ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದರೆ ದೇಶ ಅಭಿವೃದ್ಧಿ ಸಾಧ್ಯ: ದೇಶಪಾಂಡೆ

0
22
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಇಂದು ವಿಶ್ವವೆ ಬದಲಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿವೆ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ಪುರೋ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಹತ್ತು ಹಲವು ಜನಪರÀ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಸರಕಾರಿ ಸೌಲಭ್ಯದಡಿ ಲ್ಯಾಪ್‌ ಟಾಪ್‌ ಪಡೆಯದ ವಿದ್ಯಾರ್ಥಿಗಳಿಗೆ ಸಿ.ಎಸ್‌.ಆರ್‌ ಯೋಜನೆಯಡಿ ಲ್ಯಾಪ್‌ ಟಾಪ್‌ ನೀಡುವುದರ ಮೂಲಕ ಶಿಕ್ಷಣ ಕ್ಷೇತ್ರವನ್ನು ಸದೃಢಗೊಳಸಲು ಪ್ರಾಮಾಣಿಕ ಪ್ರಯತ್ನಗೈಯಲಾಗಿದೆ. ಸರಕಾರಿ ಸೌಲಭ್ಯದಡಿ ಲ್ಯಾಪ್‌ ಟಾಪ್‌ ದೊರೆಯದ ಪದವಿ, ಡಿಪ್ಲೋಂ ಮತ್ತು ಬಿ.ಎಡ್‌ ಕಾಲೇಜ್‌ ವಿದ್ಯಾರ್ಥಿಗಳಿಗೆ ಸಿ.ಎಸ್‌.ಆರ್‌ ಯೋಜನೆಯಡಿ ಲ್ಯಾಪ್‌ ಟಾಪ್‌ ಗಳನ್ನು ಕೊಡುವ ಕಾರ್ಯವಾಗುತ್ತಿರುವುದು ರಾಜ್ಯದಲ್ಲೆ ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ. ಇದರÀಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ನಮ್ಮ ಉದ್ದೇಶ ಈ ಕ್ಷೇತ್ರ ಶೈಕ್ಷಣಿಕವಾಗಿ ಅಮೂಲಾಗ್ರ ಯಶಸ್ಸನ್ನು ಸಾಧಿಸಬೇಕೆಂಬುವುದೆ ಆಗಿದೆ ಎಂದು ವಿ.ಆರ್‌.ಡಿ.ಎಂ ಟ್ರಸ್ಟ್‌ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ ಹೇಳಿದರು.
ಈ ಸಂದರ್ಭದಲ್ಲಿ ನಗರದ ಜೆವಿಡಿ ಬಿ.ಎಡ್‌ ಕಾಲೇಜಿನ ಪ್ರಾಚಾರ್ಯೆ ಡಾ: ಸಹನಾ ಸೂರ್ಯವಂಶಿ ಅಧ್ಯಕ್ಷತೆಯನ್ನು ವಹಿಸಿ ವಿ.ಆರ್‌.ಡಿ.ಎಂ ಟ್ರಸ್ಟಿನ ಶೈಕ್ಷಣಿಕ ಕಾಳಜಿಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ನಗರ ಸಭೆಯ ಮಾಜಿ ಅಧ್ಯಕ್ಷೆ ಯಾಸ್ಮಿನ್‌ ಕಿತ್ತೂರು, ಜೆವಿಡಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಯನಿ ನಂದಿನಿ ನಾಯ್ಕ ಉಪಸ್ಥಿತರಿದ್ದರು. ಡಾ: ಸಹನಾ ಸೂರ್ಯವಂಶಿ ಸ್ವಾಗತಿಸಿದರು. ಉಪನ್ಯಾಸಕರುಗಳಾದ ನೀಲಕಂಠ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಅಶ್ವಿನಿ.ಟಿ.ಜಿ ವಂದಿಸಿದರು. ನಾಗೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ದೇಶಪಾಂಡೆ ರುಡ್‌ಸೆಟ್‌ ಯೋಜನಾಧಿಕಾರಿ ವಾಸ್‌.ಎಸ್‌.ಕೆ ಸಹಕರಿಸಿದರು.

loading...