ಶಿವ ಜಪದಿಂದಲೇ ಶಿವ ಮೂರ್ತಿ ಲೋಕಾರ್ಪಣೆ

0
39
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಕಳೆದ ಒಂದು ವರ್ಷದಿಂದ ಶಿವನ ಮೂರ್ತಿ ಕಾರ್ಯ ನಡೆದಿದ್ದು ಅಂದುಕೊಂಡಂತೆ ಒಂದುವರ್ಷದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ರಾಮದುರ್ಗ ತಾಲೂಕಾಗಿ ಮಾದರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಶಾಸಕ ಹಾಗೂ ಶಿವನ ಮೂರ್ತಿ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ ಪಟ್ಟಣ ಹೇಳಿದರು.

ಅವರು ಮಂಗಳವಾರದಂದು ರಾಜ್ಯದ ಮೂರನೆಯ ಬೃಹತ್‌ ಶಿವನ ಮೂರ್ತಿಯನ್ನು ಮೂರು ದಿನಗಳ ಕಾಲ ಹೋಮ ಹವಣದೊಂದಿಗೆ ಲೋಕಾರ್ಪಣೆ ಮಾಡಿದ ನಂತರ ಮಾತನಾಡಿ. ನಗರದ ಹೊರವಲಯದಲ್ಲಿ ನೂತನವಾಗಿ ಸುಮಾರು 78 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣ ಕಾರ್ಯ ಮುಕ್ತಾಯವಾಗಿ ಇಡಿ ರಾಜ್ಯದ ಜನರನ್ನು ಪ್ರವಾಸಿ ತಾಣ ವಿಕ್ಷಣೆಗೆಂದು ಕೆಲವೇ ದಿನಗಳಲ್ಲಿ ಕೈಬಿಸಿ ಕರೆಯಲಿದೆ. ಕೆಲಸವನ್ನು ಪ್ರಾರಂಭಿಸಿ ಒಂದು ವರ್ಷವಾಗಿತ್ತು. ಶಿವನ ಮೂರ್ತಿ ನಿರ್ಮಾಣಕ್ಕೆ ಮುರಡೇಶ್ವರ ಮೂರ್ತಿ ಶಿಲ್ಪಿ ಅವರಿಗೆ ವಹಿಸಲಾಗಿತ್ತು, ಅಂದುಕೊಂಡತೆ ಸುಂದರವಾದ ವಿಗ್ರಹವನ್ನು ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲಿ ಸಾಯಿ ಬಾಬಾ ಮಂದಿರ ಮುಕ್ತಾಯ ಅಂಹತದಲ್ಲಿದೆ ಸುಂದರ ಉದ್ಯಾನವನ, ಮಕ್ಕಳಿಗೆ ಆಟವಾಡಲು. ಟ್ರೇನ್‌, ಬೋಟಿಂಗ, ಆಡಿಟೋರಿಯಂ ಸೇರಿದಂತೆ ಅನೇಕ ಮೂಲ ಭೂತ ಸೌಲಭ್ಯಗಳನ್ನು ಒಂದು ವರ್ಷದಲ್ಲಿ ನಿರ್ಮಾಣಗೊಳ್ಳಲಿವೆ ಹಾಗೂ ರಾಮದುರ್ಗ ತಾಲೂಕಾಗಿ ಮಾದರಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವೆ. ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದರು. ಈ ವೇಳೆ ಪುರಸಭೆಯ ಅಧ್ಯಕ್ಷ ರಾಜು ಮಾನೆ. ಮಹಮ್ಮದ ಶೆಫೀ ಬೆಣ್ಣಿ, ಯುವ ಅಧ್ಯಕ್ಷ ರಮೇಶ ಬಂಡಿವಡ್ಡರ ಸೇರಿದಂತೆ ಮುಂತಾದವರು ಇದ್ದರು.

loading...