ಮಾದರಿ ಕ್ಷೇತ್ರವನ್ನಾಗಿಸಲು ಪ್ರಯತ್ನ: ದುರ್ಯೋಧ ಐಹೊಳೆ

0
23
loading...

 

ರಾಯಬಾಗ 17: ಕಳೆದ ಹತ್ತು ವರ್ಷದಲ್ಲಿ ರಾಯಬಾಗ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದು ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಯತ್ನಿಸಿದ್ದೇನೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. ಪಟ್ಟಣದಲ್ಲಿರುವ ಬಾಲಕೀಯರ ವಸತಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆಯಡಿ ಮಂಜೂರಾದ 29 ಲಕ್ಷ ರೂ. ವೆಚ್ಚದಲ್ಲಿ ಹಾಸ್ಟೇಲ್‌ಗೆ ತಡೆಗೋಡೆ(ಕಂಪೌಂಡ) ಹಾಗೂ ವಸತಿ ನಿಲಯ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಈಗಾಗಲೇ ರಾಯಬಾಗ ಮತಕ್ಷೇತ್ರದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಸಕಲ ಸೌಲಭ್ಯವುಳ್ಳ ಮುರಾರ್ಜಿದೇಸಾಯಿ ವಸತಿ ನಿಲಯಗಳು, ವಾಜಪೇಯಿ ವಸತಿ ನಿಲಯ, ಚನ್ನಮ್ಮ ವಸತಿ ನಿಲಯಗಳನ್ನು ಮಂಜೂರು ಮಾಡಿಸಿರುವುದಾಗಿ ಹೇಳಿದ ಅವರು, ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಒಳ್ಳೆ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.ಲಬಿಜೆಪಿ ರಾಯಬಾಗ ಮಂಡಲ ಅಧ್ಯ÷್ಕಷ ಸದಾನಂದ ಹಳಿಂಗಳಿ, ಸದಾಶಿವ ಘೋರ್ಪಡೆ, ನಾರಾಯಣ ಮೇತ್ರಿ, ಮಾರತು ಬಂತೆ, ಅನೀಲ ಸಾನೆ, ಸುರೇಶ ಮಾಳಿ, ಗೋಪಾಲ ಕೊಚೇರಿ, ರಸೂಲ ಮೊಮಿನ, ವಸತಿ ನಿಲಯದ ಮೇಲ್ವಿಚಾರಕಿ ಎಚ್‌.ಎಮ್‌.ಹೊಂಗಲ ಸೇರಿದಂತೆ ಅನೇಕರು ಇದ್ದರು.

loading...