ಮಾಗಡಿ ಕೆರೆ ಅಭಿವೃದ್ಧಿಗೆ 3 ಕೋಟಿ ಅನುದಾನ: ದೊಡ್ಡಮನಿ

0
24
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ತಾಲೂಕಿನ ಮಾಗಡಿ ಕೆರೆಯನ್ನು 3 ಕೋಟಿ ರೂ. ಅನುದಾನದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆಯ ಸಂಸದೀಯ ಕಾರ್ಯದರ್ಶಿ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಶುಕ್ರವಾರ ಪಂಚಾಯತ ರಾಜ ಇಲಾಖೆಯಿಂದ ಮಾಗಡಿ ಕೆರೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಈ ಕೆರೆ 134.15 ಎಕರೆ ವಿಸ್ತಿರ್ಣ ಹೊಂದಿದ್ದು, ಚಳಿಗಾಲಕ್ಕೆ ಜಮ್ಮು ಕಾಶ್ಮೀರ, ಲಡಾಕ, ಟಿಬೆಟ್‌, ಮಲೇಷಿಯಾ, ಶ್ರೀಲಂಕಾ, ಪಾಕಿಸ್ತಾನ, ಅಪಘಾನಿಸ್ತಾನ,ಆಸ್ಟ್ರೇಲಿಯಾ, ನೇಪಾಳ, ಬಾಂಗ್ಲಾ ವಿವಿಧ ಪ್ರದೇಶಗಳಿಂದ ಗೀರು ತಲೆ ಬಾತುಕೋಳಿ, ಬ್ರಾಹ್ಮಿಣಿ ಡಕ್‌, ಬ್ಲಾಕ್‌ ಐಬಿಸ್‌, ಪೈಂಟೆಡ್‌ ಸ್ಟಾರ್ಕ, ಹಾಗೂ ಸ್ಪೂನ್‌ ವಿಲ್‌ ಜಾತಿಯ ಹಕ್ಕಿಗಳು ಕೆರೆಯನ್ನು ಆಶ್ರಯಿಸುತ್ತಿವೆ.
ಈ ಕೆರೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ 2 ಕೋಟಿ 50 ಲಕ್ಷದಲ್ಲಿ ಹೂಳು ತೆಗೆಯಲಾಗಿದೆ. 3 ಕೋಟಿ ವೆಚ್ಚದಲ್ಲಿ ಕೆರೆಯ ಸುತ್ತ ಕಲ್ಲ ಪಿಚ್ಚಿಂಗ್‌, ರಸ್ತೆ ನಿರ್ಮಣ ಹಾಗೂ ಪ್ರವಾಸಿಗರು ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಾಜಿ ಶಾಸಕ ಜಿ.ಎಸ್‌.ಗಡ್ಡದೇವರಮಠ, ಲಕ್ಷ್ಮೇಶ್ವರ ಬ್ಲಾಕ ಕಾಂಗ್ರೆಸ್‌ ಅಧ್ಯಕ್ಷ ವೀರಣ್ಣ ಅಂಗಡಿ, ಶಿರಹಟ್ಟಿ ಪ.ಪಂ ಸದಸ್ಯ ಹುಮಾಯೂನ ಮಾಗಡಿ, ಮಾಗಡಿ ಗ್ರಾಪಂ ಅಧ್ಯಕ್ಷೆ ಶಿವಕ್ಕ ಹಿರೇಮಠ, ಉಪಾಧ್ಯಕ್ಷ ಪ್ರಕಾಶ ಹೋರಿ, ಗ್ರಾಪಂ ಸದಸ್ಯ ವೀರಯ್ಯ ಮಠಪತಿ, ಮಹೇಶ ಈಳಗೇರ, ಶಿವರಾಜಗೌಡ ಪಾಟೀಲ, ಶೇಖರಪ್ಪ ಬಡ್ನಿ, ದಾವಲಬಿ ಕುರ್ತಕೋಟಿ, ಮಾರುತಿ ಭಜಂತ್ರಿ, ಫಕ್ಕಿರಯ್ಯ ಗಡ್ಡದೇವರಮಠ, ಲಲಿತಾ ಪಾಟೀಲ, ಲಕ್ಷ್ಮವ್ವ ಈಳಗೇರ, ಯಲ್ಲವ್ವ ಕರೆಣ್ಣವರ, ನಾಗರತ್ನ ನಿಡವಣಿ, ,ಪುಷ್ಪಾ ಹಿರೇಮಠ, ಕಮಲವ್ವ ಸಾಸಳ್ಳಿ, ಯಮನವ್ವ ನಡುವಿನಕೆರಿ, ಫಕ್ಕಿರಯ್ಯ ಹಿರೇಮಠ ,ಎಪಿಎಂಸಿ ಅಧ್ಯಕ್ಷ ಎಸ್‌.ಪಿ ಪಾಟೀಲ, ಯುವ ಕಾಂಗ್ರೆಸ್‌ ಅಧ್ಯಕ್ಷ ವಿರುಪಾಕ್ಷಪ್ಪ ನಂದೆಣ್ಣವರ, ಎಚ್‌.ಎಲ್‌ ಬಾಲರೆಡ್ಡಿ, ಬಸವರಾಜ ಬಾಲರೆಡ್ಡಿ, ನದಾಫ, ಫಕ್ಕಿರೇಶ ನಡುವಿನಕೇರಿ, ಪವನ ಈಳಗೇರ, ಸಂಜಿವರೆಡ್ಡಿ ವೆಂಕರೆಡ್ಡಿ, ಶಫಿ ಬುವಾಜಿ, ಕಿರಿಯ ಅಭಿಯಂತರ ಮೀರಾಜುದ್ದಿನ, ಗುತ್ತಿಗೆದಾರ ಬಿಂಗಿ ಮತ್ತಿತರರು ಉಪಸ್ಥಿತರಿದ್ದರು.

loading...