ಸಂಗೀತದೊಂದಿಗೆ ಸಾಹಿತ್ಯವನ್ನು ಅರಿತು ಹಾಡಿ: ಕೋಮಾರ

0
14
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಸಂಗೀತದೊಂದಿಗೆ ಸಾಹಿತ್ಯವನ್ನು ಅರಿತು ಹಾಡಿದರೆ ಹೆಚ್ಚು ಭಾವಪೂರ್ಣವಾಗಿರುತ್ತದೆ, ಮಕ್ಕಳ ಮಟ್ಟಕ್ಕೆ ಪೂರಕವಾದ ಹಾಡುಗಳನ್ನು ಆಯ್ಕೆ ಮಾಡಿ ತರಬೇತಿಗೊಳಿಸಿ ಸ್ಪರ್ಧೆಗಳಿಗೆ ಕಳಿಸುವಂತಾಗಬೇಕು ಎಂದು ಹಾನಗಲ್ ಸಂಗೀತ ಶಿಕ್ಷಕ ಎನ್ ಆಯ್ ಕೋಮಾರ ಹೇಳಿದರು.
ಅವರು ತಾಲೂಕಿನ ಹುಲ್ಲೋರಮನೆ ಗಜಾನನ ಮಾರುತಿ ದೇವಸ್ಥಾನ ಸಭಾ ಮಂಟಪದಲ್ಲಿ ವಜ್ರಳ್ಳಿಯ ಸರಸ್ವತಿ ಸಂಗೀತ ವಿದ್ಯಾಲಯ ಹಮ್ಮಿಕೊಂಡಿದ್ದ ವಾರ್ಷಿಕ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾರಾಯಣ ಭಟ್ಟ ಜೋಗನಗಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ವಿ.ಎಸ್ ಭಟ್ಟ ಮುಂಡಗೋಡಿ ಉಪಸ್ಥಿತರಿದ್ದರು.ವಿದ್ವಾನ್ ದತ್ತಾತ್ರೇಯ ಗಾಂವ್ಕರ್ ಸಾಗತಿಸಿದರು. ಮಹಾದೇವಿ ಭಟ್ಟ ವಂದಿಸಿದರು.ನಂತರ ಸಂಗೀತ ವಿದ್ಯಾಲಯದ ಮಕ್ಕಳು ಹಾಗೂ ಎನ್ ಆಯ್ ಕೋಮಾರ ತಾರಗಾರ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರ ಮನರಂಜಿಸಿತು.ಹಾರ್ಮೋನಿಯಂ ವಾದಕರಾಗಿ ನರಸಿಂಹ ಗಾಂವ್ಕರ್,ತೇಜಸ್ವಿ ಮದ್ಗುಣಿ,ಜಯಂತಿ ಗಾಂವ್ಕರ್,ಬಿ ಎಸ್ ತೇಜಸ್, ತಬಲಾ ಸಾಥ್ ಶ್ರೀಧರ ಗಾಂವ್ಕರ್,ವಿನಯ ಕೋಮಾರ,ಸದಾಶಿವ ಭಟ್ಟ,ಪ್ರಮೋದ ಗಾಂವ್ಕರ್ ಸಹಕಾರ ನೀಡಿದರು.

loading...