ಶಿಕ್ಷಣದ ಜೊತೆ ಸಂಸ್ಕೃತಿ ಬೆಳೆಸಿಕೊಳ್ಳಿ: ಅನಿಲ

0
23
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಶಿಕ್ಷಣ ಕಲಿಯುದು ನೌಕರಿ ಪಡೆದುಕೊಳ್ಳಿಕ್ಕೆ ಅಲ್ಲ, ನೀವು ಪಡೆದುಕೊಂಡ ಶಿಕ್ಷಣ ಮತ್ತೊಬ್ಬರಿಗೆ ಜ್ಞಾನವನ್ನು ನೀಡುವುದಾಗಬೇಕು, ಅಂತಹ ಶಿಕ್ಷಣವನ್ನು ಈ ಶಾಲೆಯಲ್ಲಿ ಪಡೆದುಕೊಳ್ಳಿತ್ತಿರಿ. ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿಯನ್ನು ಬೆಳಸುವಂತಾ ಕಾರ್ಯವನ್ನು ಮಾಡಬೇಕೆಂದು ಗದಗ ಕ್ರಾಂತಿ ವೀರ ಸಂಗ್ಗೋಳ್ಳಿ ರಾಯಣ್ಣ ಪ.ಪೂ ಕಾಲೇಜಿನ ಉಪನ್ಯಾಸಕ ಅನಿಲ ವೈದ್ಯ ಅಭಿಮತ ವ್ಯಕ್ತ ಪಡಿಸಿದರು.

ಸ್ಥಳೀಯ ಸ್ಟೇಟ ಸಂಯುಕ್ತ ಪದವಿ ಪೂರ್ವ ಮಾಹಾವಿದ್ಯಾಲಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣವನ್ನು ಕಲಿಯುವಾಗ ವಿದ್ಯಾರ್ಥಿಗಳು ನಾನು ಎನ್ನುವುದನ್ನು ಬಿಟ್ಟು, ನಾವು ಎಂಬುದನ್ನು ಅಳವಡಿಸಿಕೊಂಡಾಗ ಸಮಾನತೆ ಕಾಣುತ್ತದೆ. ಶಿಕ್ಷಣ ಇದು ನಿಂತ ನೀರಲ್ಲ ಹಾಗೆ ನೀವು ಹೊಸ ವಿಚಾರಗಳೊಂದಿಗೆ ನದಿಯ ಹಾಗೆ ಹರಿಯುತ್ತಿರಬೇಕು. ಇದರ ಮದ್ಯ ನಿಮ್ಮಲ್ಲಿ ಅಜ್ಞಾನ, ಸುಳ್ಳು, ಮೊಸ ವಂಚನೆ ಮಾಡದಂತೆ ನಿಮ್ಮ ವಿಚಾರ ಧಾರೆಗಳು ಇರಬೇಕು. ಒಬ್ಬರನ್ನು ತುಳಿದು ಬೆಳೆಯುದಕ್ಕಿಂತ ಬಿದ್ದವನನ್ನು ಮೇಲೆತ್ತಿ ಬಾಳುವುದು ನೀಜವಾದ ಬದುಕು. ಸಮಾಜದಲ್ಲಿ ಅನೇಕ ಜನ ಸಾಧರಕರು ನೂರಾರು ಕೊಡುಗೆಯನ್ನು ನೀಡುತ್ತಾ ದೇಶದ ಅಭಿವೃದ್ದಿಯಲ್ಲಿ ತೊಡಗಿದ್ದು ಅವರ ಹಾದಿಯಲ್ಲಿ ಸಾಗಿ ಶೃದ್ದೆಯಿಂದ ಕಾಯಕ ಮಾಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬಹುದು ಎಂದು ಹೇಳಿದರು.
ಬಾಗಲಕೋಟ ಸಂಘದ ಶಾಲಾ ಕಾಲೇಜ್‌ ಆಡಳಿತ ಮಂಡಳಿಯ ಸದಸ್ಯ ರಾಜು ಪಾಟೀಲ ಅದ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಒಂದು ಗುರಿ ಇರಬೇಕು, ಗುರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಅಂದುಕೊಂಡ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಒಳ್ಳೆಯ ಅಂಕ ಪಡೆದು ಶಾಲೆ ಕೀರ್ತಿ ಹೆಚ್ಚಿಸಬೇಕೆಂದು ಹೇಳಿದರು. ಶಾಲೆಯಲ್ಲಿ ಸಂಸ್ಕ್ರುತಿ , ಕ್ರೀಡೆ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಳಿಗೆ ಬಹುಮಾನ ವಿತರಣೆ ಮಾಡಲಾಯಿತು, ಬಾಗಲಕೋಟ ಸಂಘದ ವಿಸ್ತರಣಾಧಿಕಾರಿ ಸಿ.ಎಂ.ಬಳ್ಳೊಳ್ಳಿ, ಎಲ್‌.ಎಂ. ಆರಿಬೆಂಚಿ, ವಿ.ಬಿ.ಅಂಗಡಿ, ಪಿ.ವಿ.ಜಕಾತಿ, ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯ ಕೆ.ಎಸ್‌.ಹೊಸೂರ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಪಲ್ಲವಿ ಮುಖಂಡಿಮಠ ನಿರೂಪಿಸಿದರು. ಎಂ.ಎ.ಕಾಳನ್ನವರ ವಂದಿಸಿದರು.

loading...