ಮಹರ್ಷಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಯಾದವಾಡ

0
40
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ವಾಲ್ಮೀಕಿ ಮಹರ್ಷಿಗಳು ರಾಮಾಯಣ ಕೃತಿ ರಚನೆ ಮಾಡಿದ್ದರಿಂದ ನಾವೇಲ್ಲರೂ ರಾಮಾಯಣದ ಸಾಹಿತ್ಯವನ್ನು ತಿಳಿಯುವಂತಾಗಿದೆ. ಅವರ ತತ್ವವಾದಶÀರ್ಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮಾಜಿ ಶಾಸಕ ಹಾಗೂ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಮುದಕವಿ ಗ್ರಾಮದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಹಾಗೂ ಬೇಡರ ಕಣ್ಣಪ್ಪ ಜಾತ್ರಾ ಮಹೋತ್ಸವ, ಕರ್ನಾಟಕ ರಾಜ್ಯ ವಾಲ್ಮೀಕಿ ನೌಕರರ ಸಮ್ಮೇಳನ ಹಾಗೂ ವಾಲ್ಮೀಕಿ ಯುವಪಡೆ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜವು ಒಂದು ಸಣ್ಣ ಸಮುದಾಯವಾಗಿದ್ದು, ಅರ್ಥಿಕವಾಗಿ, ಸಮಾಜೀಕ, ರಾಜಕೀಯವಾಗಿ ಸೂಕ್ತವಾದ ಸ್ಥಾನ ಮಾನ ದೊರೆಯಬೇಕಾಗಿದೆ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಾಲ್ಮೀಕಿ ಜಯಂತಿ ಆಚರಣೆ ಮಾಡಲು ಅನುಮತಿ ನೀಡಿದ್ದೆವೆ. ತಾಲೂಕಿನಲ್ಲಿ ನಾನು ಅಧಿಕಾರದಲ್ಲಿದ್ದಾಗ ಅನೇಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದೇನೆ ಎಂದು ಹೇಳಿದರು.
ಬಿಜೆಪಿ ಮುಖಂಡ ರಮೇಶ ಪಂಚಕಟ್ಟಿಮಠ ಡಾ.ಚಂದ್ರು ತಳವಾರ ರಚನೆಯ ಅನುಸಂದಾನ ಕೃತಿ ಬಿಡುಗಡೆ ಮಾಡಿ ಮಾತನಾಡಿ ತಾಲೂಕಿನಲ್ಲಿ ಇಂತಹ ಉದಯೋನ್ಮುಕ ಕವಿಗಳಿಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಿದರೆ ಸಾಹಿತ್ಯಾಸಕ್ತರಿಗೆ ಅನೂಕೂಲವಾಗುತ್ತದೆ ಹಾಗೂ ತಾಲೂಕಿನ ಕೀರ್ತಿ ಹೆಚ್ಚಿಸುತ್ತದೆ ಎಂದರು.
ಕ್ಷೇತ್ರ ಶಿಕ್ಷಾಧಿಕಾರಿ ಹನಮಂತಗೌಡ ಮಿರ್ಜಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು, ಬೇಡ ಜನಾಂಗದವರು ಧೀರ ಸೋರರು ಶಕ್ತಿ ಶಾಲಿಗಳು ನಂಬಿಗಸ್ತರು ಆಗಿದ್ದು ಸಮಾಜವು ಶುಭದ್ರವಾಗಿದೆ ಕಾರಣ ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆಂದು ಹೇಳಿದರು.
ಸಾನಿಧ್ಯ ಪ್ರಸನ್ನಾನಂದ ಪರಿ ಮಹಾಸ್ವಾಮಿಗಳು ವಾಲ್ಮೀಕಿ ಗುರು ಪೀಠ ರಾಜನಹಳ್ಳಿ, ಕಡಕೋಳ, ಮುದಕವಿ ವೀರಕ್ತಮಠದ ಸಚ್ಚಿದಾನಂದ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು, ವಾಲ್ಮೀಕಿ ಸಮಾಜದ ಮುಖಂಡರಾದ ಕಾಳಪ್ಪ ಹೂವನ್ನವರ, ರಂಗಪ್ಪ ತಳವಾರ, ಮಾರುತಿ ಪೂಜೇರ, ವೆಂಕನಗೌಡ ಪಾಟೀಲ, ರೈತ ಮುಖಂಡ ಜಗದೀಶ ದೇವರಡ್ಡಿ ಸೇರಿದಂತೆ ಮುಂತಾದವು ಉಪಸ್ಥಿತರಿದ್ದರು
ಪಿ.ಡಿ.ಕಾಲವಾಡ ಸ್ವಾಗತಿಸಿದರು. ಎಸ್‌.ಬಿ.ಏಣಿ, ಎನ್‌ ಗೋಣಿಬಸಪ್ಪ ನಿರೂಪಿಸಿದರು. ಅಶೋಕ ಏಣಿ ವಂದಿಸಿದರು.

loading...