ಯಶಸ್ವಿ ಸಂಪನ್ನಗೊಂಡ ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ

0
22
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಕಳೆದ ಮೂರು ದಿನಗಳಿಂದ ನಗರದ ರಂಗನಾಥ ಅಡಿಟೋರಿಯಂನಲ್ಲಿ ಜರುಗಿದ ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ 25ರ ಸಮಾರೋಪ ಸಮಾರಂಭವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಹಾಗೂ ಮಾಜಿ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಹಿರಿಂiÀiರಾದ ಬಸ್ತಿ ವಾಮನ್‌ ಶೆಣೈ ಮಾತನಾಡಿ ಕೊಂಕಣಿ ಭಾಷಿಕರು ಕೊಂಕಣಿ ಭಾಷೆಯನ್ನು ಮನೆಯಲ್ಲಿ ಸಂಕೊಚವಿಲ್ಲದೆ ಮಾತನಾಡಬೇಕು, ಯುವಕರು ಇಂಗ್ಲೀಷ ವ್ಯಾಮೋಹಕ್ಕಿಂತ ಕೊಂಕಣಿ ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕೆಂದರು ಕೊಂಕಣಿ ಭಾಷೆ ಸಾಹಿತ್ಯ ಮತ್ತು ಸಂಘಟನೆ ಕುರಿತು ಡಾ. ಪ್ರಭಾ ವಿ. ಭಟ್‌, ಡಾ. ಸರಯು ಎಲ್‌. ಪ್ರಭು, ಉದಯ ರಾಯ್ಕರ್‌, ಉಷಾ ನಾಯಕ್‌ ತಮ್ಮ ವಿಚಾರ ಮಂಡಿಸಿ ಯುವ ಜನರು ಕೊಂಕಣಿ ಭಾಷೆಯ ಕಲಿಕೆಯ ಹಾಗೂ ಅಭಿವೃದ್ಧಿ ಕುರಿತು ಹೆಚ್ಚಿನ ಆಸಕ್ತಿ ವಹಿಸಬೇಕೆಂದರು.
ಅಕಾಡೆಮಿಯ ಸದಸ್ಯರಾದ ಲಕ್ಷ್ಮಣ ಪ್ರಭು ಕುಂಬಳೆ, ಸಂತೋಷ ಶೆಣೈ, ದಯಾನಂದ್‌ ಪಾಂಡು ಗೌಡ, ಮಾಧವ ಶೇಟ್‌, ರಾಮಾ ವಿ. ಮೇಸ್ತಾ, ದಾಮೋದರ್‌ ಭಂಡಾರಕರ್‌, ಸುಮಂಗಲ ಸದಾನಂದ ನಾಯಕ, ನಾಗೇಶ ಅಣ್ವೇಕರ್‌, ಮಾನ್ಯುವೆಲ್‌ ಸ್ಟೀಫನ್‌ ಎ. ರೊಡ್ರಿಗಸ್‌ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್‌ ಡಾ. ಬಿ ದೇವದಾಸ ಪೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 23 ಕೊಂಕಣಿ ಸಾಧಕರಿಗೆ ಸನ್ಮಾನ ಪತ್ರಿಕೋಧ್ಯಮ-ವಿವೇಕ್‌ ಮಹಾಲೆ(ವಿಜಯವಾಣಿ), ಕ್ರೀಡೆ-ಕಾವ್ಯ ಪ್ರಭು ಉಡುಪಿ, ಸಿನೆಮಾ-ಅಕ್ಷಯ ನಾಯಕ ಪುತ್ತೂರು, ನಾಟಕ-ಸೆಮ್ಸನ್‌ ಲೋಪಿಸ್‌ ಹೊನ್ನಾವರ್‌, ಸಂಗೀತ-ಅಮೋದಿನಿ ಮಹಾಲೆ ಧಾರವಾಡ, ನಿರ್ಗತಿಕ ಅನಾಥ ಸೇವೆ-ಸಿರಿಲ್‌ ಸಆಲು ಲೋಪಿಸ್‌ ಹೊನ್ನಾವರ, ಕಲಾ ಶಿಕ್ಷಕರು-ಗಜಾನನ ವರ್ಣೆಕರ್‌ ಗದಗ, ಸಾಹಿತ್ಯ- ಚಿತ್ರ ದುರ್ಗಾದಾಸ್‌ ಶಿರಾಲಿ,  ಮೌಖಿಕ ಜಾನಪದ ಪರಂಪರೆ- ಇಂದಿರಾ ರಘುವೀರ ನಾಯಕ ಗುಡೆ ಅಂಗಡಿ, ಜಾನಪದ ಸಾಹಿತ್ಯ ಹಿರಿಯ ಮಹಿಳೆ- ಜಯಾಶ್ರೀ ನಾಯಕ ಎಕ್ಕಂಬಿ, ಶಿಕ್ಷಣ ಸಂಸ್ಥೆ-ಸಂತ ಅಂತೋನಿ ಶಾಲೆ, ಫಾ ಜೋನ್‌ ಫೆರ್ನಾಂಡಿಸ್‌ ಶಿರಸಿ, ಮಹಿಳಾ ಸಬಲೀಕರಣ-ಸುನಂದ ಶೇಟ್‌, ಆಹಾರ-ಅಡುಗೆ ಗೀತಾ ಸಿ. ಕಿಣಿ ಮಂಗಳೂರು, ಪಂಚಶಿಲ್ಪ ಕಲೆ-ನಂದಾ ರಾಮಚಂದ್ರ ಆಚಾರಿ ಕಾರವಾರ, ಅಧ್ಯಾತ್ಮ್‌ ಕ್ಷೇತ್ರ-ಮೌಲನ ಅಬ್ದುಲಂ ಖಾಸ್ಮಿ ನವಾಯತ್‌, ಶಿಕ್ಷಣ- ಡಾ. ಅರವಿಂದ ಶಾನಭಾಗ ಮಂಗಳೂರು.

loading...