ಮಾನಸಿಕ ಸಾಮರ್ಥ್ಯ ವೃದ್ಧಿಗೆ ಕ್ರೀಡೆ ಅವಶ್ಯ: ಶ್ರೀಗಳು

0
38
loading...

ಗಂಗಾವತಿ: ಕ್ರೀಡೆಗಳು ಯುವಕರ ಮಾನಸಿಕ ಸಾಮಾರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಸಂಸ್ಥಾನಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ತಿಳಿಸಿದರು.
ಗಂಗಾವತಿ ಕ್ರಿಕೆಟ್‌ ಕಪ್‌-2018 ಸಂಸ್ಥೆ ಭಾನುವಾರ ಚನ್ನಬಸವಸ್ವಾಮಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹಾರ್ಡ್‌ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವದು ಮುಖ್ಯ ಸೋಲು ಗೆಲುವು ನಂತರ ಎಂದು ತಿಳಿಸಿದರು. ಹೋಳಿಗೆ ರುಚಿ ಬಲ್ಲವನಿಗೆ ಗೊತ್ತು. ಅದರಂತೆ ಕ್ರೀಡೆಯ ಮಹತ್ವ ಕ್ರೀಡಾಪಟುಗಳಿಗೆ ಗೊತ್ತಿರುತ್ತದೆ ಎಂದು ಹೇಳಿದರು.
ಈ ಸಂಸ್ಥೆ ಹಮ್ಮಿಕೊಂಡಿರುವ ಕ್ರೀಡೆ ಶ್ಲಾಘನೀಯವಾಗಿದೆ. ಸಂಸ್ಥೆಯ ಅಧ್ಯಕ್ಷ ಯಂಕಪ್ಪ ಕಟ್ಟಿಮನಿಯವರು ಬಹುಮುಖ ಪ್ರತಿಭೆ ಇರುವ ವ್ಯಕ್ತಿಯಾಗಿದ್ದಾರೆ. ತಮ್ಮ ಸ್ವಂತ ಜಮೀನಿನಲ್ಲಿ ತುಳಸಿಯನ್ನು ಬೆಳೆದು ಜನರಿಗೆ ದಾನವಾಗಿ ನೀಡುತ್ತಿರುವದು ಅನುಕರಣೀಯವಾಗಿದೆ ಎಂದು ತಿಳಿಸಿದರು. ನಗರಸಭೆ ಸದಸ್ಯೆ ಸಂತೋಷ ಬಾಂಠಿಯಾ, ಅಕ್ಕಿ ಉದ್ಯಮಿ ಕೊಂಕತಿ ಕಾಳಪ್ಪ, ಗಂಗಾವತಿ ಎಕ್ಸಪ್ರೆಸ್‌ ಸಂಪಾದಕ ಮಂಜುನಾಥ ಹೊಸಕೇರಾ, ಗುರುಪ್ರಸಾದ್‌, ಶೇಕ್‌ ಇಕ್ಬಾಲ್‌, ಲಿಂಗರಾಜ ದರೋಜಿ, ರವಿ ಓಲಿ, ಭಾಷಾ ಪಾಲ್ಗೊಂಡಿದ್ದರು.

loading...