ಸ್ಕೌಟ್‌-ಗೈಡ್ಸ್‌ದಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ವೃದ್ಧಿ

0
21
loading...

ಗದಗ: ಭಾರತ ಸ್ಕೌಟ್‌ ಮತ್ತು ಗೈಡ್ಸ್‌ ಮಕ್ಕಳಲ್ಲಿ ಶಿಸ್ತು, ಸೇವೆ, ರಾಷ್ಟ್ರೀಯ ಮನೋಭಾವ, ಕೌಶಲ್ಯಗಳನ್ನು ಬೆಳೆಸುವ ಸಂಸ್ಥೆಯಾಗಿದ್ದು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೋಳ್ಳುವ ಮೂಲಕ ಶಿಸ್ತುಬದ್ಧ ಜೀವನ ನಡೆಸಬೇಕೆಂದು ಡಿಡಿಪಿಐ ಕಾರ್ಯಾಲಯದ ಉಪಯೋಜನಾ ಸಮನ್ವಯ ಅಧಿಕಾರಿ ವ್ಹಿ.ವ್ಹಿ.ನಡುವಿನಮನಿ ಅಭಿಪ್ರಾಯಪಟ್ಟರು.
ಅವರು ಬುಧವಾರ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಸ.ಹಿ.ಪ್ರಾ.ಡಿ.ಪಿ.ಇ.ಪಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಸ್ಕೌಟ್ಸ್‌ ದಳದ ದೀಕ್ಷಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಇನ್ನೊರ್ವ ಮುಖ್ಯ ಅತಿಥಿ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್‌.ತಳವಾರ ಅವರು ಮಾತನಾಡಿ ದೀಕ್ಷೆ ಪಡೆದ ಮಕ್ಕಳು ಜಿಲ್ಲಾ ರಾಜ್ಯ ಮತ್ತು ರಾಷ್ಟ್ರಪತಿ ಪುರಸ್ಕಾರಗಳನ್ನು ಪಡೆದು ಶಾಲೆಗೆ ಕೀರ್ತಿ ತರಬೇಕೆಂದರು.
ತಾ.ಪಂ ಸದಸ್ಯರಾದ ಶ್ರೀಮತಿ ಸುಜಾತ ಖಂಡು ಮಕ್ಕಳಿಗೆ ಕಂಠ ವಸ್ತ್ರ, ಕ್ಯಾಪ್‌ ತೊಡಿಸಿ ಸ್ಕೌಟ್ಸ್‌ ಮಕ್ಕಳಿಗೆ ಶುಭ ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ್ದ ಭಾರತ್‌ ಸ್ಕೌಟ್‌ ಮತ್ತು ಗೈಡ್ಸ್‌ ತಾಲ್ಲೂಕಾ ಸಂಸ್ಥೆ ಗದಗ ಗ್ರಾಮೀಣದ ಉಪಾಧ್ಯಕ್ಷ ಎನ್‌.ಸಿ.ಮುಕ್ಕಣ್ಣವರ ಮಾತನಾಡಿ ಇದು ನಿಮ್ಮ ಜೀವನದ ಅತ್ಯಂತ ಮಹತ್ವದ ದಿನ ನೀವು ವಿಶ್ವ ಸ್ಕೌಟ್ಸ್‌ ಸದಸ್ಯರಾದ ದಿನ ಮತ್ತು ಪ್ರತಿಜ್ಞೆಯ 3 ಅಂಶಗಳಂತೆ ಕಾರ್ಯ ನಿರ್ವಹಿಸಿ ಉತ್ತಮ ಹೆಸರು ತರಬೇಕೆಂದು ಹೇಳಿದರು. ಭಾರತ ಸ್ಕೌಟ್ಸ್‌ & ಗೈಡ್ಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಹೆಚ್‌ ಪೂಜಾರ ಮಾತನಾಡಿ ಶಾಲೆಯ ಮುಖ್ಯೋಪಾಧ್ಯಾಯರು ದಳದ 32 ಸದಸ್ಯರಿಗೆ ಉಚಿತ ಸಮವಸ್ತ್ರ ಒದಗಿಸಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಬೆಳವಣಿಗೆ ವಿಶೇಷ ಕೊಡುಗೆ ನೀಡಿದ್ದಾರೆ ಮತ್ತು ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಎನ್‌.