ಸಿರಿಯಾದಲ್ಲಿ ಉಗ್ರರಿಂದ ರಷ್ಯಾದ ಯುದ್ಧ ವಿಮಾನ ಧ್ವಂಸ

0
28
loading...

ಇದ್ಲಿಬ್, ಫೆ.4-ಸಿರಿಯಾದಲ್ಲಿ ಹಯಾತ್ ತಾರಿರ್ ಅಲ್-ಶಾಮ್(ಎಚ್‍ಟಿಎಸ್) ಉಗ್ರಗಾಮಿಗಳ ಹಿಂಸಾಚಾರ ತೀವ್ರಗೊಂಡಿದೆ. ತಮ್ಮ ಮೇಲೆ ದಾಳಿ ಮಾಡಲು ಬಂದ ರಷ್ಯಾದ ಯುದ್ಧ ವಿಮಾನವೊಂದರನ್ನು ಉಗ್ರರು ಹೊಡೆದುರುಳಿಸಿದ್ದು, ಪೈಲೆಟ್‍ನನ್ನು ಹತ್ಯೆ ಮಾಡಿದ್ದಾರೆ. ಸಿರಿಯಾ ವಾಯುವ್ಯ ಭಾಗದ ಇದ್ಲಿಬ್ಬ ಸಾರಾಖ್ವಿಬ್ ಪ್ರದೇಶದಲ್ಲಿ ಹಾರುತ್ತಿದ್ದ ರಷ್ಯಾ ಫೈಟರ್ ಜೆಟ್‍ನನ್ನು ಉಗ್ರರು ಶನಿವಾರ ಕ್ಷಿಪಣಿ ಮೂಲಕ ಧ್ವಂಸಗೊಳಿಸಿದರು. ಈ ಸಂದರ್ಭದಲ್ಲಿ ಪೈಲೆಟ್ ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಚಿಮ್ಮಿದರೂ ಆತನನ್ನು ಜಿಹಾದಿಗಳು ಗುಂಡು ಹಾರಿಸಿ ಕೊಂದರು ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ರಷ್ಯಾದ ಯುದ್ಧ ವಿಮಾನವನ್ನು ಧ್ವಂಸಗೊಳಿಸಿ ಪೈಲೆಟ್‍ನನ್ನು ಹತ್ಯೆ ಮಾಡಿರುವುದನ್ನು ಎಚ್‍ಟಿಎಸ್ ಉಗ್ರರು ವಾರ್ತಾ ವಾಹಿನಿಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಖಚಿತಪಡಿಸಿದ್ಧಾರೆ.

ಹೆಗಲ ಮೇಲಿನ ಕ್ಷಿಪಣಿ ಉಡಾವಣಾ ವಾಹಕದಿಂದ ಹಾರಿಸಬಲ್ಲ ಮಿಸೈಲ್ ಮೂಲಕ ರಷ್ಯಾ ಫೈಟರ್ ಜೆಟ್‍ನನ್ನು ನಾವು ಪತನ ಮಾಡಿದ್ದೇನೆ. ತಪ್ಪಿಸಿಕೊಳ್ಳುತ್ತಿದ್ದ ಪೈಲೆಟ್‍ನನ್ನೂ ನಾವು ಮುಗಿಸಿದ್ದೇವೆ. ಇದ್ಲಿಬ್‍ನಲ್ಲಿ ನಮ್ಮ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಗೆ ಪ್ರತೀಕಾರವಾಗಿ ನಾವು ಈ ದಾಳಿ ನಡೆಸಿದ್ದೇವೆ ಎಂದು ಎಚ್‍ಟಿಎಸ್‍ನ ವಾಯು ರಕ್ಷಣಾ ದಳದ ಮುಖ್ಯಸ್ಥ ಮಹಮದ್ ಅಲ್-ಟರ್ಕ್‍ಮನಿ ತಿಳಿಸಿದ್ದಾನೆ.

loading...