ಮತಕ್ಷೇತ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಶಿಕಲಾ ಜೊಲ್ಲೆ

0
29
loading...

ಕನ್ನಡಮ್ಮ ಸುದ್ದಿ ಚಿಕ್ಕೋಡಿ 18: ಮಾಣಕಾಪೂರ ಗ್ರಾಮಕ್ಕೆ ಮೂಲಭೂತ ಸೌಲಭ್ಯವಾದ ಕುಡಿಯುವ ನೀರು ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿದರು. ತಾಲೂಕಿನ 2017-18 ನೇ ಸಾಲಿನಲ್ಲಿ ಮಾಣಕಾಪೂರ ಗ್ರಾಮವನ್ನು ಗ್ರಾಮವಿಕಾಸ ಯೋಜನೆಯಡಿಯಲ್ಲಿ ಆಯ್ಕೆ ಮಾಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಅಲ್ಲದೇ ಮನುಷ್ಯನಿಗೆ ನೀರಿನ ಸೌಲಭ್ಯ ಅತ್ಯವಶ್ಯಕವಾಗಿದ್ದು, ಆ ನಿಟ್ಟಿನಲ್ಲಿ ಈ ಭಾಗದಲ್ಲಿರುವ ನೀರಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಂಡು ಗ್ರಾಮಕ್ಕೆ ಶಾಶ್ವತವಾಗಿ ನೀರಿನ ಯೋಜನೆಯೊಂದನ್ನು ಅನುಷ್ಠಾನಗೊಳಿಸುವ ಕುರಿತು ಕಳೆದ ಚುನಾವಣೆಯಲ್ಲಿ ಭರವಸೆ ನೀಡಲಾಗಿದ್ದು, ಅದರ ಪ್ರತಿಫಲವಾಗಿ ಇಂದು ಸುಮಾರು 2.90 ಕೋಟಿ ರೂ. ಗಳ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿಸಿ ಜಲಕ್ರಾಂತಿಯನ್ನೇ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಇನ್ನೂ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸುವುದರೊಂದಿಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಇಡೀ ಕ್ಷೇತ್ರವನ್ನು ಮಾದರಿಯನ್ನಾಗಿಸಲು ಪ್ರಯತ್ನಿಸಲಾಗುವುದೆಂದು ಹೇಳಿದರು. ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಆಶ್ವಾಸನೆಗಿಂತ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು. ಜಿ.ಪಂ.ಸದಸ್ಯರಾದ ಸುಮಿತ್ರಾ ಉಗಳೆ ಮಾತನಾಡಿದರು. ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸಂಚಾಲಕರಾದ ರಾಮಗೌಡ ಪಾಟೀಲ, ಎಪಿಎಂಸಿ ಸದಸ್ಯ ನೀತೇಶ ಖೋತ, ಜಿ.ಪಂ. ಸದಸ್ಯ ದಾದಾ ನರಗಟ್ಟೆ, ತಾ.ಪಂ ಸದಸ್ಯೆ ಅನುರಾಧಾ ಚೌಗುಲೆ, ದಾದಾ ಜಾಧವ, ಗ್ರಾ.ಪಂ. ಸದಸ್ಯರಾದ ಶ್ರೀಕಾಂತ ಕುಂಬಾರ ಜಯಸಿಂಗ ಲೋಂಡೆ, ಶ್ರೀಕಾಂತ ಲೋಂಡೆ, ದಾದು ಪೂಜಾರಿ, ಬಾಜಿರಾವ ಕೋಳಿ, ಶಂಕರ ಪೂಜಾರಿ, ದಯಾನಂದ ಸ್ವಾಮಿ, ದೀಪಕ ಮಾಳಿ, ಯುನುಸ್‌ ಮುಲ್ಲಾ, ಕವಿತಾ ಲೋಂಡೆ, ಮಂಗೇಶ ಅರಗೆ, ಪ್ರದೀಪ ಚೌಗುಲೆ, ಪ್ರಕಾಶ ಚೌಗುಲೆ, ಪ್ರಕಾಶ ಪಾಟೀಲ, ಅಪಾರ ಸಂಖ್ಯೆಯಲ್ಲಿ ಮಾಣಕಾಪೂರ ಗ್ರಾಮಸ್ಥರು ಹಾಗೂ ಮುಂತಾದವರು ಉಪಸ್ಥಿತರಿದ್ದರು.

loading...