ವಿದ್ಯಾ ವಿಕಾಸ – ವಿದ್ಯಾಪೋಷಕ ಪ್ರಶಸ್ತಿ ಪ್ರದಾನ ಸಮಾರಂಭ

0
24
loading...

ಕನ್ನಡಮ್ಮ ಸುದ್ದಿ- ಧಾರವಾಡ: ವಿದ್ಯಾ ವಿಕಾಸ ಹಾಗೂ ವಿದ್ಯಾಪೋಷಕ ಪ್ರಶಸ್ತಿ ಪ್ರದಾನ ಸಮಾರಂಭ ಡಾ. ಡಿ ಜಿ ಶೆಟ್ಟಿ ಎಜ್ಯುಕೇಷನಲ್‌ ಸೊಸೈಟಿ, ಜ್ಞಾನದೇಗುಲದಲ್ಲಿ ವಿದ್ಯಾ ವಿಕಾಸ ಹಾಗೂ ವಿದ್ಯಾಪೋಷಕ ಪ್ರಶಸ್ತಿ ಸನ್ಮಾನ ಸಮಾರಂಭ ನಡೆಸಲಾಯಿತು.ಡಾ. ಅಜಿತ ಪ್ರಸಾದ, ವಿತ್ತಧಿಕಾರಿಗಳು, ಜೆ.ಎಸ್‌.ಎಸ್‌. ಇವರು ಶಿಕ್ಷಣಕ್ಷೇತ್ರದಲ್ಲಿ ಸಲ್ಲಿಸಿರುವ ಅಗಾಧ ಸೇವೆಗೆ ಸಂಸ್ಥೆಯ ವತಿಯಿಂದ 2017-18ನೇ ಸಾಲಿನ ‘ವಿದ್ಯಾ ವಿಕಾಸ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಜಯರಾಮ್‌ ಬಿ ಶೆಟ್ಟಿ, ಹಿರಿಯ ಹೊಟೆಲ್‌ ಉದ್ಯಮಿ, ಧಾರವಾಡ ಇವರು ಶಿಕ್ಷಣ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ಮಾಡಿರುವ ಸಾಮಾಜಿಕ ಸೇವೆ, ಕಾಳಜಿಗೆ ‘ವಿದ್ಯಾ ಪೋಷಕ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾ.ಡಿ ಜಿ ಶೆಟ್ಟಿ ಎಜ್ಯುಕೇಷನಲ್‌ ಸೊಸೈಟಿ ಅಧ್ಯಕ್ಷ ಡಾ. ಡಿ ಜಿ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು.

loading...