ಮಲ್ಲಿಕಾರ್ಜುನ ನಾಗಪ್ಪನಿಗೆ ಕಾಂಗ್ರೆಸ್‌ ಟಿಕೇಟ್‌ ಖಚಿತ: ನಾಯಕ

0
15
loading...

ಗಂಗಾವತಿ: ಮಾಜಿ ಕಂದಾಯ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪನವರಿಗೆ ಈ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಲು ತಮ್ಮ ಪಕ್ಷ ಟಿಕೇಟು ನೀಡುವ ಸಾಧ್ಯತೆ ಇದೆ ಎಂದು ರಾಯಚೂರು ಸಂಸದ, ಕಾಂಗ್ರೆಸ್‌ ಪಕ್ಷದ ಬಳ್ಳಾರಿ ಉಸ್ತುವಾರಿ ಬಿ.ವಿ.ನಾಯಕ ತಿಳಿಸಿದರು.
ಶನಿವಾರ ಮಲ್ಲಿಕಾರ್ಜುನರ ನಿವಾಸಕ್ಕೆ ಆಗಮಿಸಿದ್ದ ಅವರು ರಾಜಕೀಯ ಕುರಿತು ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನನಾಗಪ್ಪನವರು ಕಂದಾಯ ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಕ್ಷದಲ್ಲಿ ಅವರು ಹಿರಿಯರ ಸ್ಥಾನದಲ್ಲಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಪಕ್ಷದ ಹೈಕಮಾಂಡ, ಟಿಕೇಟು ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದರು. ವಿಧಾನಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ ಕಾಂಗ್ರೆಸ್‌ ಪಕ್ಷ ತೊರೆಯಬಾರದಿತ್ತು ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್‌ ಉತ್ತಮವಾಗಿದೆ ಎಂದು ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು. ನಗರಸಭೆ ಸದಸ್ಯ ರಾಧಾ ಐಲಿಯವರ ಪತಿ ಬಸವರಾಜ ಐಲಿ, ಮಾಂತಗೊಂಡ ಸರ್ವೇಶ್‌, ಮಾಂತಗೊಂಡ ರವೀಂದ್ರನಾಥ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ ಇದ್ದರು.

loading...