ಮಟನ್ ಫ್ಯಾಕ್ಟರಿಗೆ ಶ್ಯಾರ್ಟ ಸಕ್ಯೂಟ್‍ದಿಂದ ಬೆಂಕಿ….

0
28
loading...

ಮಟನ್ ಫ್ಯಾಕ್ಟರಿಗೆ ಶ್ಯಾರ್ಟ ಸಕ್ಯೂಟ್‍ದಿಂದ ಬೆಂಕಿ
ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ಆಂಟೋನಗರದಲ್ಲಿರುವ ಮಟನ್ ಫ್ಯಾಕ್ಟರಿಗೆ ವಿದ್ಯುತ್ ಶ್ಯಾರ್ಟ ಸಕ್ಯೂಟ್‍ನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ  ವಸ್ತು ನಾಶವಾಗಿದೆ.
ರವಿವಾರ ಮುಂಜಾನೆ 9ಗಂಟೆ ಸುಮಾರಿಗೆ ಆಂಟೋನಗರದಲ್ಲಿರುವ ಎಂಜನ್ ಇಂಡಸ್ಟ್ರೀಯಲ್ ಮಟನ್ ಪ್ಯಾಕ್ಟರಿಯ ದಾಸ್ತಾನು ಮಳಿಗೆಯಲ್ಲಿ ರಟ್ಟಿನ ಬಾಕ್ಸ್ ಇರುವ ಕಾಣದ ಆಕಸ್ಮಿಕ ಶಾರ್ಟ ಸಕ್ಯೂಟ್ ನಿಂದ ಬೆಂಕಿ ತಗುಲಿದೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದವರು ಬೆಂಕಿ ನಂದಿಸಲು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಅಲ್ಲದೆ ಬೆಂಕಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಂದಾಜಿಸಲಾಗಿದೆ.

loading...