ರಾಜ್ಯದಲ್ಲಿ ಕಾಂಗ್ರೆಸ್‌ ಬೇರು ಸಮೇತ ಕಿತ್ತೆಸೆಯಬೇಕು: ಶಾಸಕ ವಿಶ್ವನಾಥ

0
20
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಜಗತ್ತಿನಾದ್ಯಂತ ಭಾರತ ದೇಶದ ಹೆಸರು ಪ್ರಸಿದ್ಧಿ ಪಡೆದುಕೊಳ್ಳುತ್ತಿದ್ದರೆ, ಕರ್ನಾಟಕ ರಾಜ್ಯ ಕೊಲೆಗಳು, ಗಲಬೆ ಮತ್ತು ಸಾಲಗಾರ ರಾಜ್ಯವಾಗಿ ಹೊರ ಹೊಮ್ಮುತ್ತಿದೆ ಇದರಿಂದ ಮುಕ್ತವಾಗಬೇಕಾದರೆ ರಾಜ್ಯದಲ್ಲಿಯ ಕಾಂಗ್ರೆಸ್‌ ಸರ್ಕಾರವನ್ನು ಬೇರುಮಟ್ಟದಿಂದ ಕಿತ್ತುಹಾಕಬೇಕು ಎಂದು ಬೆಳಗಾವಿ ಗ್ರಾಮೀಣ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ಇತಿಹಾಸ ಪ್ರಸಿದ್ಧ ದೇವಸ್ಥಾನ ಗೊಂಬಿ ಗುಡಿಯಲ್ಲಿ, ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪ್ರಚಾರಾರ್ಥ ಪೂಜೆ ಸಲ್ಲಿಸಿ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿಜಿ ಶ್ರಮ ರಹಿತ ಕಾರ್ಯಮಾಡಿ ದೇಶವನ್ನು ಅಭಿವೃದ್ಧಿ ಮಾಡುತ್ತಿರುವಾಗ, ನಮ್ಮ ರಾಜ್ಯ ಎಂದು ಮಾಡದಷ್ಟು ಸುಮಾರು 2 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ರಾಜ್ಯದ ಪ್ರಗತಿಗೆ ಮಾರಕವಾದ ಕಾಂಗ್ರೇಸ್‌ ಪಕ್ಷವನ್ನು ರಾಜ್ಯದಲ್ಲಿ ಮುಕ್ತಗೊಳಿಸಿ ರಾಜ್ಯದ ಅಭಿವೃದ್ದಿಗಾಗಿ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿರ್ಣಯವನ್ನು ರಾಜ್ಯದ ಜನತೆ ಮಾಡಿದ್ದಾರೆ ಎಂದರು.

ಪುರಸಭೆ ಸದಸ್ಯ ಮಹೇಶ ಹರಕುಣಿ ಮಾತನಾಡಿ, ಭ್ರಷ್ಟಾಚಾರದಲ್ಲಿ ಮುಳಗಿ ಹೊದ ಕಾಂಗ್ರೆಸ್‌ ಪಕ್ಷ 5 ವರ್ಷಗಳಲ್ಲಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ರಾಜ್ಯವನ್ನು ಸಾಲದ ಸುಳಿಗೆ ತಂದು ನಿಲ್ಲಿಸಿದ್ದರ ಪರಿಣಾಮವಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ಯೋಜನೆಗಳು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌ ಯಡಿಯೂರಪ್ಪ ರವರು ಹಾಗೂ ತಮ್ಮ ಅವಧಿಯಲ್ಲಿ ಕೈಗೊಳ್ಳಲಾದ ಯೋಜನೆಗಳು ಜನಸಾಮನ್ಯರ ಪರವಾಗಿದ್ದು. ದೇಶದ ಜನತೆ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ.
ಪಟ್ಟಣದ ನೂರಾರು ಬಿಜೆಪಿ ಯುವ ಕಾರ್ಯಕರ್ತರು ಪದಾಧಿಕಾರಿಗಳು ಶಾಸಕ ಡಾ.ವಿಶ್ವನಾಥ ಪಾಟೀಲ ನೆತೃತ್ವದಲ್ಲಿ ವಾರ್ಡ ನಂ 23 ಮತ್ತು 24 ರಲ್ಲಿ ಬರುವ ಎಲ್ಲ ಮನೆಗಳಿಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ವಿರೇಶ ಹೊಳೆಪ್ಪನವರ, ರಾಮನಗೌಡ ಪಾಟೀಲ, ಆಯ್‌. ಎಲ್‌ ಪಾಟೀಲ, ಪುಂಡಲೀಕ ಕಾಮಕರ, ಮಹಾಂತೇಶ ಹರಕುಣಿ, ಬಸವರಾಜ ಶಿಂತ್ರಿ, ಆನಂದ ಮೂಗಿ, ವಿಶಾಲ ಹೊಸೂರ, ಚನ್ನಪ್ಪ ಬೋರಕನವರ, ರಾಜು ಕುಡಸೋಮಣ್ಣವರ, ಸುರೇಶ ಈಟಿ, ಸುರೇಶ ಯರಗಟ್ಟಿ, ಈಶ್ವರ ಕೊಪ್ಪದ, ರಮೇಶ ನಾಶಿಪುಡಿ, ಅಶೋಕ ಜವಳಿ, ಬಸವರಾಜ ಶಿಂತ್ರಿ, ಜನಾರ್ಧನ ಕಾಮಕರ, ರಮೇಶ ತುರಮರಿ, ಬಸವರಾಜ ಕುಸಲಾಪೂರ, ನಾಸೀರ ಬಳಿಗಾರ, ಮಲ್ಲಪ್ಪ ದೊಡವಾಡ, ಅಶೋಕ ಬೋರಕನವರ, ರಮೇಶ ತುರಮರಿ, ಚನ್ನಪ್ಪ ಗೋರವರ, ಗಂಗಪ್ಪಾ ಕಾಮಕರ, ಬಸವರಾಜ ನೇಸರಗಿ, ನಜೀರ ತಹಶೀಲ್ದಾರ, ಆಸೀಫ ಗೋವೆ, ಬಾಬುಸಾಬ ಸುತಗಟ್ಟಿ, ಸೈಯ್ಯದ ಸುಭಾನಿ, ಮಲ್ಲಿಕಾರ್ಜುನ ದೇಸಾಯಿ, ಅರುಣ ಬೆಣಚಿನಮರಡಿ, ಸಂಜು ಭರಮಣ್ಣವರ, ಬಾಬು ಸಂಗೋಳ್ಳಿ, ಬಾಬುಸಾಬ ಸುತಗಟ್ಟಿ, ಸೈಯ್ಯದ ಸುಬಾನಿ, ಈಶ್ವರ ಬೋರಕನವರ, ಮೋಹನ ಬಾಳಿ, ಸ್ವಾಮಿ ವಿವೇಕಾನಂದ ಯುವ ಜಾಗೃತಿ ಸಮಿತಿ ಎಲ್ಲ ಸದಸ್ಯರು, ಬಿ.ಜೆ.ಪಿ ಕಾರ್ಯಕರ್ತರು, ಯುವಕರು ಮತ್ತು ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...