ಮೋದಿ ಸರ್ಕಾರದಿಂದ ಜನರಿಗೆ ಯಾವ ಪ್ರಯೋಜವಿಲ್ಲ: ಸಚಿವ ರಮೇಶ

0
24
loading...

ಕನ್ನಡಮ್ಮ ಸುದ್ದಿ-ಘಟಪ್ರಭಾ: ಕರ್ನಾಟಕ ಕಾಂಗ್ರೆಸ್‌ನ ಭದ್ರ ಕೋಟೆ ಅದರಲ್ಲೂ ಬೆಳಗಾವಿಯಲ್ಲಿ ಈಗ ಕಾಂಗ್ರೆಸ್‌ ಸಂಪೂರ್ಣ ಬಲಾಡ್ಯವಾಗಿದ್ದು ನರೇಂದ್ರ ಮೋದಿ ಅಮಿತ್‌ ಶಾ ಅಂತಹ 10 ಜನ ನಾಯಕರು ಬಂದರು ಕಾಂಗ್ರೆಸನ್ನು ಸೋಲಿಸಲು ಸಾಧ್ಯವಿಲ್ಲವೆಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಮಂಗಳವಾರ ಸಂಜೆ ದುಪದಾಳ ಗ್ರಾಮದ ಶ್ರೀ ಲಕ್ಷ್ಮೀ ದೇವರ ಗುಡಿಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮ ಪಂಚಾಯತ್‌ ಅಭಿವೃದ್ಧಿಗೆ ಬಿಡುಗಡೆಯಾದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿನ 1 ಕೋಟಿ ಮೌಲ್ಯದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಮೋದಿ ಸರಕಾರದಿಂದ ಅಂಬಾನಿ ಹಾಗೂ ರಾಮದೇವ ಬಾಬಾರಂತವರು ಶ್ರೀಮಂತರಾದರು, ಜನ ಸಾಮಾನ್ಯರಿಗೆ ಮೋದಿ ಸರಕಾರದಿಂದ ಯಾವ ಉಪಯೋಗವು ಆಗಿಲ್ಲ. ಇಂದು ಮೋದಿ ಬಗ್ಗೆ ಧೈರ್ಯವಾಗಿ ಮಾತನಾಡುವ ತಾಕತ್ತು ಇರುವುದು ಸಿದ್ದರಾಮಯ್ಯನವರಿಗೆ ಮಾತ್ರ. ರಾಜ್ಯ ಸರಕಾರದ ಯೋಜನೆಗಳು ಇಂದು ಎಲ್ಲರ ಮನೆ ಬಾಗಿಲಿಗೆ ತಲುಪಿ ಬಡವರ ಹಾಗೂ ದೀನ ದಲಿತರ ಅಭಿವೃದ್ಧಿಯಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ.ಅಧ್ಯಕ್ಷ ಎಸ್‌.ಐ.ಬೆನವಾಡೆ ವಹಿಸಿದರು. ಈ ಸಂದರ್ಭದಲ್ಲಿ ಜಿಪಂ.ಸದಸ್ಯರಾದ ಟಿ.ಆರ್‌.ಕಾಗಲ್‌, ಮಡ್ಡೆಪ್ಪಾ ತೋಳಿನವರ, ಮಾಜಿ ಸದಸ್ಯ ಸುಧೀರ ಜೋಡಟ್ಟಿ, ತಾಪಂ.ಸದಸ್ಯ ಲಗಮಣ್ಣಾ ನಾಗನ್ನವರ, ಹಿರಿಯರಾದ ಡಿ.ಎಂ.ದಳವಾಯಿ, ರಾಮಣ್ಣಾ ಹುಕ್ಕೇರಿ, ಅಣ್ಣಪ್ಪ ಹುನಗುಂದ, ಹನಮಂತ ಗಾಡಿವಡ್ಡರ, ಮದಾರಸಾಬ ಜಗದಾಳ, ಜಯಶೀಲ ಶೆಟ್ಟಿ, ಮಡಿಳಪ್ಪ ಮುಚಳಂಬಿ, ಗ್ರಾಮ ಪಂಚಾಯತ್‌ ಹಾಗೂ ಪಟ್ಟಣ ಪಂಚಾಯತ್‌ ಸದಸ್ಯರು ಉಪಸ್ಥಿತರಿದ್ದರು.

loading...