ವಿದ್ಯಾರ್ಥಿಗಳಿಗೆ ಸಂಶೋಧನೆಗಳತ್ತ ಚಿತ್ತ: ಡಾ.ಪದ್ಮಸಾಲಿ

0
19
loading...

ನಿಪ್ಪಾಣಿ 9: ಇತ್ತೀಚಿನ ದಿನಗಳಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶಗಳು ಹೇರಳವಾಗಿದ್ದು, ವಿದ್ಯಾರ್ಥಿದೆಸೆಯಲ್ಲಿಯೇ ಸಂಶೋಧನೆಗಳತ್ತ ತಮ್ಮ ಚಿತ್ತವನ್ನು ಹರಿಸುವಂತಾಗಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಬಸವರಾಜ ಪದ್ಮಸಾಲಿ ಅಭಿಪ್ರಾಯಪಟ್ಟರು. ಕೆಎಲ್‌ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ವತಿಯಿಂದ ‘ರಸಾಯನಶಾಸ್ತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು’ ವಿಷಯದ ಕುರಿತು ನಡೆದ ರಾಷ್ಟ್ರಮಟ್ಟದ ಒಂದು ದಿನದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳು ನಡೆಸುವ ಪಿಎಚ್‌.ಡಿ ಸಂಶೋಧನೆ, ಪ್ರಯೋಗಗಳು ಭವಿಷ್ಯತ್ತಿನ ಬದುಕಿನಲ್ಲಿ ವಿಜ್ಞಾನದ ತಿಳುವಳಿಕೆಯನ್ನು ಬದುಕಿಗೆ ಅನ್ವಯಗೊಳಿಸಿಕೊಳ್ಳುವುದನ್ನು ಕಲಿತುಕೊಳ್ಳುವಂತಾಗಬೇಕೆಂದರು. ಪ್ರಾ. ಡಾ.ಎಮ್‌.ಬಿ.ಕೋಥಳೆ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಡಾ.ಎಸ್‌.ಆರ್‌.ಪಾಟೀಲ ವೇದಿಕೆಯಲ್ಲಿದ್ದರು. ಪ್ರಬಂಧ ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳಲ್ಲಿ ಸಮೀನಾ ಪಾಟೀಲ, ವರ್ಷಾ ಪಾಟೀಲ, ಪಾರ್ವತಿ ಚೌಗಲೆ(ಪ್ರಥಮ). ಐಶ್ವರ್ಯಾ ಮೋದಿ, ಪ್ರೀಯಂಕಾ ಸಪಾಳೆ(ದ್ವಿತೀಯ), ರೇಶ್ಮಾ ಧುಮಾಲ, ಐಶ್ವರ್ಯಾ ಖೋತ(ತೃತೀಯ) ಸ್ಥಾನಗಳನ್ನು ಪಡೆದುಕೊಂಡರು.ಸಂಕೀರಣದ ಸಂಯೋಜಕರಾದ ಡಾ.ಎ.ಎಸ್‌.ಜಾಗನೂರೆ, ಡಾ.ಎಸ್‌.ಬಿ.ಸೊಲಬನ್ನವರ, ಪ್ರೊ.ಜಿ.ಬಿ.ಕುಂಬಾರ, ಪ್ರೊ.ಶ್ರೀಶೈಲ ನರವಾಡೆ, ಪ್ರೊ.ರಾಧಿಕಾ ಮಾನೆ, ಪ್ರೊ.ದಾನೇಶ್ವರಿ ಕಣಗಲಿ, ವಿದ್ಯಾರ್ಥಿ ಬಳಗ, ಸಿಬ್ಬಂದಿ ಉಪಸ್ಥಿತರಿದ್ದರು. ಆಶಾ ಮಾಳಗಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ಪ್ರೀತಿ ಪಾಟೀಲ ಮತ್ತು ಪ್ರೊ.ಪ್ರೀಯಂಕಾ ಸೌದೆ ನಿರೂಪಿಸಿದರು. ಪ್ರೊ.ಪ್ರಶಾಂತ ನರವಾಡೆ ವಂದಿಸಿದರು.

loading...