ಸೈನಿಕರು ದೇಶದ ರಕ್ಷಕರು: ಸಂತೋಷಜಿ

0
31
loading...

ಗಂಗಾವತಿ: ನಮ್ಮ ದೇಶವನ್ನು ಮತ್ತು ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ರಕ್ಷಣೆ ಮಾಡುತ್ತಿರುವ ವೀರ ಸೈನಿಕರು ದೇವರಿದ್ದಂತೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಲೋಜಿ ಸಂತೋಷಜಿ ತಿಳಿಸಿದರು.
ಡ್ರೀಮ್‌ ವಲ್ಡ್‌ರ್ ಕರಾಟೆ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿವೃತ್ತ ಯೋಧರಿಗೆ ಸನ್ಮಾನಿಸಿ ಅವರು ಮಾತನಾಡಿದರು. ಯೋಧರು ತಮ್ಮ ತಂದೆ, ತಾಯಿ, ಪತ್ನಿಯನ್ನು ಬಿಟ್ಟು ದೇಶದ ಗಡಿಯನ್ನು ಕಾಯುತ್ತಿದ್ದಾರೆ. ಇವರ ಸಾಧನೆಯನ್ನು ಎಲ್ಲರೂ ಬೆಂಬಲಿಸಬೇಕು ಎಂದು ತಿಳಿಸಿದರು. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಧರಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ದೇಶ ರಕ್ಷಣೆಗಾಗಿ ಯುವಕರು ಸೈನ್ಯ ಸೇರ್ಪಡೆಗೊಳ್ಳಬೇಕು.
ಯುವಕರು ದೇಶ ಪ್ರೇಮ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು. ನಿವೃತ್ತಿ ಹೊಂದಿದ ಪೊಲೀಸರಿಗೆ, ವೈದ್ಯರಿಗೆ, ರೈತರಿಗೆ, ಅಂಗವಿಕಲರಿಗೆ, ಮಾಜಿ ಕ್ರೀಡಾಪಟುಗಳಿಗೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಇದೇ ಸಂದರ್ಭದಲ್ಲಿ ಅವರು ಸನ್ಮಾನಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಉತ್ತರ ಕರ್ನಾಟಕ ಕಟಾ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.
ಈ ಪಂದ್ಯಾವಳಿಯಲ್ಲಿ ಗಂಗಾವತಿ, ಗದಗ, ಕೊಪ್ಪಳ, ಹೊಸಪೇಟೆ, ಲಕ್ಷ್ಮೇಶ್ವರ ಮತ್ತು ದಾವಣಗೆರೆ ಇನ್ನಿತರ ಸ್ಥಳಗಳಿಂದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಬ್ಲಿಕ್‌ ಪವರ್‌ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷÀ ಆರ್‌.ಬಿ ಪಾಟೀಲ್‌, ಹುಮಾ ವುಮೆನ್‌ ಮೈನಾರಿಟಿ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ ಅಧ್ಯಕ್ಷೆ ಶಾಹೀನ್‌ ಕೌಸರ್‌, ಶಾರದಾ ಪಬ್ಲಿಕ್‌ ಸ್ಕೂಲ್‌ ಕಾರ್ಯದರ್ಶಿÀ ನಾಗರಾಜ ಹಿರೇಮಠ, ಶ್ರೀಜ್ಞಾನ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಜಿ. ಶರಣಕುಮಾರ, ಜನ್ಮಭೂಮಿ ಕರವೇ ಜಿಲ್ಲಾಧ್ಯಕ್ಷರಾದ ಗುರುಸಿದ್ದಪ್ಪ ಭೋವಿ, ಜಿಲ್ಲಾ ಸಂಚಾಲಕರಾದ ಎಸ್‌.ಎಸ್‌ ಹೈದರ ಅಲಿ ಪಾಲ್ಗೊಂಡಿದ್ದರು.

loading...