ಸಾಧಿಸುವ ಛಲಕ್ಕೆ ಬಡತನ ಮರೆಯಾಗುತ್ತದೆ

0
32
loading...

ಹಾರೂಗೇರಿ 08: ಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಗತ್ಯ, ಹಾರೂಗೇರಿ ಪಟ್ಟಣವು ಜ್ಞಾನದ ಕೇಂದ್ರವಾಗಿ ಮಾರ್ಪಟ್ಟಿದೆ, ಪ್ರತಿಯೊಬ್ಬರು ಆರೋಗ್ಯ ಪೂರ್ಣವಾಗಿ ಬೆಳೆಯಬೇಕು, ಜ್ಞಾನದ ಹಸಿವಿದ್ದರೆ ಬಡತನ ಕಾಣುವುದಿಲ್ಲ ಎಂದು ಸಾಹಿತಿ ಡಾ. ಶಾರದಾ ಮುಳ್ಳೂರ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಪ್ರಗತಿಪರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ, ಶ್ರೀ.ಎಮ್‌.ಬಿ ಪಾಟೀಲ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಬಿಎಸ್‌ಡಬ್ಲ್ಯೂ,ಬಿಕಾಂ ಪದವಿ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ¸ಸಮ್ಮೇಳನ ಪಿಯುಸಿ ದ್ವಿತೀಯ ಹಾಗೂ ಬಿಎಸ್‌ಡಬ್ಲ್ಯೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಗೌರವ ಅತಿಥಿಯಾಗಿ ಅವರು ಮಾತನಾಡಿದರು.ಉಪನ್ಯಾಸಕಿ ಡಾ: ರತ್ನಾ ಬಾಳಪ್ಪನವರ ಮಾತನಾಡಿ, ಇಂದಿನ ಯುವಕರಲ್ಲಿ ಸಂಸ್ಕಾರದ ಕೊರತೆ ಎದ್ಧು ಕಾಣುತ್ತಿದೆ, ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ಮಾಡಬೇಕಾದ ತಾಯಂದಿರು ಇಂದು ಟಿವ್ಹಿ ಮೊಹಕ್ಕೆ ಅಂಟಿಕೊಂಡಿರುವುದು ಜಗತ್ತಿನ ದೊಡ್ಡ ದುರಂತದ ಸಂಗತಿ, ಗುರು, ತಂದೆತಾಯಿ ಅವರ ಸರಿಯಾದ ಮಾರ್ಗದರ್ಶನ ಪ್ರತಿಯೊಬ್ಬ ಮಕ್ಕಳನ್ನು ಸಮಾಜದಲ್ಲಿ ಒಳ್ಳೆಯ ನಾಗರಿಕರನ್ನಾಗಿ ರೂಪಿಸಲು ಸಾಧ್ಯವೆಂದು ಕರೆ ನೀಡಿದರು.ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ಧ ಶೇಗುಣಸಿಯ ವಿರಕ್ತ ಮಠದ ಪರಮಪೂಜ್ಯ ಮಹಾಂತ ದೇವರು ವಿದ್ಯಾರ್ಥಿಗಳ ಜೀವನ ಉಜ್ವಲವಾಗಬೇಕಾದರೆ ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯ, ಶಿಕ್ಷಣ ಪ್ರತಿಯೊಬ್ಬರಿಗೂ ಗೌರವವನ್ನು ತಂದು ಕೊಡುತ್ತದೆ ಎಂದು ಆಶೀವರ್ಚನ ನೀಡಿದರು.ಹಾಸ್ಯ ಕಲಾವಿದ ಕೆ.ಆರ್‌ ಮಹಾಲಿಂಗಪ್ಪಾ ಅನೇಕ ಹಾಸ್ಯ ಚುಟುಕುಗಳ ಮೂಲಕ ಸಭಿಕರ ಹಾಗೂ ನೆರೆದಿದ್ಧ ಅಪಾರ ಜನರ ಮನ ರಂಜಿಸಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.ಈ ಸಂದರ್ಭದಲ್ಲಿ ಸಂಸ್ಥೆ ಚೇರಮನ್‌ ಈರಣಗೌಡ ಪಾಟೀಲ, ಸಹಶಿಕ್ಷಕ ಪಿ.ಬಿ ಪಾಲಯ್ಯ, ಶಿಕ್ಷಣ ಸಂಯೋಜಕ ಸುಖದೇವ ಕಾಂಬಳೆ, ರವೀಂದ್ರ ಪಾಟೀಲ, ಮಹಾಂತೇಶ ಪಾಟೀಲ, ಸುಭಾಸ ಮದರಖಂಡಿ, ಜಾಸ್ಮೀನ ಅಲಾಸೆ, ಅಶೋಕ ಬಿಳಗಿ, ಹಣಮಂತ ಅಥಣಿ, ಸುರೇಶ ಠಕ್ಕಣ್ಣವರ, ಬಿ.ಎನ್‌ ಆಲಗೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರಾಚಾರ್ಯ ಎಸ್‌,ಎಮ್‌ ಪಾಟೀಲ ಸ್ವಾಗತಿಸಿದರು, ಮಾಲಾ ಸದಲಗಿ ಹಾಗೂ ಬಾಹುಬಲಿ ಕೊಂಡಾಳಿ ನಿರೂಪಿಸಿದರು, ಕೊನೆಯಲ್ಲಿ ಕೀರ್ತಿ ಮಾಳಿ ವಂದಿಸಿದರು.

loading...