ವಾಲಿಬಾಲ್‌ : ನವಲಗುಂದ ತಂಡ ಚಾಂಪಿಯನ್‌

0
15
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಸ್ಥಳೀಯ ಶ್ರೀ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕರ್ನಾಟಕ ವಿಶ್ವವಿದ್ಯಾಲಯದ ದ್ವಿತೀಯ ವಲಯ ಮಟ್ಟದ ಅಂತರ್‌ ಮಹಾವಿದ್ಯಾಲಯಗಳ ಪುರುಷರ ವಾಲಿಬಾಲ್‌ ಪಂದ್ಯಾವಳಿಯಲ್ಲಿ ನವಲಗುಂದದ ಶಂಕರ ಪ್ರಥಮ ದರ್ಜೆ ಮಹಾವಿದ್ಯಾಲಯವು ಚಾಂಪಿಯನ್‌ ಪಟ್ಟ ಅಲಂಕರಿಸಿತು.
ಪಂದ್ಯಾವಳಿಯಲ್ಲಿ 14 ತಂಡಗಳು ಭಾಗವಹಿಸಿದ್ದವು. ಎಸ್‌ಎಸ್‌ಜಿಎಫ್‌ಜಿಸಿ ಕಾಲೇಜು, ನರಗುಂದ ಹಾಗೂ ಶ್ರೀ ಶಂಕರ ಪ್ರಥಮ ದರ್ಜೆ ಕಾಲೇಜು ಪೈನಲ್‌ ಪ್ರವೇಶಿಸಿದ್ದವು. ಅಂತಿಮ ಪಂದ್ಯದಲ್ಲಿ 2-0 ಸೆಟ್‌ಗಳಿಂದ (19-25, 25-23, 9-15) ಮಣಿಸಿ ನವಲಗುಂದದ ಚಾಂಪಿಯನ್‌ ಪಟ್ಟ ಗಳಿಸಿತು.
ಉದಯಕುಮಾರ ಟಿ, ಕೆ.ವೈ. ಚೌಡಾಪೂರ ತಿರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಪ.ಪಂ ಅಧ್ಯಕ್ಷ ಕಲ್ಮೇಶ ತೊಂಡಿಹಾಳ ವಿಜೇತ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಿದರು. ಪ್ರಾಚಾರ್ಯ ಬಸವರಾಜ ಬಳಗಾನೂರಮಠ, ಸೋಮನಾಥ ಸಂಗನಾಳಮಠ, ಅಶೋಕ ಬೇವಿನಕಟ್ಟಿ, ನಿಂಗರಾಜ ಬೇವಿನಕಟ್ಟಿ, ಮಲ್ಲಯ್ಯ ಗುಂಡಗೋಪುರಮಠ, ಸಿಕಂದರ್‌ ಆರಿ, ಈಶ್ವರ ಬೇಟಗೇರಿ ಸೇರಿದಂತೆ ಇತರರಿದ್ದು. ಉಪನ್ಯಾಸಕ ಈ.ಆರ್‌. ಲಗಳೂರ, ಕಾಂಚನಮಾಲಾ ಪಾಟೀಲ ನಿರ್ವಹಿಸಿದರು.

loading...