ಸರ್ಕಾರ ಸೌಲಭ್ಯ ಸದುಪಯೋಗಲಿ: ಜಗದೀಶ

0
20
loading...

ಕನ್ನಡಮ್ಮ ಸುದ್ದಿ-ಶಿಗ್ಗಾವಿ : ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ, ನಾಟಕ ಮನರಂಜನೆ ಪ್ರದರ್ಶಿಸಲು ವಾರ್ಷಿಕ ಸ್ನೇಹ ಸಮ್ಮೇಳನ ಉತ್ತಮ ವೇದಿಕೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಹೇಳಿದರು.
ಪಟ್ಟಣದ ಸರಕಾರಿ ಪರಿಶಿಷ್ಟ ಜಾತಿಯ ವಸತಿಪಾಠ ಶಾಲೆ, ಸರಕಾರಿ ಮೆಟ್ರಿಕಪೂರ್ವ/ನಂತರದ ಬಾಲಕಿಯರ ವಸತಿ ನಿಲಯ, ಬಾಲಕರ ವಸತಿ ನಿಲಯ ಇವರ ಸಂಯುಕ್ತ ಆರ್ಶಯದಲ್ಲಿ 2017-18 ನೇ ಸಾಲಿನ ವಾರ್ಷಿಕ ಸ್ನೆಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಸತಿ ನಿಲಯದ ಹಾಗೂ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರ ಎಲ್ಲ ಸವಲತ್ತುಗಳನ್ನು ನೀಡಿದೆ ಅವುಗಳ ಸದುಪಯೋಗ ಪಡೆದುಕೊಂಡು ಶೃದ್ದೆಯಿಂದ ಶಿಕ್ಷಣ ಪಡೆದು ಹೆಚ್ಚು ಅಂಕಗಳಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ವಸತಿ ನಿಲಯ, ವಸತಿಶಾಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಮ್‌.ಎಚ್‌.ಪಾಟೀಲ ಮಾತನಾಡಿ ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಿ ಹೆಚ್ಚು ಅಂಕ ಪಡೆದು ರ್ಯಾಂಕ್‌ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಗ್ಗಾಂವ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಸಿ.ಆರ್‌.ಅಂಬೀಗೆರ ವಹಿಸಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷೆ ಪಾರವ್ವ ಆರೇರ, ಸುರೇಶ ರೆಡ್ಡಿ ಎಮ್‌.ಎಚ್‌, ವಸತಿ ಶಾಲೆಯ ಪ್ರಧಾನ ಗುರುಗಳಾದ ರೂಪಾ ಸುಣಗಾರ, ವಸತಿನಿಲಯದ ಮೇಲ್ವಿಚಾರಕರಾದ ಮಂಗಳಾ ಪಾಟೀಲ, ಸಿ.ಎನ್‌.ಕುರೇರ, ಶಿಕ್ಷಕರಾದ ಸಿ.ವ್ಹಿ.ಚೊಂಚಳ್ಳಿ, ಸುರೇಖಾ ಭಿಮನಗೌಡರ, ಶಿಕ್ಷಕರು ಅಡುಗೆ ಸಿಬ್ಬಂದಿಗಳು, ಪಾಲಕರು ಉಪಸ್ಥಿತರಿದ್ದರು.

loading...