ಮಹಿಳೆಯರ ಸ್ವಾವಲಂಬನೆ ಬದುಕಿಗೆ ಹೈನುಗಾರಿಕೆ: ಪಟ್ಟಣ

0
37
loading...

ರಾಮದುರ್ಗ: ತಾಲೂಕಿನ ಇಡಗಲ್‌ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ಶಾಸಕರ ಅನುದಾನದಲ್ಲಿ ನಿರ್ಮಿಸಿದ್ದು ರಾಜ್ಯದಲ್ಲಿಯೇ ಮೊದಲ ಸಂಘ ಎಂಬ ಹೆಗ್ಗಳಿಗೆ ಪಾತ್ರವಾಗಿದೆ ಎಂದು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಇಡಗಲ್ಲ ಗ್ರಾಮದಲ್ಲಿ ಶಾಸಕರ ಅನುದಾನ ನಿರ್ಮಾಣಗೊಂಡ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಹೈನುಗಾರಿಕೆಗೆ ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಲೀಟರ್‌ ಹಾಲಿಗೆ 4 ಪ್ರೋತ್ಸಾಹ ಧನ ನೀಡುತ್ತಿದ್ದರಿಂದ ಇಂದು ಹಾಲು ಉತ್ಪಾದನೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹಾಲು ಒಕ್ಕೂಟದಿಂದ ತಾಲೂಕಿನ ಅನೇಕ ಕಡೆ ಹಾಲು ಇತರ ಉತ್ಪನ್ನಗಳ ಮಾರಾಟ ಮಳಿಗೆ ಸ್ಥಾಪಿಸಲಾಗಿದೆ. ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳ ಶಾಲಾ ಹಾಜರಾತಿ ಸಂಖ್ಯೆ ಹೆಚ್ಚಾಗಿರುವುದರ ಜೊತೆಗೆ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಅವರು ಹೇಳಿದರು.
ಬೆಳಗಾವಿ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಜಿ.ಆರ್‌.ಮಣ್ಣೇರಿ ಮಾತನಾಡಿ, ಕ್ಷೀರಭಾಗ್ಯ ಹಾಗೂ ಕ್ಷೀರಧಾರೆ ಯೋಜನೆಗಳು ಹೈನೋಧ್ಯಮಕ್ಕೆ ಹಾಲು ಉತ್ಪಾದಕರಿಗೆ ವರದಾನವಾಗಿದೆ. ಹಾಲು ಒಕ್ಕೂಟ ಸಾರ್ವಜನಿಕರಿಗೆ ಗುಣಮಟ್ಟದ ಹಾಲು ಪೂರೈಸುತ್ತಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷೆ ಪಾರ್ವತಿ ಗೊರವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರತ್ನವ್ವ ಬರದೇಲಿ, ಡಾ.ವಿ.ಕೆ.ಜೋಶಿ, ಶೋಭಾ ಎಸ್‌.ಕೆ, ಡಾ.ಡಿ.ಸಿ ಜೋಶಿ, ಸಂಜೀವ ತಳವಾರ, ಶಿವಕುಮಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

loading...