ಬ್ರಾಹ್ಮಣರ ಟೀಕೆ ವಿರುದ್ಧ ಸಮಾಜದ ಕಳವಳ: ನಿರ್ಬಂಧಕ್ಕೆ ಆಗ್ರಹ

0
21
loading...

ಬಾಗಲಕೋಟೆ: ಅನಗತ್ಯವಾಗಿ ಬ್ರಾಹ್ಮಣರನ್ನು ನಿಂದಿಸುವ, ಟೀಕಿಸುವ ಪ್ರವೃತ್ತಿಗೆ ನಿರ್ಬಂಧ ಹೇರಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು, ಬ್ರಾಹ್ಮಣ ಸಮುದಾಯದ ಕಲ್ಯಾಣಕ್ಕಾಗಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ನೆರವಾಗಬೇಕೆಂದು ಬಾಗಲಕೋಟೆ ಜಿಲ್ಲಾ ಬ್ರಾಹ್ಮಣ ಸಮ್ಮೆೀಳನ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ರವಿವಾರ ಸಂಜೆ ಮುಕ್ತಾಯಗೊಂಡ ಸಮ್ಮೆೀಳನದಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು ಬುದ್ಧಿ ಜೀವಿಗಳೆಂದು ಹೇಳಿಕೊಂಡ ಕೆಲ ಬ್ರಾಹ್ಮಣರು ಸೇರಿ ಅನಗತ್ಯವಾಗಿ ಬ್ರಾಹ್ಮಣರನ್ನು ಟೀಕೆ ಮಾಡುತ್ತಿದ್ದು ಇದರ ವಿರುದ್ದ ಸಮಾಜ ಸಂಘರ್ಷ ಬಯಸುವದಿಲ್ಲ, ಸರಕಾರ ಸಾಮರಸ್ಯ, ಸಹಿಷ್ಣುತೆಗಾಗಿ ಇಂತಹ ಟೀಕೆಗಳಿಗೆ ಕಡಿವಾಣ ಹಾಕಬೇಕು, ಅನಗತ್ಯ ನಿಂದನೆಗಳ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುವ, ಶಾಂತಿಯನ್ನು ಕದಡುವ ಶಕ್ತಿಗಳನ್ನು ಸರಕಾರ ಕಟ್ಟುನಿಟ್ಟಾಗಿ ಮಟ್ಟ ಹಾಕಬೇಕೆಂದು ಆಗ್ರಹಿಸಲಾಯಿತು.
ದೇಶದ 7 ರಾಜ್ಯಗಳಲ್ಲಿ ಬ್ರಾಹ್ಮಣರ ಅಭಿವೃದ್ಧಿಗಾಗಿ ನಿಗಮಗಳು ಸ್ಥಾಪನೆಯಾಗಿ ಪ್ರೋತ್ಸಾಹಿಸುತ್ತಿರುವ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ನಿಗಮ ಸ್ಥಾಪಿಸಿ ಉತ್ತೇಜಿಸಬೇಕೆಂದು ಒತ್ತಾಯಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ಶಿP್ಷÀಣಕ್ಕೆ ಉತ್ತೆೀಜನ ನೀಡುವ ಕಾರ್ಯಕ್ರಮ ರೂಪಿಸಲು ಸಹ ಒತ್ತಾಯಿಸಲಾಯಿತು.
