ಸಮಾಜದ ಅಭಿವೃದ್ಧಿಗೆ ಕೈಲಾದ ಸಹಾಯ ಮಾಡುವೆ: ಪಟ್ಟಣ

0
31
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಸಮಾಜದ ಜನರು ಹಂತ ಹಂತವಾಗಿ ಸುಧಾರಣೆ ಹೊಂದುತ್ತಾ ಬರುತ್ತಿದ್ದಾರೆ. ಸಮಾಜದ ಅಭಿವೃದ್ದಿಗಾಗಿ ನಾನು ನನ್ನ ಕೈಲಾದಷ್ಟು ಸಹಾಯ ಸಹಕಾರ ನೀಡುತ್ತನೆ ಎಂದು ವಿಧಾನ ಸಭೆಯ ಮುಖ್ಯ ಸಚೇತ ಅಶೋಕ ಪಟ್ಟಣ ತಿಳಿಸಿದರು.
ಸ್ಥಳಿಯ ಗಾಂಧಿನಗರದ ಶಿವಶರಣ ಹರಳಯ್ಯ ಸಮಾಜ ಹಾಗೂ ಜೈಭೀಮ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಶ್ರೀಗುರು ಬಸವಣ್ಣನವರ, ಶಿವಶರಣ ಸಮಗಾರ ಹರಳಯ್ಯ ಮತ್ತು ಸರ್ವಶರಣರ 90ನೇಯ ಭಜನಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಜನರು ಇಂತಹ ಧಾರ್ಮಿಕ ಕಾರ್ಯಗಳನ್ನು ಮಾಡುವದರಿಂದ ಸಮಾಜದಲ್ಲಿ ಸಮಾನತೆ ಮೂಡುತ್ತದೆ, ಈ ಸಮಾಜದ ಜನರಿಗೆ ಮೀಸಲಾತಿಯನ್ನು ನೀಡಿರುವುದೆ ನಮ್ಮ ಪಕ್ಷದವರು, ಹಿಂದುಳಿದ ಸಮಾಜದ ಜನರಿಗೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಸಮಾಜದ ಅಭಿವೃದ್ದಿ ವಿಷಯದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾನಿದ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣನವರ ಪರಮ ಭಕ್ತ ಹರಳಯ್ಯನರು ಸಾಮಾಜ ಸುಧಾರಣೆಗೆ ಅನೇಕ ವಚನಗಳನ್ನು ರಚನೆ ಮಾಡಿ ಸಮಾಜದಲ್ಲಿ ಸಮಾನತೆಯನ್ನು ಸಾರಿದ ಮಹಾನ ಕಲ್ಯಾಣ ಕ್ರಾಂತಿ ಮಾಡಿದ್ದಾರೆ. ಸಮಾಜದ ಜನರು ಒಂದಾಗಿ ಮುಂಬರುವ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಬೇಕು ಹಾಗೂ ಇವರ ತತ್ವಾದರ್ಶಗಳನ್ನು ಸಾರುವಂತಾ ಕಾರ್ಯವನ್ನು ಮಾಡಬೇಕೆಂದು ಹೇಳಿದರು.
ನಗರದ ಪ್ರಮುಖ ಬೀದಿಗಳಲ್ಲಿ ಶರಣರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ರಾತ್ರಿ ಸಪ್ತಾಹದ ಅಂಗವಾಗಿ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಮಾಜದ ಮುಖಂಡ ಬಿ.ಆರ್‌.ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪುರಸಭೆ ಅಧ್ಯಕ್ಷ ರಾಜು ಮಾನೆ, ಪುರಸಭೆಯ ಸದಸ್ಯರಾದ ಸುರೇಶ ಪತ್ತೇಪೂರ, ಸುಮಂಗಲಾ ರಾಯಬಾಗ, ಸಮಾಜದ ಅಧ್ಯಕ್ಷ ರಾಜು ದೊಡಮನಿ, ಭೀಮರಾವ ಮುರಗೋಡ, ಸುಭಾಷ ಗೊಡಕೆ, ರಾಘವೇಂದ್ರ ದೊಡಮನಿ, ಲಕ್ಷ್ಮಣ ರಾಯಬಾಗ, ಪವನ ಅಗರವಾಲ, ರಮೇಶ ರಾಯಬಾಗ, ಮೋಹನಲಾಲ ಬಣ್ಣಿಗಿಡದ, ರಾಜಕುಮಾರ ತೊರಗಲ್‌, ಲಕ್ಷ್ಮಣ ಹಂಜಗಿ, ಶಿವಾನಂದ ಕಲಾದಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...