ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ಮಾತನಾಡುವುದು ಸರಿಯಲ್ಲ: ಪರಮೇಶ್ವರ

0
20
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ದೇಶದ ಬೆನ್ನೆಲುಬಾದ ಕೃಷಿಕರ ಪರವಾಗಿ ನಮ್ಮ ಸರ್ಕಾರ, ಕೃಷಿಕರ ಆದಾಯವನ್ನು ದ್ವಿಗುಣ ಮಾಡುತ್ತೆವೆ ಎಂದು ಭಾಷಣಗಳಲ್ಲಿ ಹೇಳುವ ಬಿಜೆಪಿಯವರು, ನಾಲ್ಕು ವರ್ಷದಿಂದ ಬರಗಾಲದಲ್ಲಿ ಬೆಂದಿರುವ ರೈತನಿಗೆ, ಕೇಂದ್ರದ 25 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ಒಂದು ರುಪಾಯಿ ಸಹಿತ ಆತನ ಸಾಲ ಮನ್ನಾಕ್ಕೆ ಆದ್ಯತೆ ಕೊಡದೆ, ರಾಜ್ಯ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರೂ. 50ಸಾವಿರ ರೂಪಾಯಿ ಸಾಲ ಮನ್ನಾ ಮಾಡಿದ ಕಾಂಗ್ರೆಸ್‌ ಸರ್ಕಾರದ ವಿರುದ್ದ ಮಾತಾಡುವದು ಸರಿಯೇ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಪರಮೇಶ್ವರ ಪ್ರಶ್ನಿಸಿದರು.
ಶುಕ್ರವಾರ ಪಟ್ಟಣದ ಚೆನ್ನಮ್ಮಾ ಸಮಾಧಿ ರಸ್ತೆಯಲ್ಲಿ ಆಯೋಜಿಸಿದ ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಬಿಜೆಪಿ ಅಧಿಕಾರದಲ್ಲಿ ಯಾವುದೇ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ಜನರನ್ನು ಸೌಕರ್ಯದಿಂದ ವಂಚಿತರನ್ನಾಗಿ ಮಾಡಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ಅಧಿಕಾರವಧಿಯಲ್ಲಿ ರೈತರ ನೆರವಿಗೆ ಬರದೆ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ ನಡೆಸಿ ದರ್ಪ ಮೆರೆದಿದೆ. ಕಾಂಗ್ರೆಸ್‌ ಪಕ್ಷದವರು ಬಿಜೆಪಿ ಪಕ್ಷದವರಂತೆ ಮೂರು ಜನ ಮುಖ್ಯಮಂತ್ರಿಗಳನ್ನು ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಅಧಿಕಾರವಧಿಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲಿಲ್ಲ ಎಂದರು.

ಕಾಂಗ್ರೆಸ್‌ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕ, ಶಾಸಕ ಡಿ.ಬಿ.ಇನಾಂದಾರ, ಮಾಜಿ ಎಂ.ಎಲ್‌.ಸಿ ಮಹಾಂತೇಶ ಕೌಜಲಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷದಿಂದ ಕಾಂಗ್ರೆಸ್‌ ಪಕ್ಷಕ್ಕೆ ಕಾರ್ಯಕರ್ತರು ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮಾಣಿಕ್ಯಂ ಟ್ಯಾಗೋರ, ಕೆಪಿಸಿಸಿ ಉಪಾಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟ್‌ರಾವ್‌ ಘೋರ್ಪಡೆ, ಪಿ.ವಿ.ಮೋಹನ, ಘಾಜಿ ಪಾಟೀಲ, ಮಾಜಿ ಸಚಿವ ಶಿವಾನಂದ ಕೌಜಲಗಿ, ಡಾ.ವಿ.ಎಸ್‌.ಸಾಧುನವರ, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾರ್ಯದರ್ಶಿ ದಯಾನಂದ ಪಾಟೀಲ, ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ಕಿರಣ ಸಾಧುನವರ, ಡಾ.ಮಹಾಂತೇಶ ಕಳ್ಳಿಬಡ್ಡಿ, ಪ್ರಚಾರ ಸಮಿತಿ ಅಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಬಸವರಾಜ ಬಾಳೇಕುಂದರಗಿ, ಬಸವರಾಜ ಕೌಜಲಗಿ, ಮಲ್ಲಪ್ಪ ಮುರಗೋಡ, ಈಶ್ವರ ಉಳ್ಳೇಗಡ್ಡಿ, ಪುರಸಭೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

loading...