ಮಾಹಿತಿ ತಂತ್ರಜ್ಞಾನದಿಂದ ಜಗತ್ತು ಚಿಕ್ಕದಾಗಿದೆ: ಎಂ.ವಿ.ಪಾಟೀಲ

0
20
loading...

ಕನ್ನಡಮ್ಮ ಸುದ್ದಿ-ಹುನಗುಂದ: ಆಧುನಿಕ ಮಾಹಿತಿ ತಂತ್ರಜ್ಞಾನ ಮೂಲಕ ಜಗತ್ತು ಚಿಕ್ಕದಾಗಿದ್ದು. ಇಂದಿನ ತಂತ್ರಜ್ಞಾನದ ಯುಗದಿಂದ ವಿಶ್ವದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವನ್ನು ಜನರು ಕುಳಿತಲ್ಲೇ ನೋಡುವಂತಾಗಿದೆ ಎಂದು ನಿವೃತ್ತ ಇಂಜಿನೀಯರ್‌ ಎಂ.ವಿ.ಪಾಟೀಲ ಹೇಳಿದರು.
ಅವರು ಇಲ್ಲಿನ ಸಿ.ವಿ.ಚರಂತಿಮಠ ರೂರಲ್‌ ಪಾಲಿಟೆಕ್ನಿಕ್‌ನಲ್ಲಿ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡುತ್ತ ವಿದ್ಯಾರ್ಥಿಗಳು ವ್ಯಾಸಂಗದ ಜೊತೆಗೆ ಹೊಸ ಅವಿಷ್ಕಾರಗಳ ಬಗ್ಗೆ ಆಸಕ್ತಿವಹಿಸಿ ಸಂಶೋಧನೆಗೆ ಹೆಚ್ಚಿನ ಗಮನ ಹರಿಸಬೇಕು. ಇಂದು ಟಿವಿ, ಮೋಬೈಲ್‌,ಕಂಪ್ಯೂಟರ್‌ ಜನಸಾಮಾನ್ಯರ ಬದುಕಿಗೆ ಪೂರಕವಾಗಿದ್ದು. ಇಂದಿನ ತಂತ್ರಜ್ಞಾನದಿಂದ ನಮ್ಮ ದೇಶದ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಯಾಗಲಿದೆ ಎಂದರು. ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಸದಸ್ಯ ಎಂ.ಎನ್‌.ತೆನಹಳ್ಳಿ ಹಾಗೂ ಸದಸ್ಯ ವೀರಣ್ಣ ಬಳೂಟಗಿ ವಹಿಸಿಕೊಂಡು ಮಾತನಾಡಿದರು. ಕಾಲೇಜು ಪ್ರಾಚಾರ್ಯ ಆರ್‌.ಎಸ್‌.ಅಂಗಡಿ ಸ್ವಾಗತಿಸಿ,ಪ್ರೋ.ಎಂ.ಎಂ.ಬಡಿಗೇರ ಪ್ರಸ್ತಾವಿಕ ಮಾತನಾಡಿ ಪರಿಚಯಿಸಿದರು. ವಿಷ್ಣು ಚಿತ್ರಗಾರ ನಿರುಪಿಸಿ. ಅನುಷಾ ತಳಗಡೆ ವಂದಿಸಿದರು.

loading...