ಬ್ರಾಹ್ಮಣರ ಅವಹೇಳನ ಖಂಡಿಸಿ ಪ್ರತಿಭಟನೆ

0
40
loading...

 

ಅಥಣಿ 03: ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಕೆಲವು ಪುಂಡ ಪೋಕರಿಗಳು ಕೂಡಿಕೊಂಡು ಬ್ರಾಹ್ಮಣ ಸಮುದಾಯ ದವರನ್ನು ಕುರಿತು ಅತ್ಯಂತ ಕೀಳು ಭಾಷೆಯಲ್ಲಿ ಅವಹೇಳನ ಮಾಡಿದ್ದರ ವಿರುದ್ಧ ಖಂಡಿಸಿ ಶನಿವಾರ ತಾಲೂಕಾ ಅಖಿಲ ಬ್ರಾಹ್ಮಣರ ಸಮಾಜದವರಿಂದ ಪ್ರತಿಭಟನೆ ನಡೆಯಿತು.ಪಟ್ಟಣದ ವಿವಿಧ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಪಾಸಿಕಟ್ಟಿ ಹತ್ತಿರ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ ಬ್ರಾಹ್ಮಣ ಸಮಾಜದ ಮುಖಂಡ ಅರವಿಂದ ದೇಶಪಾಂಡೆ ಮಾತನಾಡಿ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಯಾವದೇ ಸಮಸ್ಯೆ ಬಂದರೂ ಅದಕ್ಕೆ ಬ್ರಾಹ್ಮಣರ ಸಮುದಾಯವನ್ನು ಹೊಣೆ ಮಾಡಿ ಅವಹೇಳನ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.ಹುಬ್ಬಳ್ಳಿಯ ಕುಲಕರ್ಣಿ ಹಕ್ಕಲ ಪ್ರದೇಶದಲ್ಲಿಯ ಘಟನೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೋಳ್ಳಬೇಕು.ಈ ಘಟನೆಯ ದೃಶ್ಯಗಳನ್ನು ಚಿತ್ರಿಕರಿಸಿ ಸಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ಮೇಲೆ ಸಹ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ಸಂಧರ್ಭದಲ್ಲಿ ತಹಸಿಲ್ದಾರ ಪರವಾಗಿ ಗ್ರೇಡ್‌ 2 ತಹಸಿಲ್ದಾರ ರಾಜು ಬುರ್ಲಿ ಮತ್ತು ಶಾಸಕ ಲಕ್ಷ್ಮಣ ಸವದಿ ಅವರಿಗೆ ಪ್ರತೇಕ ಮನವಿ ಸಲ್ಲಿಸಿದರು. ಶಾಸಕ ಲಕ್ಷ್ಮಣ ಸವದಿ ಮನವಿ ಸ್ವೀಕರಿಸಿ ಮಾತನಾಡಿ ತಾವು ಸಹ ಈ ಘಟನೆಯನ್ನು ಖಂಡಿಸುತ್ತೇನೆ. ನಮ್ಮ ಪಕ್ಷದ ನಾಯಕ ಜಗದೀಶ ಶೆಟ್ಟರ ಅವರ ಸಂಗಡ ಚರ್ಚೆ ಮಾಡಿ ಆಧೀವೇಶದಲ್ಲಿ ಪ್ರಸ್ತಾವಿಸುವದಾಗಿ ಹೇಳಿದರು.ಈ ವೇಳೆ ಅಥಣಿ ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀರಾಮ ಕಟ್ಟಿ, ಡಾ.ಆರ್‌.ಜಿ.ಗುಡಿ, ಎಮ್‌.ಜಿ.ಜೋಶಿ, ಮಲ್ಲಿಕಾರ್ಜುನ ಕನಶೆಟ್ಟಿ, ಪುರಸಭೆಯ ಅಧ್ಯಕ್ಷ ಪ್ರಕಾಶ ಭಜಂತ್ರಿ, ಪ್ರಭಾಕರ ಚವ್ಹಾನ,ದಿಲೀಪ ಕಾಂಬಳೆ, ಅಮರ ದುರ್ಗನ್ನವರ,ರಾಜು ಬಲಬುಲೆ, ಮುಂತಾದವರು ಉಪಸ್ಥಿತರಿದ್ದರು.

loading...