ಭೂತೆ ನಿವಾಸಕ್ಕೆ ಹಾಲಪ್ಪ ಭೇಟಿ : ಬಿಜೆಪಿಗೆ ಆಹ್ವಾನ

0
27
loading...

ಯಲಬುರ್ಗಾ: ಇದೇ ಫೆ.26 ರಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಹಿರಿಯ ಧುರೀಣ ಪಟ್ಟಣದ ಬಸವಲಿಂಗಪ್ಪ ಭೂತೆ ಹಿನ್ನೆಲೆ ಮಾಜಿ ಎಂಎಲ್ಸಿ ಹಾಲಪ್ಪ ಆಚಾರ್ ಸ್ವ-ನಿವಾಸಕ್ಕೆ ಭೇಟಿ ಬಿಜೆಪಿ ಪಕ್ಷಕ್ಕೆ ಆಹ್ವಾನ ನೀಡಿದರು.

ಬಳಿಕ ವಿಧಾನ ಪರಿಷತ್ ಮಾಜಿ ಸದಸ್ಯ ಹಾಲಪ್ಪ ಆಚಾರ್ ಮಾತನಾಡಿ, ಕಾಂಗ್ರೆಸ್‍ನಲ್ಲಿ ಸುಮಾರು 40 ವರ್ಷಗಳ ಕಾಲ ಪಕ್ಷ ನಿಷ್ಠೆಯಿಂದ ಶ್ರಮಿಸಿದ ಭೂತೆ ಅವರು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪಕ್ಷಕ್ಕಾಗಿ ಆಹ್ವಾನಿಸಿದ್ದು, ಬಲ ಪಡಿಸಿದಂತಾಗುತ್ತದೆ ಎಂದರು.
ಈ ವೇಳೆಯಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಸಿ.ಎಚ್.ಪಾಟೀಲ್, ಎ.ಜಿ.ಭಾವಿಮನಿ, ಅರವಿಂದಗೌಡ ಪಾಟೀಲ್, ಬಿಜೆಪಿ ತಾಲೂಕಾಧ್ಯಕ್ಷ ರತನ ದೇಸಾಯಿ, ವಕ್ತಾರ ವೀರಣ್ಣ ಹುಬ್ಬಳ್ಳಿ, ಈರಪ್ಪ ಕುಡಗುಂಟಿ, ನೀಲನಗೌಡ ತಳುವಗೇರಿ, ಮಹೇಶ ಭೂತೆ, ಅನೇಕ ಮುಖಂಡರು ಇತರರು ಇದ್ದರು.

loading...