ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ದುರ್ಬಳಿಕೆ: ಡಾ. ಸಾರ್ವಭೌಮ ಆರೋಪ

0
29
loading...

ಕನ್ನಡಮ್ಮ ಸುದ್ದಿ-ಇಂಡಿ: ಶಾಸಕ ಯಶವಂತರಾಗೌಡ ಪಾಟೀಲ ಇವರು ಇಂಡಿ ವಿಧಾನಸಭೆ ಕ್ಷೇತ್ರ ಇವರು ಸನ್‌ 2016-17 ರ ಶಾಸಕರ ಸ್ಥಳಿಯ ಪ್ರದೇಶ ಅಭಿವೃಧಿ ಅನುದಾನವನ್ನು ದುರ್ಬಳಿಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕರು ಡಾ. ಸಾರ್ವಭೌಮ ಬಗಲಿ ಆರೋಪಿಸಿದ್ದಾರೆ.
ಪಟ್ಟಣದ ಬಸವೇಶ್ವರ ವೃತ್ತದಲ್ಲಿರು ತಮ್ಮ ಕಾರ್ಯಾಲಯದಲ್ಲಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿರು. ಶಾಸಕರು ಇಂಡಿ ಪಟ್ಟಣದಲ್ಲಿರುವ 6 ಅನುದಾನ ರಹಿತ ಶಾಲೆಗಳಿಗೆ ಪಿಟೋಪಕರಣ ಖರೀದಿಸಲು 12 ಲಕ್ಷ ರೂಪಾಯಿಗಳು ಬಿಡುಗಡೆಗೊಳಿಸಿದ್ದಾರೆ. ಈ ಪಿಟೋಪಕರಣ ಖರೀದಿಸಲು ಈ ಶಾಲೆಯ ಮುಖ್ಯ ಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ. ಕರ್ನಾಟಕ ಶಾಸಕರ ಸ್ಥಳಿಯ ಶಾಸಕರ ಪ್ರದೇಶ ಅಭಿವೃದ್ಧಿಯ ಅನುದಾನದ ಅಡಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಯ ಪಟ್ಟಿಯನ್ನು ಅನುಬಂದ 3ರ ಪರಿಷ್ಕ್ರಿತ ಮಾರ್ಗಸೂಚಿಯಲ್ಲಿ ನೀಡಲಾಗಿದೆ. ಈ ಅನುದಾನವನ್ನು ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜಗಳಿಗೆ ನೀಡಬಹುದಾಗಿದೆ ಹೊರತು ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಅಲ್ಲ. ಈ ಅನುದಾನವನ್ನು ಅನುದಾನ ರಹಿತ ಖಸಗಿ ಶಾಲೆಗಳಿಗೆ ನೀಡಲು ಈ ಯೋಜನೆಯ ಪರಿಷ್ಕೃತ ಮಾರ್ಗಸೂಚಿಗಳು ಮೇ 2014 ರಲ್ಲಿ ಅನುಮತಿ ಇರುವುದಿಲ್ಲ. ಅದಾಗ್ಯೂ ಕೂಡಾ ಈ ಅನುದಾನವನ್ನು ಖಾಸಗಿ ಶಾಲೆಗಳಿಗೆ ನೀಡಿ ಅನುದಾನ ದುರ್ಬಳಿಕೆ ಮಾಡಿಕೊಂಡಿದ್ದಾರೆ ಮತ್ತು ಇದರಲ್ಲಿ 30% ಲಂಚವನ್ನು ಶಾಸಕರು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ನಾನು ಲೋಕಾಯುಕ್ತಕ್ಕೆ ದೂರು ಸಲ್ಲಿಸುವನಿದ್ದೇನೆ. ಲೋಕಾಯುಕ್ತದಲ್ಲಿ ವಿಚಾರಣೆ ನಡೆದರೆ ಶಾಸಕರು ಜೈಲಿಗೆ ಹೋಗುವದಲ್ಲಿ ಎರಡು ಮಾತಿಲ್ಲಾ ಯಾಕೆಂದರೆ ಈ ಪ್ರಕರಣ ದಾಖಲೆಗಳ ಮೇಲೆ ನಿಂತಿದೆ ಹೊರತು ಯಾವದೇ ಸಾಕ್ಷಿಗಳ ಮೇಲೆ ಅವಲಂಬಿತವಾಗಿಲ್ಲ ಎಂದರು.
ಇತ್ತಿತಲಾಗಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಕರ್ನಾಟಕದಲ್ಲಿ ಸುಮಾರು 24 ಹಿಂದು ಕಾರ್ಯಕರ್ತ ಕೊಲೆಗಳಾಗಿದ್ದು. ಕರ್ನಾಟಕ ರಾಜಕೀಯವೆ ಕ್ರಿಮಿನಲ್‌ಮಯವಾಗಿದೆ. ಕ್ರಿಮಿನಲ ಹಿನ್ನಲೆವುಳ್ಳವರು ಶಾಸನ ಸಭೆ ಪ್ರವೇಶಿಸುತ್ತಿರುವುದು ದುರಂತದ ಸಂಗತಿ. ರೈಲ್ವೇ ಸ್ಟೇಶನನಲ್ಲಿ ಕೊಲೆ ಮಾಡಿ ಜೈಲು ಸೇರಿದವರ ಮಕ್ಕಳ ಶಾಸಕರಾಗುತ್ತಿರುವುದು ಮತ್ತು ತಾಯಿಯನ್ನೆ ಕೊಂದಂತವರ ಮಕ್ಕಳ ಚುನಾಯಿತರಾಗಿರುವದನ್ನು ನಾವು ಪತ್ರಿಕೆಯಲ್ಲಿ ಒದಿದ್ದೇವೆ. ಇಂಥ ಕ್ರಿಮಿನಲ್‌ ಹಿನ್ನೆಲೆವುಳ್ಳರು ಶಾಸರಾದರೆ ಸಾಮಾನ್ಯ ನಾಗರಿಕರ ಬಗ್ಗೆ ಸಂಶಯ ಬರುವುದು ಸಹಜ.

loading...