ಸದಾಶಿವ ಆಯೋಗದ ವರದಿ ತಿರಸ್ಕರಿಸಲು ಒತ್ತಾಯ

0
18
loading...

ಹಾರೂಗೇರಿ 31: ಸೋರಿಕೆಯಾಗಿರುವ ವರದಿ ಹಾಗೂ ಅಂಶಗಳ ಪ್ರಕಾರ ಇದು ಅವಾಸ್ತವಿಕ ಅವೈಜ್ಞಾನಿಕ ಹಾಗೂ ಅಸಂವಿಧಾನಿಕವಾಗಿದ್ಧು, ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರಕಾರ ಕೂಡಲೇ ತಿರಸ್ಕರಿಸಬೇಕು, ಸಾರ್ವಜನಿಕ ಚರ್ಚೆಯಿಲ್ಲದೇ ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡುವುದನ್ನು ನಿಲ್ಲಿಸಬೇಕೆಂದು ಕೊರಮ ಸಮಾಜದ ಮುಖಂಡ ಮಹಾದೇವ ಭಜಂತ್ರಿ ಹೇಳಿದರು.ಬೆಳಗಾವಿ ಜಿಲ್ಲಾ ಕೊರಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಆಪ್ತ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಮಾತನಾಡಿದದರು.ಈ ಸಂದರ್ಭದಲ್ಲಿ ತುಕಾರಾಮ ಭಜಂತ್ರಿ, ಕೃಷ್ಣಾ ಭಜಂತ್ರಿ, ಮಾರುತಿ ಭಜಂತ್ರಿ, ಶಿವಾಜಿ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಬಸವರಾಜ ಗೋಕಾಕ, ರಾಜು ಐಗಳಿ, ರಾಜು ಸಿಂದಿಕುರಬೇಟ್‌, ಸುರೇಶ ಮೂಡಲಗಿ, ಹಣಮಂತ ಶಿರಸಂಗಿ, ಬಸವರಾಜ ಹುಕ್ಕೇರಿ, ಆನಂದ ವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ಧರು.

loading...