ಮತಕ್ಕಾಗಿ ಸ್ಲಂ ವಾಸ್ತವ್ಯದ ಡೋಂಗಿ ನಾಟಕ: ಮಳಗಿ

0
14
loading...

ಕನ್ನಡಮ್ಮ ಸುದ್ದಿ- ಧಾರವಾಡ: ಬಿಜೆಪಿ ನಾಯಕರು ಚುನಾವಣೆ ಹತ್ತಿರ ಬರುತ್ತಿದ್ದಂತೆ ಸ್ಲಂ ನಿವಾಸಿಗಳ ಮತಕ್ಕಾಗಿ ಸ್ಲಂ ವಾಸ್ತವ್ಯದ ಡೋಂಗಿ ನಾಟಕ ನಡೆಸಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್‌ ಯುಥ್‌ ಕಮೀಟಿ ಕಾರ್ಯದರ್ಶಿ ಸ್ವಾತಿ ಮಳಗಿ ತಿಳಿಸಿದರು. ಪತ್ರಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಅವರಿಗೆ ಸ್ಲಂ ನಿವಾಸಿಗಳ ಬಗ್ಗೆ ಕಾಲಜಿ ಇದ್ದರೆ, ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸುವದನ್ನು ಸ್ಥಗಿತಗೊಳಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಪತ್ರ ಬರೆದಿರುವ ಅರವಿಂದ ಬೆಲ್ಲದರವರ ಮೇಲೆ ಕ್ರಮ ಕೈಗೊಳ್ಳಲಿ ಎಂದರು.
ಧಾರವಾಡದಲ್ಲಿ ಒಟ್ಟು ಘೋಷಿತ ಸ್ಲಂಗಳು 36 ಇದ್ದು, 20 ಸರ್ಕಾರಿ ಕೊಳಚೆ ಪ್ರದೇಶಗಳಿವೆ. ಆದರೆ ಬೆಲ್ಲದ ಈ ಹಿಂದೆ ಹಕ್ಕು ಪತ್ರ ನೀಡುವ ಕುರಿತು ಸರ್ವೇ ಕಾರ್ಯ ಸ್ಥಗಿತ ಗೊಳಿಸುವಂತೆ ಪತ್ರ ಬರೆದಿದ್ದಾರೆ. ಈಗ ಆ ನಿವಾಸಿಗಳ ಜೊತೆ ವಾಸ್ತವ್ಯದ ಡೋಂಗಿ ನಾಟಕ ಬಿಟ್ಟು ಶಾಸಕರ ವಿರುದ್ದ ಪಕ್ಷದಲ್ಲಿ ಕ್ರಮ ಕೈಗೊಳ್ಲುವುದರ ಮುಲಕ ಸ್ಲಂ ನಿವಾಸಿಗಳ ಕುರಿತು ತಮಗಿರುವ ಕಾಳಜಿ ತೋರಿಸಲಿ ಎಂದರು. ಬಿಜೆಪಿ ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಯಾಕೆ ಹಕ್ಕು ಪತ್ರ ಕೊಡಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಈಗಾಗಲೇ ರು. 2300 ಕೋಟಿ ಸಾಲಮನ್ನಾ ಮಾಡಿದ್ದಲ್ಲದೆ ಹಲವು ಸೌಲಭ್ಯಗಳನ್ನು ಒದಗಿಸಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರೇಣುಕಾ ಕೆಂಗಾನೂರ, ಹನುಮೇಶ ಪಡಸಲಗಿ, ಮೆಹಬೂಬ ರಾಮದುರ್ಗ, ಡಾ. ಎಂ. ಬಿ. ಕಲಶೆಟ್ಟಿ ಉಪಸ್ಥಿತರಿದ್ದರು.

loading...