ವಿದ್ಯಾರ್ಥಿಗಳ ಮೇಲೆ ಶಿಕ್ಷಕ ಹಲ್ಲೆ: ದೂರು

0
15
loading...

ಯಲಬುರ್ಗಾ: ತಾಲೂಕಿನ ಯಡ್ಡೋಣಿ ಗ್ರಾಮದ ಪರಿಶಿಷ್ಟ ವರ್ಗಗಳ ಆಶ್ರಮ ವಸತಿ ಶಾಲೆಯಲ್ಲಿ ಸಹ ಶಿಕ್ಷಕ ಸಂತೋಷ ರೆಡ್ಡಿ ಅಡವಿಹಳ್ಳಿ ವಿಧ್ಯಾರ್ಥಿಗಳ ಮೇಲೆ ಅನವಶ್ಯಕವಾಗಿ ಹಲ್ಲೆ ಮಾಡುವದರ ಜತೆಗೆ ಪಾದರಕ್ಷೆಯಿಂದ ಒಡೆಯುತ್ತಾರೆ ಎಂದು ಆಶ್ರಮ ಶಾಲೆಯ ವಿಧ್ಯಾರ್ಥಿಗಳು ತಾಲೂಕು ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ಗೌಡರ ಮುಂದೆ ಮಂಗಳವಾರ ಅಳಲು ತೊಡಿಕೊಂಡರು.
ವಿಧ್ಯಾರ್ಥಿಗಳ ದೂರಿನ ಮೇರೆಗೆ ಜಿಲ್ಲಾ ಪಂಚಾಯತಿ ಸದಸ್ಯೆ ಹೊಳೆಯಮ್ಮ ಪೋಲಿಸ್‌ ಪಾಟೀಲ್‌ ಹಾಗೂ ತಾಲೂಕು ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ಗೌಡರ ಸೇರಿದಂತೆ ಇನ್ನಿತರ ಮುಖಂಡರು ಶಾಲೆಗೆ ಮಂಗಳವಾರ ಭೇಟಿ ನೀಡಿ ವಾಸ್ತವಿಕ ಪರಸ್ಥಿತಿಯನ್ನು ವಿಧ್ಯಾರ್ಥಿಗಳ ಮುಖಾಂತರ ತಿಳಿದುಕೊಂಡು ಹಲ್ಲೆ ಮಾಡಿದ ಶಿಕ್ಷಕ ಸಂತೋಷ ರೆಡ್ಡಿ ಅಡವಿಹಳ್ಳಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಿಧ್ಯಾರ್ಥಿಗಳ ಮೇಲೆ ಯಾವ ಕಾರಣಕ್ಕೆ ಹಲ್ಲೆ ಮಾಡುತ್ತೀರಿ. ನಿಮ್ಮ ವರ್ತನೆಗೆ ವಿಧ್ಯಾರ್ಥಿಗಳು ಜೀವ ಭಯದಿಂದ ಶಾಲೆ ಬಿಟ್ಟು ಮನೆ ಸೇರುವಂತಾಗಿದೆ. ದೂರದ ಗ್ರಾಮಗಳ ವಿಧ್ಯಾರ್ಥಿಗಳು ತಮ್ಮ ತಂದೆ ತಾಯಿಯನ್ನು ಬಿಟ್ಟು ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ.ವಿಧ್ಯಾರ್ಥಿಗಳ ಪಾಲನೆ ಮಾಡಬೇಕಾದ ನೀವೇ ಈ ರೀತಿ ವರ್ತನೆ ಮಾಡಿದರೆ ವಿಧ್ಯಾರ್ಥಿಗಳ ವಿಧ್ಯಾಭ್ಯಾಸದಿಂದ ವಂಚಿತರಾಗುವದಕ್ಕೆ ನೀವೇ ಕಾರಣೀಕರ್ತರಾಗುತ್ತೀರಿ.
ಶಾಲೆಯಲ್ಲಿ ವಿಧ್ಯಾರ್ಥಿಗಳು ಊಟ ಮಾಡುವದಕ್ಕೆ ಗೌರವದಿಂದ ನಿಮ್ಮನ್ನು ಕರೆದರೂ ಸುಮ್ನೇನೆ ತಿಂದು ಎದ್ದು ಹೋಗಿ ಎಂದು ಗದರಿಸುತ್ತಾರೆ. ಹೊಟ್ಟೆ ತುಂಬ ಊಟ ಕೇಳುವದಕ್ಕೂ ಶಾಲೆಯಲ್ಲಿ ಅವಕಾಶವಿಲ್ಲದಂತಾಗಿದೆ. ಶಾಲೆಯಲ್ಲಿ ಪಾಠ ಮಾಡುವದಕ್ಕೆ ಶಿಕ್ಷಕರು ಇಲ್ಲದಂತಾಗಿದೆ. ಪಾಠ ಮಾಡಬೇಕಾದ ಶಿಕ್ಷಕ ಸಂತೋಷ ರೆಡ್ಡಿ ಅಡವಿಹಳ್ಳಿ ನಿಲಯ ಮೇಲ್ವಿಚಾರಕರಾಗಿ ಹೆಚ್ಚುವರಿ ಕೆಲಸ ನಿರ್ವಹಿಸುತ್ತಾರೆ. ಸರಿಯಾದ ಸಮಯಕ್ಕೆ ಶಾಲೆಗೆ ಬರುವದಿಲ್ಲ ಎಂದು ವಿಧ್ಯಾರ್ಥಿಗಳು ಅಧ್ಯಕ್ಷೆ ಲಕ್ಷ್ಮೀ ಗೌಡರ ಮುಂದೆ ತಮ್ಮ ಅಳಲನ್ನು ತೊಡಿಕೊಂಡರು. ವಸತಿ ನಿಲಯಕ್ಕೆ ಬರುವ ಆಹಾರ ಧಾನ್ಯಗಳು ಕೂಡ ಕಳಪೆಯಾಗಿರುವ ಬಗ್ಗೆ ವಿಧ್ಯಾರ್ಥಿಗಳು ಆರೋಪಿಸಿದರು.ಕೂಡಲೇ ಶಿಕ್ಷಕನನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಬೇರೆ ಶಿಕ್ಷಕರನ್ನು ಶಾಲೆಗೆ ನಿಯೋಜನೆ ಮಾಡುವಂತೆ ತಾಲೂಕು ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ಗೌಡರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿ ಸುರೇಖಾ ಕುರಟ್ಟಿಗೆ ಸೂಚನೆ ನೀಡಿದರು.
ಮುಖಂಡರಾದ ಅಯ್ಯಪ್ಪ ಯಡ್ಡೋಣಿ,ಶರಣಗೌಡ ಪೋಲಿಸ್‌ ಪಾಟೀಲ್‌,ದ್ಯಾಮಣ್ಣ ಗೌಡರ ಸೇರಿದಂತೆ ಇನ್ನಿತರರು ಇದ್ದರು.

loading...