ಜಿ.ಓ ದ ರಾಜ್ಯ ಪರಿಷತ್‌ ಸದಸ್ಯ ವ್ಹಿ.ಬಿ.ಪೋಲಿಸ್‌ಪಾಟೀಲ ಮಾತನಾಡಿ ಸೇವೆಯೆಂಬುದು ಕೇವಲ ಸ್ಕೌಟ್ಸ್‌ & ಗೈಡ್ಸ್‌ ಮಕ್ಕಳಿಗೆ ಅಷ್ಟೇ ಅಲ್ಲ ಅದರಲ್ಲಿ ಕಾರ್ಯನಿರ್ವಹಿಸುವ ಸ್ಕೌಟ್‌ ಮಾಸ್ಟರ್‌ ಮತ್ತು ಗೈಡ್‌ ಕ್ಯಾಪ್ಟನ್‌ರು ತಾಲ್ಲೂಕಾ, ಜಿಲ್ಲಾ, ರಾಜ್ಯ ರಾಷ್ಟ್ರ ಹಂತದ ಪದಾಧಿಕಾರಿಗಳ ಇದರಲ್ಲಿ ಅನೇಕ ವಿಧದ ಸೇವೆಯನ್ನು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.
ಸ್ಕೌಟ್‌ ಮಾಸ್ಟರ್‌ ಎಸ್‌.ಎಮ್‌ ಪಾಟೀಲ ಹಾಗೂ ಕೆ.ಎಸ್‌.ಬಾಳಕಾಯಿ ಮಕ್ಕಳಿಗೆ ಪ್ರವೇಶ ಪದಕ ನೀಡುವದರ ಮೂಲಕ ದೀಕ್ಷೆ ನೀಡಿದರು. ಗದಗ ಗ್ರಾಮೀಣ ವಲಯದ ಟ್ರೇನಿಂಗ್‌ ಕೌ£್ಸಲರಾದ ಸಿ.ಎಸ್‌.ತೋಟಪ್ಪನವರ ದೀಕ್ಷಾ ಸಮಾರಂಭವನ್ನು ನಡೆಸಿಕೊಟ್ಟರು. ಗದಗ ಜಿಲ್ಲಾಪ್ರಧಾನ ಕಾರ್ಯದರ್ಶಿ ಜಿ.ಹೆಚ್‌.ಪೂಜಾರ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಎನ್‌.ವ್ಹಿ ಕಿತ್ತೂರ ಶೀಮತಿ ಆರ್‌.ಕೆ.ಹಳ್ಯಾಳ, ಶ್ರೀಮತಿ ಸುಧಾ ಬೇವಿನಮರದ ಉಪಸ್ಥಿತರಿದ್ದರು. ಕೆ.ಎಫ್‌.ಹಳ್ಯಾಳ, ಎಸ್‌.ಆರ್‌.ಬಂಡಿ, ಬಿ.ಬಿ ಹಡಪದ, ಎಮ್‌. ವ್ಹಿ. ಬಸರಿಕಟಿ,್ಟ ಯಲ್ಲಪ್ಪ ಮುಳ್ಳಾಳ, ಶ್ರೀಮತಿ ಪ್ರೇಮಾ ಗರ್ಜಪ್ಪನವರ, ನಾಗರಾಜ ಹಡಪದ, ಇಮಾಮಸಾಬ ನದಾಫ, ಸಿ.ಸಿ.ಕುರಹಟ್ಟಿ, ಬಿ.ಎಸ್‌.ಕಣವಿ, ಕೆ.ಬಿ.ಕೊಣ್ಣೂರ. ಎನ್‌.ಎಸ್‌.ನೇಕಾರ, ಪಿ.ಡಿ. ಮಂಗಳೂರ, ಶ್ರೀಮತಿ ಹೆಚ್‌ ಎಮ್‌ ಮುನಶಿ, ಪಿ.ವ್ಹಿ ಗೊಂದಕರ, ಪಿ.ಕೆ.ಕೊರಡೂರ ಉಪಸ್ಥಿತರಿದ್ದರು. ಎಸ್‌.ಎಮ್‌ ಪಾಟೀಲ ಸ್ವಾಗತಿಸಿದರು. ಕೆ.ಎಸ್‌. ಬಾಳಿಕಾಯಿ ನಿರೂಪಿಸಿ ವಂದಿಸಿದರು. ಸಿ.ಎಸ್‌.ತೋಟಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.

loading...