ಹಣ ಪಡೆದಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹ

0
23
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ತಾಲೂಕಿನ ಪಾಳಾದಿಂದ ಕೊಡಂಬಿಗೆ ಹೊಗುವ ಮಾರ್ಗ ಮಧ್ಯವಿರುವ ಭದ್ರಾಪೂರ ಗ್ರಾಮದ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಮನೆಗಳ ಹತ್ತಿರ ಕಳೆದ ನಾಲ್ಕೈದು ದಿನಗಳ ಹಿಂದೆ ಅರಣ್ಯ ಇಲಾಖೆಯವರು ಅಗಳ ತೆಗೆಯುವ ಸಂದರ್ಭದಲ್ಲಿ ಆ ಭಾಗದ ಉಪವಲಯ ಅರಣ್ಯಾಧಿಕಾರಿ ಜಾಗ ಬಿಡುವುದಾಗಿ ಅಲ್ಲಿರುವ ಮನೆಗಳ ಮಾಲೀಕರಿಂದ ತಲಾ 2500 ರೂಪಾಯಿ ಹಣ ತೆದುಕೊಂಡಿರುವ ಬಗ್ಗೆ ಬಲವಾದ ಆರೋಪ ಕೇಳಿಬಂದಿದೆ.
ಈ ಕುರಿತು ಪರ್ತಕರ್ತರು ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯವರು ಅಗಳ ತೆಗೆದಿರುವ ಜಾಗದ ಪಕ್ಕದಲ್ಲಿರುವ ಮನೆಯವರನ್ನು ವಿಚಾರಿಸಿದಾಗ, ಅರಣ್ಯ ಇಲಾಖೆಯವರು ನಮ್ಮ ಮನೆಯ ಗೊಡೆಗೆ ಹಚ್ಚಿ ಅಗಳ ತೆಗೆಯಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ನಮಗೆ ಮನೆಯ ಹಿಂದುಗಡೆ ಸ್ವಲ್ಪವಾದರೂ ಜಾಗ ಬಿಡಿ. ಜಾನುವಾರುಗಳನ್ನು ಕಟ್ಟಿಕೊಳ್ಳವುದಕ್ಕೆ, ಗೃಹ ಉಪಯೋಗಿ ಹಾಗೂ ಕೃಷಿ ಬಳಕೆ ವಸ್ತುಗಳನ್ನು ಇಟ್ಟುಕೊಳ್ಳಲು ಅನುಕೂಲವಾಗುತ್ತದೆ ಎಂದು ಇಲ್ಲಿನ ಉಪವಲಯ ಅರಣ್ಯಾಧಿಕಾರಿಗಳನ್ನು ಕೇಳಿಕೊಂಡಾಗ ನಿಮಗೆ ಜಾಗ ಬಿಡಬೇಕಾದರೆ ನೀವು ನಮಗೆ ಹಣ ಕೊಡಬೇಕು ಎಂದು ಹೇಳಿದರು. ಒಟ್ಟಿನಲ್ಲಿ ಜಾಗ ಸಿಕ್ಕರೆ ಸಾಕು ಎಂದು ನಾವೆಲ್ಲರೂ ಸೇರಿಕೊಂಡು ಅವರಿಗೆ ತಲಾ ಒಂದು ಮನೆಯವರು 2500 ರೂಪಾಯಿ ನೀಡಿದ ನಂತರ ಅವರು ಸ್ವಲ್ಪ ಜಾಗ ಬಿಟ್ಟು ಅಗಳ ತೆಗೆದಿದ್ದಾರೆ ಎಂಬ ಮಾಹಿತಿ ತಿಳಿದು ಬಂತು.
ಅಗಳದ ಹೊರಗೆ ಬಿಡಲಾದ ಮರಗಳ ಇಲಾಖೆಗೆ ಸೇರಿದ್ದವವಾಗಿವೆ. ಜಿ.ಪಿ.ಎಸ್‌, ಮಾಡಿರುವ ಅವರ ಮನೆಯ ಜಾಗ ಅವರ ಹೆಸರಿನಲ್ಲಿ ಆದ ನಂತರ ಆ ಮರಗಳನ್ನು ಇಲಾಖೆಯ ಪರವಾನಿಗೆ ತೆಗೆದುಕೊಂಡು ಕಟಾವು ಮಾಡುತ್ತೇವೆ ಅಲ್ಲಿಯವರೆಗೂ ಆ ಮರಗಳ ಅಲ್ಲಿಯೇ ಇರುತ್ತವೆ. ಮತ್ತು ನೀವು ಆರೋಪಿಸಿದ ವಿಷಯದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ನಾವು ಈಗ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಮ್ಮ ಇಲಾಖೆಯ ಸಿಬ್ಬಂದಿಗಳು ಯಾರಾದರೂ ಜಾಗ ಬಿಡುವುದಾಗಿ ಅಲ್ಲಿರುವ ಮನೆಗಳ ಮಾಲೀಕರ ಹತ್ತಿರ ಹಣ ತೆಗೆದುಕೊಂಡ ಬಗ್ಗೆ ತಿಳಿದು ಬಂದಲ್ಲಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

loading...