ವಿದ್ಯಾರ್ಥಿಗಳು ಆಮ್ಯುಲ್ಯವಾದ ಸೇವೆಯನ್ನು ಸಮಾಜಕ್ಕೆ ಒದಗಿಸಬೇಕು: ಮನ್ಸೂರ್‌

0
22
loading...

ಕನ್ನಡಮ್ಮ ಸುದ್ದಿ- ಧಾರವಾಡ: ನರ್ಸಿಂಗ್‌ ಕೋರ್ಸ್‌ ನಮ್ಮ ಯುವ ಜನಾಂಗಕ್ಕೆ ಒಂದು ವರದಾನವಾಗಿದ್ದು, ನರ್ಸಿಂಗ್‌ ಕೋರ್ಸ್‌ ಕಲಿತವರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದು ಜಿಲ್ಲಾಧಿಕಾರಿ ಡಾ. ಎಸ್‌,ಬಿ.ಬೊಮ್ಮನಹಳ್ಳಿ ಹೇಳಿದರು. ಕಲಾಭವನದಲ್ಲಿ ಡಾ.ವೈ.ಎನ್‌ ಇರಕಲ್‌ ಏಜ್ಯಕೇಷನಲ್‌ & ಚಾರಿಟೇಬಲ್‌ ಟ್ರಸ್ಟನ ಶ್ರೀಯಾ ಕಾಲೇಜಿನ ಪದವಿ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಡಾಕ್ಟ್ರರ್‌ಗಿಂತ ನರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇದರ ನಿಟ್ಟಿನಲ್ಲಿ ನೀವು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ರಾಜೀವ್‌ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕುಲಪತಿ ಡಾ.ಸಿ.ಎಂ ನೂರ್‌ ಮನ್ಸೂರ್‌ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಯಂತೆ, ಆಮ್ಯುಲ್ಯವಾದ ನಿಮ್ಮ ಸೇವೆಯನ್ನು ಸಮಾಜಕ್ಕೆ ಒದಗಿಸಬೇಕು. ಪದವಿ ಪಡೆದ ವಿಧ್ಯಾರ್ಥಿಗಳು ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಮಾಡುವಂತಾಗಬೇಕು. ನರ್ಸಿಂಗ್‌ ಕೋರ್ಸ್‌ನ ನಂತರ ಉನ್ನತ ವಿಧ್ಯಾಭ್ಯಾಸ ಪಡೆದು ವಿವಿಧ ವಲಯದಲ್ಲಿ ತಮ್ಮ ಸೇವೆ ಒದಗಿಸಬೇಕು. ಶ್ರೀಯಾ ನರ್ಸಿಂಗ್‌ ಕಾಲೇಜಿನ ವಿಧ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ 100% ಪ್ರಥಮ ದರ್ಜೆ ಹಾಗೂ ಡಿಸ್ಟಿಂಗ಼ಷನಲ್ಲಿ ತೇರ್ಗಡೆ ಹೊಂದಿದ್ದು, ಇದು ಬೇರೆ ಸಂಸ್ಥೆಗಳಿಗೆ ಮಾದರಿಯಾಗಿದೆ.
ಡಾ.ವೈ.ಎನ್‌.ಇರಕಲ್‌ ಅಧ್ಯಕ್ಷತೆವಹಿಸಿ ಮಾತನಾಡಿ, ಪದವಿ ಪಡೆದ ಹಾಗೂ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.ಇದೆ ಸಮಯದಲ್ಲಿ ಎಲ್ಲ ಅತಿಥಿಗಳು ಹೆಚ್ಚಿನ ಅಂಕಗಳಿಸಿ ಉತ್ತೀರ್ಣರಾದ ವಿಧ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ವಿವಿಧ ಚಟುವಟಿಕೆಗಳಲ್ಲಿ ಸಾಧsನೆಗೈದÀ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಡಾ.ಸತೀಶ್‌ ಇರಕಲ್‌, ಡಾ.ವಾಣಿ ಇರಕಲ್‌ ಉಪಸ್ಥಿತರಿದ್ದು ಪದವಿ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಜ್ಞಾ ವಚನವನ್ನು ಭೋದಿಸಿದರು,ಬಿಎಸ್ಸಿ ನರ್ಸಿಂಗ್‌ ಪ್ರಾಂಶುಪಾಲ ಪ್ರೋ.ರೋಡಾ ಜೇಸುರಾಜ ಇವರು ಪ್ರಥಮ ವರ್ಷದ ವಿಧ್ಯಾಗಳಿಗೆ ಪ್ರಮಾಣ ವಚನ ಭೋದಿಸಿದರು.ಬಿ.ಎಸ್‌.ಎಸ್‌.ಎನ್‌.ಟಿ ಪ್ರಾಂಶುಪಾಲ ಶ್ರೀಮತಿ ಲೀಲಾವತಿ ಕಳಸಪ್ಪನವರು ಸ್ವಾಗತಿಸಿದರು. ಉಪನ್ಯಾಸಕ ನಾಗರಾಜ ಹಾಗೂ ಕುಮಾರಿ ಜೇರುಷಾ ನಿರೂಪಿಸಿದರು. ನಿಂಗಯ್ಯ ವಂದಿಸಿದರು.

loading...