ಸ್ಪರ್ಧಾತ್ಮಕ ದರದಲ್ಲಿ ಹಾಲು ಮಳಿಗೆ: ಶಾಸಕ ಅಶೋಕ

0
26
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಸಾರ್ವಜನಿಕರ ಅನುಕೂಲಕ್ಕಾಗಿ ಉತ್ಕೃಷ್ಟ ಗುಣಮಟ್ಟದ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಾಗುವಂತೆ ಕ್ಷೀರ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಬೆಳಗಾವಿ ಹಾಲು ಒಕ್ಕೂಟದಿಂದ ಕ್ಷೀರ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಹಾಲು ಪೂರೈಸುವವರಿಗೆ ಲೀಟರಿಗೆ 4 ರೂ. ಪ್ರೋತ್ಸಾಹ ಧನ ನೀಡುತ್ತಿದ್ದರಿಂದ ಇಂದು ಹಾಲು ಹಾಗೂ ಹಾಲಿನ ಇತರ ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತಿದೆ ಎಂದರು.
ಮಹಿಳೆಯರ ಸ್ವಾವಲಂಬನೆಗಾಗಿ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಹಸು ಖರೀದಿಗೆ ಹಾಗೂ ಇತರ ಗುಡಿಕೈಗಾರಿಕೆಗಳಿಗೆ ಸರಕಾರ ಸಹಾಯ ಧನ ನೀಡುತ್ತಿದ್ದು, ಸದುಪಯೋಗ ಪಡೆಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕೆಂದು ಅವರು ಕರೆ ನೀಡಿದರು.
ಕೆ.ಎಂ.ಎಫ್‌ ನಿರ್ದೇಶಕ ಉದಯಸಿಂಹ ಶಿಂಧೆ ಪ್ರಾಸ್ತಾವಿಕ ಮಾತನಾಡಿದರು. ತಹಸೀಲ್ದಾರ ಆರ್‌.ಪಿ.ಕಟ್ಟಿ, ಎ.ಪಿ.ಎಂ.ಸಿ ಅಧ್ಯಕ್ಷ ಬಿ.ಎಂ.ಪಾಟೀಲ, ಹಾಲು ಒಕ್ಕೂಟದ ವ್ಯವಸ್ಥಾಪಕ ಸೋಮಪ್ರಸನ್‌, ಪಾಂಡುರಂಗರಾವ್‌, ತಾಂತ್ರಿಕ ಅಧಿಕಾರಿ ಶಿವಕುಮಾರ, ಮಾರುಕಟ್ಟೆ ಅಧಿಕಾರಿ ಸಾಗರ ಪಾಟೀಲ, ಮಜಾಹಿದ್‌ ಪಿರಜಾದೆ, ಪಶುವೈದ್ಯಾಧಿಕಾರಿ ಡಿ.ಎಸ್‌.ಜ್ಯೋಶಿ, ವಿಸ್ತರಣಾಧಿಕಾರಿ ಸಂಜೀವ ತಳವಾರ, ಸಂಭಾಜಿ ಕದಂ, ಬಸರಾಜ ಹೊಸಮನಿ ಉಪಸ್ಥಿತರಿದ್ದರು.

loading...