ವಿದ್ಯುತ್‌ ವಿತರಣಾ ಘಟಕ ಕಾಮಗಾರಿಗೆ ಶಾಸಕ ಚಾಲನೆ

0
28
loading...

ಕನ್ನಡಮ್ಮ ಸುದ್ದಿ-ಕೋಹಳ್ಳಿ: ಕಕಮರಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ರೈತರ ಬಹುದಿನಗಳ ಬೇಡಿಕೆಯಾಗಿದ್ದ 110 ಕೆವಿ ವಿದ್ಯುತ್‌ ವಿತರಣಾ ಘಟಕದ ಕಾಮಗಾರಿಯ ಬೇಡಿಕೆ ಇಡೇರಿದಂತಾಗಿದೆ. ಈ ನೂತನ 110 ಕೆವಿ ವಿದ್ಯುತ್‌ ವಿತರಣಾ ಘಟಕವು ಸುಮಾರು 8 ಕೋಟಿ 80 ಲಕ್ಷ ರೂ, ವೆಚ್ಚದ ಕಾಮಗಾರಿಯನ್ನು 6 ತಿಂಗಳ ಒಳಗಾಗಿ ಉತ್ತಮ ಗುಣಮಟ್ಟದಿಂದ ಘಟಕವನ್ನು ನಿರ್ಮಿಸುವಂತೆ ಗುತ್ತಿಗೆದಾರರಿಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಬುಧವಾರ ಕಕಮರಿ ಗ್ರಾಮದಲ್ಲಿ ನೂತನ 110 ಕೆವಿ ವಿದ್ಯುತ್‌ ವಿತರಣಾ ಘಟಕದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿ, ಈ ವಿದ್ಯುತ್‌ ವಿತರಣಾ ಘಟಕವು ಕಳೆದ ನಾಲ್ಕು ವರ್ಷಗಳ ಹಿಂದೆಯೇ ಪ್ರಾರಂಭವಾಗಬೇಕಿತ್ತು. ಈ ಭಾಗದ ಹಲವಾರು ರೈತರಿಗೆ ಕಳಪೆ ಮಟ್ಟದಲ್ಲಿ ವಿದ್ಯುತ್‌ ವಿತರಣೆಯಾಗಿ ಹಲವಾರು ಸಮಸ್ಯೆಯಾಗುತ್ತಿತ್ತು. ರೈತರ ಈ ಸಮಸ್ಯೆಗೆ ನಾಂದಿ ಹಾಡಲು ಈ ಕಾಮಗಾರಿ ಪ್ರಾರಂಭವಾಗಲಿದೆ. ಮುಂದಿನ 6 ತಿಂಗಳಲ್ಲಿ ಈ ನೂತನ ಘಟಕ ಪ್ರಾರಂಭವಾಗಿ ಗುಣಮಟ್ಟದ ವಿದ್ಯುತ್‌ ಪೊರೈಕೆಯಾಗುವುದ್ದರಿಂದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಎಲ್ಲ ರೈತರು ಕಕಮರಿ ಗ್ರಾಮದಲ್ಲಿನ ವಿದ್ಯುತ್‌ ವಿತರಣಾ ಘಟಕದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಜಿಪಂ ಸದಸ್ಯ ಗುರಪ್ಪ ದಾಶಾಳ, ಗ್ರಾಪಂ ಅಧ್ಯಕ್ಷ ಅಪ್ಪಾಸಾಬ ಪೂಜಾರಿ, ವೆಂಕಣ್ಣ ಅಸ್ಕಿ, ವಿಶ್ವನಾಥ ಗಣಿ, ಗುರಬಸು ಬಂಡರಗೊಟ್ಟಿ, ಬಸವರಾಜ ರೂಡಗಿ, ಅಪ್ಪುಗೌಡ ಪಾಟೀಲ, ಗುರು ಮುಗ್ಗಣ್ಣವರ, ಶ್ರೀಶೈಲ ಜನಗೌಡ, ಜಯಣ್ಣ ಪೂಜಾರಿ, ಸಿದರಾಮ ಬಿಳ್ಳೂರ, ಬೆಳಗಾವಿಯ ಗುತ್ತಿಗೆದಾರ ದೇಸಾಯಿ ಸೇರಿದಂತೆ ಅನೇಕ ರೈತರು ಇದ್ದರು.

loading...