ಹೊನ್ನಿಯಾಳದಲ್ಲಿ ನೀಲಮಣಿ 65 ನೇ ವರ್ಷಾಚರಣೆ

0
19
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಇತ್ತಿಚೆಗೆ ತಾಲೂಕಿನ ಹೊನ್ನಿಯಾಳ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮರಾಠಿ ಕಿರಿಯ ಪ್ರಾಥಮಿಕ ಶಾಲೆಗಳ ಜಂಟಿಯಾಗಿ ನೀಲಮಣಿ (65 ನೇ) ವರ್ಷಾಚರಣೆ ಹಾಗೂ 7 ನೇ ವರ್ಗದ ಮಕ್ಕಳ ಬಿಳ್ಕೋಡುಗೆ ಸಮಾರಂಭ ಜರುಗಿತ್ತು.
ದತ್ತವಾಡದ ಬಾಬಾ ಮಹಾರಾಜ ಆಶ್ರಮದ ಶ್ರೋ.ಬ್ರ.ಶ್ರೀ. ಅದೃಶ್ಯ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ಎಸ್‍ಡಿಎಂಸಿ ಅಧ್ಯಕ್ಷ ಸಂತೋಷಕುಮಾರ ಮಠದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯನ್ನು ದತ್ತು ಸ್ವೀಕರಿಸಿರುವ ಮಹಾದೇವ ತಳವಾರ ಪ್ರಾಸ್ತವಿಕವಾಗಿ ಮಾತನಾಡಿ ಸರಕಾರಿ ಶಾಲೆಗಳ ಅಭಿವೃದ್ದಿಗೆ ಕೈಜೋಡಿಸುವಂತೆ ಸಮುದಾಯಕ್ಕೆ ಕರೆ ನೀಡಿದರು. ಡಿ.ಎಲ್. ಕಿತ್ತೂರ ಮರಾಠಿ ಶಾಲೆಯ ವಾರ್ಷಿಕ ವರದಿವಾಚಿಸಿದರು. ಎಸ್.ಬಿ.ಮರಲಿಂಗನ್ನವರ ಕನ್ನಡ ಶಾಲೆಯ ವಾರ್ಷಿಕ ವರದಿ ವಾಚಿಸಿದರು. ದೇಯಣ್ಣವರ ಹಾಗೂ ಎಸ್.ಎ. ಕೆಂಗೇರಿ ಶಾಲೆಗೆ ದೇಣಿಗೆ ನೀಡಿದ ಶಿಕ್ಷಣ ಪ್ರೇಮಿಗಳನ್ನು, ಕರ್ತವ್ಯ ನಿರ್ವಹಿಸಿರುವ ಶಿಕ್ಷಕರನ್ನು, ಎಸ್.ಡಿ.ಎಮ್.ಸಿ ಯ ಸರ್ವಸದಸ್ಯರನ್ನು, ಹಳೆಯ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಸತ್ಕರಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಕಿತ್ತೂರ ಚೆನ್ನಮ್ಮ ಮತ್ತು ಕಲ್ಯಾಣ ಕ್ರಾಂತಿ ನಾಟಕಗಳು ಜಮಮನಸೂರೆಗೊಂಡವು, ಶಾಲೆಯ ಪ್ರಧಾನ ಗುರುಗಳಾದ ಎಮ್.ಡಿ. ಕುರಗುಂದಿ ಸ್ವಾಗತಿಸಿದರು. ಎಮ್.ಎನ್. ಬಮ್ಮನವಾಡಿ ಕಾರ್ಯಕ್ರಮ ನಿರೂಪಿಸಿದರು. ಎಸ್.ವಾಯ್. ಮುಸಲ್ಮಾರಿ ವಂದಿಸಿದರು.

loading...