂ ಸಾರ್ವಜನಿಕ ಸ್ನೇಹಿ ವಾತಾವರಣ ನಿರ್ಮಾಣ ಮಾಡುತ್ತಿರುವುದು ಸಂತಸದ ಸಂಗತಿ ಪೊಲೀಸರು ಜನ ಸ್ನೇಹಿಯಾಗಿರಬೇಕು ಎಂದು ಹೇಳಿದರು.
ಪೊಲೀಸ ಆಯುಕ್ತ ಎಂ.ಎನ್‌. ನಾಗರಾಜ ಮಾತನಾಡಿ, ಅಪಘಾತಗಳು ಹೇಳಿ ಕೇಳಿ ಬರುವುದಿಲ್ಲ, ಒಂದು ಕ್ಷಣ ಮೈಮರೆತರೆ ಅಪಘಾತಗಳು ಸಂಭವಿಸುತ್ತವೆ. ಹೆಲ್ಮೇಟ್‌ ಧರಿಸದ ಬೈಕ ಸವಾರರಿಗೆ ಇನ್ನು ಮುಂದೆ ಪೆಟ್ರೋಲ್‌ ಹಾಕದಂತೆ ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ಮನವಿ ಮಾಡಲಾಗಿದೆ.
ನಮ್ಮ ಮನೆ ಶುದ್ದವಾಗಿಟ್ಟು ಕೊಂಡು ಇತರರಿಗೆ ಪಾಠ ಹೇಳಬೇಕು ಎಂಬಂತೆ ಧಾರವಾಡ ಟ್ರಾಫಿಕ್ ಪೊಲೀಸರು ಹೆಲ್ಮೇಟ್ ಧರಿಸಲು ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದರು. ಡಿಸಿಪಿ ರೇಣುಕಾ ಸುಕುಮಾರ ಮಾತನಾಡಿದರು. ಹೆಲ್ಮೇಟ್‌ಗಳನ್ನು ದಾನವಾಗಿ ನೀಡಿದ ದಾನಿಗಳಿಗೆ ಸನ್ಮಾನಿಸಲಾಯಿತು. ಡಿಸಿಪಿ ಬಿ.ಎಸ್‌. ನೇಮಗೌಡ ಸ್ವಾಗತಿಸಿದರು. ಸಂಚಾರಿ ಇನ್ಸಪೆಕ್ಟರ ಮುರುಗೇಶ ಚನ್ನಣ್ಣವರ ನಿರೂಪಿಸಿದರು. ಎಸಿಪಿ ರುದ್ರಪ್ಪ ಸೇರಿದಂತೆ ಇಲಾಖೆ ಅಕಾರಿಗಳು ಮತ್ತು ಸಿಬ್ಬಂದಿಗಳು, ಸಾರ್ವಜನಿಕರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...