ಯಶಸ್ವಿ ಸಂಪನ್ನಗೊಂಡ ರಾಜ್ಯಮಟ್ಟದ ದೇಹದಾಡ್ರ್ಯ ಸ್ಪರ್ಧೆ

0
16
loading...

ದಾಂಡೇಲಿ: ದಾಂಡೇಲಿಯ ರೋಟರಿ ಕ್ಲಬ್‌, ವಿ.ಆರ್‌. ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌ ಹಾಗೂ ವೆಸ್ಟ್‌ಕೋಸ್ಟ್‌ ಕಾಗದ ಕಾರ್ಖಾನೆಯ ಸಂಯುಕ್ತಾಶ್ರಯದಲ್ಲಿ ದಾಂಡೇಲಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ದೇಹದಾಡ್ರ್ಯ ಸ್ಪರ್ದೆಯಲ್ಲಿ ಬೆಳಗಾವಿಯ ಪ್ರೀತಮ ಚೌಗಲೆ ಮಿ. ರೋಟರಿ ಕ್ಲಾಸಿಕ್‌ ಆಗಿ ಹೊರಹೊಮ್ಮಿದ್ದಾರೆ.
55 ಕೆ.ಜಿ ವಿಭಾಗದಲ್ಲಿ ಉತ್ತರಕನ್ನಡದ ಮಣಿಕಂಠ ಮುರುಡೇಶ್ವರ ಪ್ರಥಮ, ಬೆಳಗಾವಿಯ ಬಬನ್‌ ಪೋಟೆ ದ್ವಿತೀಯ, ಉತ್ತರಕನ್ನಡದ ಅಭೀಲಾಶ ತೃತೀಯ, ಬೆಳಗಾವಿಯ ಕೇದಾರ ಪಾಟೀಲ ಚತುರ್ಥ, ಗಜಾನನ ಕಾಂಬಳೆ ಐದನೇ ಸ್ಥಾನವನ್ನು ಪಡೆದುಕೊಂಡರು. 60 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ವಿಕಾಸ ಶಹಪುರಕರ ಪ್ರಥಮ, ಉಮೇಶ ಜಿ ದ್ವಿತೀಯ, ಧಾರವಾಡದ ಸಿದ್ಧಾಂತ ತೃತೀಯ, ಬೆಳಗಾವಿಯ ಮಿಲಿಂದ ಪಾಟೀಲ ಚತುರ್ಥ, ಉತ್ತರಕನ್ನಡದ ವಸಂತ ಉಪ್ಪಾರ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಕೊಂಡರು. 65 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ರಾಮಪ್ಪ ದೊಡ್ಡಣ್ಣವರ, ಪ್ರಥಮ, ವಿವೇಕ ಪೋಟೆ ದ್ವಿತೀಯ, ಧಾರವಢದ ಸಂತೋಷ ವಾಡಕರ ತೃತೀಯ, ಬೆಳಗಾವಿಯ ವಿನಯ ದೊಂಕರೆ ಚತುರ್ಥ, ಉಮೇಶ ಸಾಂಬ್ರೇಕರ ಐದನೇ ಸ್ಥಾನ. 70 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ತಾನಾಜಿ ಚೌಗಲೆ ಪ್ರಥಮ, ಉಡಪಿಯ ರಕ್ಷಿತ ಕೆ ದ್ವಿತೀಯ, ಬೆಳಗಾವಿಯ ಪ್ರಲಾಪ ಶೇಟ್ಟಿ ತೃತೀಯ, ಧಾರವಾಢದ ಸುನೀಲ ಎಸ್‌. ಚತುರ್ಥ, ಬೆಳಗಾವಿಯ ಓಂಕಾರ ಪಾಟೀಲ ಪಂಚಮ.
ರೋಟರಿ ಕ್ಲಬ್‌ನ ಅಧ್ಯಕ್ಷ ರವಿಕುಮಾರ ನಾಯಕ, ರೋಟರಿ ಸಹಾಯಕ ಪ್ರಾಂತಪಾಲ ಡಾ. ಎಚ್‌.ವೈ. ಮೆರ್ವಾಡೆ, ರೋಟರಿ ಕಾರ್ಯದರ್ಶಿ ಪುರುಷೋತ್ತಮ ಮಲ್ಯ, ಕೋಶಾಧಿಕಾರಿ ಅಶುತೋಷ ರಾಯ್‌, ರಾಜೇಶ ತಿವಾರಿ, ನವೀನ ಕಾಮತ, ರೋಟರಿ ಎಸ್‌. ಸೋಮಕುಮಾರ, ಪ್ರಕಾಶ ಶೆಟ್ಟಿ, ನಾಗೇಶ ನಾಯ್ಕವಾಡಿ, ಇಮಾಮ್‌ ಸರವರ, ಸ್ಟೆನ್ಲಿ ಮೊಬೆನ್‌, ರಾಜೇಶ ವೆರ್ಣೇಕರ, ರಾಹುಲ್‌ ಬಾವಾಜಿ, ಡಾ. ಅಸಿಪ್‌ ದಪೇದಾರ, ಜೊಸೆಪ್‌ ಗೊನ್ಸಾಲ್ವಿಸ್‌, ಗಣೇಶ ಕಾಮತ್‌, ಮುಂತಾದವರಿದ್ದರು.

loading...