ಸೈಯ್ಯದ ಸಾದತ್‌ ದರ್ಗಾ ಉರುಸ್‌ಗೆ ಚಾಲನೆ

0
16
loading...

ಹಾನಗಲ್ಲ : ಇಲ್ಲಿನ ಹಳೇಬಸ್‌ ನಿಲ್ದಾಣದ ಸೈಯ್ಯದ ಸಾದತ್‌ ದರ್ಗಾದ 8 ದಿನಗಳ ಕಾಲ ನಡೆಯಲಿರುವ ಉರುಸ್‌ಗೆ ಮೊದಲನೆ ದಿನ ಶುಕ್ರವಾರ ಗಲೀಫ್‌ ಹೊರಡಿಸಲಾಗುತ್ತದೆ ಪದ್ದತಿಯಂತೆ ಹಾನಗಲ್ಲ ಪೋಲಿಸ್‌ ಠಾಣೆಯಿಂದ ಚಾಲನೆ ನೀಡಲಾಗುತ್ತಿದ್ದು, ಶುಕ್ರವಾರ ರಾತ್ರಿ ಠಾಣೆಯ ಅಧಿಕಾರಿ ಎ.ಆರ್‌ ಮುಂದಿಲಮನಿ ಗಲೀಫ್‌ ಹೊರುವಮೂಲಕ ಚಾಲನೆ ನೀಡಿದರು.
ಈ ಗಲೇಫ್‌ನ್ನು ಮುಸ್ಲಿಂ ಭಾಂದವರು ಆರ್ಕೆಸ್ಟ್ರಾ ಮೂಲಕ ಬೆಳಿಗ್ಗೆ ಪಟ್ಟಣದ ದರ್ಗಾಕ್ಕೆ ತರಲಾಗುತ್ತದೆ. ಸೈಯ್ಯದ ಸಾದತ್‌ ದರ್ಗಾದ ಮೇಲೆ ತೊಡಿಸಿ ಉರುಸ್‌ ಆಚರಿಸಲಾಗುತ್ತದೆ. ಗಲೇಫ್‌ನ್ನು ಪಟ್ಟಣದ ಕಂಚಗಾರ ಮೊಹಲ್ಲಾ, ಸೋಮವಾರ ಪೇಟ, ಭೋವಿಗಲ್ಲಿ, ಗರಡಿಮನಿ ಮೂಲಕ ಬೆಳಿಗ್ಗೆವರೆಗೆ ಚಲನಚಿತ್ರ ಗೀತೆ, ಹಾಡುಗಳ ಮೂಲಕ ಮನರಂಜನೆ ನಡೆಸಲಾಗುತ್ತದೆ.
ಈ ಸಂದರ್ಭದಲ್ಲಿ ಅಬ್ದುಲ್‌ಘನಿ ಪಾಳಾ, ನೌಶಾದ ರಾಣೇಬೆನ್ನೂರ, ಖುರ್ಷಿದ ಹುಲ್ಲತ್ತಿ, ನಿಸಾರ್‌ ಖಾಜಿ, ನಿಸಾರಹಮ್ಮದ ಗೌಂಡಿ, ಫಕೀರ್‌ಗಳಾದ ಸೈಯ್ಯದ ಬುಡುನ್‌ ಷಾ, ಸೈಯ್ಯದ ಚಾಂದಫೀರಾ, ಸೈಯ್ಯದ ಖಾದರ್‌ ಬಾಷಾ ಸೇರಿದಂತೆ ಬಾಂಧವರು ಇದ್ದರು.

loading...