ಸಮಾರೋಪಕ್ಕೆ ಮುನ್ನ ನಡೆದ ಚಿಂತನ ಗೋಷ್ಠಿಯಲ್ಲಿ ಚೆನೈನ ಪಂ. ಪ್ರವೀಣಾಚಾರ್ಯ ಹುನಗುಂದ ಅವರು ಮಾತನಾಡಿ ಮನೆಯಲ್ಲಿ ಸಂಸ್ಕಾರದ ಕೊರತೆ, ಬಾಹ್ಯ ಜಗತ್ತಿನಲ್ಲಿ ಆಕರ್ಷಣೆಯ ಫಲವಾಗಿ ಲವ್‌ಜಿಹಾದ್‌ನಂತಹ ಘಟನೆಗಳು ನಡೆಯುತ್ತಿವೆ, ಇದರ ವಿರುದ್ಧ ಸಾಮಾಜಿಕ ಆಂದೋಲನ ಪ್ರತಿ ಮನೆ ಮನೆಯಿಂದ ಸಂಸ್ಕಾರದ ರೂಪದಲ್ಲಿ ಆರಂಭವಾಗಬೇಕೆಂದರು. ಬೆಂಗಳೂರಿನ ಪಂ. ಶ್ರೀಕಾಂತಾಚಾರ್ಯ ಮುಕ್ಕುಂದಿ ಅವರು ಸಾಮಾಜಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸಂವಾದಗಳು, ಚರ್ಚೆಗಳು ಮುಕ್ತವಾಗಿ ನಡೆಯಬೇಕೆಂದರು. ಭೀಮಸೇನಾಚಾರ್ಯ ಪಾಂಡುರಂಗಿ ರಘೋತ್ತಮಾಚಾರ್ಯ ನಾಗಸಂಪಗಿ ಅವರು ಬ್ರಾಹ್ಮಣರು ಧಾರ್ಮಿಕ ಆಚರಣೆಯ ಮೂಲಕ ಸಂಸ್ಕಾರ ಪಡೆಯಬೇಕು, ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಶಿP್ಷÀಣಕ್ಕೆ ಉತ್ತೆೀಜಿಸಬೇಕೆಂದರು. ಡಾ. ಜಯತೀರ್ಥ ದೇಶಪಾಂಡೆ ಅವರು ನಿರ್ಣಯಗಳನ್ನು ಮಂಡಿಸಿದರು.
ವಿಶ್ರಾಂತ ಕುಲಪತಿ ಡಾ. ಮೀನಾ ಚಂದಾವರಕರ ವಿವಿಧ ಕ್ಷೆೀತ್ರಗಳಲ್ಲಿ ಸಮಾಜದ ಸಾಧನೆ ಕುರಿತು ಮಾತನಾಡಿದರು. ಅಧ್ಯP್ಷÀತೆ ವಹಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯP್ಷÀ ಡಾ. ಗಿರೀಶ ಮಾಸೂರಕರ ಅವರು ಸಮುದಾಯದ ಸಂಘಟನೆ ನಿಟ್ಟಿನಲ್ಲಿ ಈ ಸಮ್ಮೆೀಳನ ಯಶಸ್ವಿ ಎಂದರು.
ವಿವಿಧ ತಾಲೂಕುಗಳ ಅಧ್ಯP್ಷÀರಾದ ಸೋನಪ್ಪಿ ಕುಲಕರ್ಣಿ, ಹುಲ್ಯಾಳಕರ, ವಿ.ವೈ. ಭಾಗವತ, ಅಶೋಕ ಜೋಶಿ, ದೇಶಪಾಂಡೆ, ಪುಟ್ಟು ಮಳಗಿ, ಅನಂತ ಮಳಗಿ ಮತ್ತಿತರರನ್ನು ಸನ್ಮಾನಿಸಲಾಯಿತು. ಎಸ್‌.ಬಿ. ಸತ್ಯನಾರಾಯಣ, ಶ್ರೀಲತಾ ಹೆರಂಜಲ, ಸಂದೀಪ ಕುಲಕರ್ಣಿ, ಜಯಂತ ಕುರಂದವಾಡ, ವಿನೋದ ದೇಶಪಾಂಡೆ, ಡಾ. ಆರ್‌.ಎನ್‌. ಹೆರಕಲ್ಲ, ಕಂಚಿ, ಇತರ ಗಣ್ಯರು ಉಪಸ್ಥಿತರಿದ್ದರು.

loading...