ಹೊಸ ತಂತ್ರಜ್ಞಾನಗಳ ವಿಷಯದ ಕುರಿತು ಕಾರ್ಯಾಗಾರ

0
19
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಹೈವೈ ಪ್ಲ್ಯಾನಿಂಗ್‌ ಮತ್ತು ಪೇವ್‌ಮೆಂಟ್‌ ಡಿಸೈನ್‌ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವು ಇಲ್ಲಿನ ಇಂಜಿನೀಯರಿಂಗ್‌ ಕಾಲೇಜಿನ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ವತಿಯಿಂದ ಶುಕ್ರವಾರ ಹಾಗೂ ಶನಿವಾರ ನೆರವೇರಿತು.
ಬೆಂಗಳೂರು, ಬೆಳಗಾಂವ, ಮೈಸೂರು, ಗದಗ, ಹುಲಕೋಟಿ, ಧಾರವಾಡ, ಹುಬ್ಬಳ್ಳಿ, ಕೊಲ್ಹಾಪುರ, ಹಾಸನ ಮೊದಲಾದ ಊರುಗಳಲ್ಲಿರುವ ಇಂಜಿನೀಯರಿಂಗ್‌ ಕಾಲೇಜುಗಳ ಸಿವಿಲ್‌ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಹಾಗೂ ಧಾರವಾಡ, ಬೆಳಗಾಂವ ಪಿಡಬ್ಲ್ಯೂಡಿ ಇಂಜಿನೀಯರ್‌ಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಹೆದ್ದಾರಿ ನಿರ್ಮಾಣದಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಸರಕ್ಕೆ ಪೂರಕವಾಗಿರುವಂತೆ ಮಾಡುವುದು ಹಾಗೂ ಅದಕ್ಕೆ ಸಂಬಂಧಪಟ್ಟ ಅಭಿವೃದ್ಧಿಪಡಿಸಿದ ಸಾಫ್ಟವೇರ್‌ ಬಗ್ಗೆ ವಿಚಾರ ವಿನಿಮಯ ನಡೆಸುವ ಬಗ್ಗೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಧಾರವಾಡದ ಇನ್‌ಸ್ಟಿಟ್ಯೂಟ್‌ ಆಫ್‌ ಇಂಜಿನಿಯರ್ಸ್‌ (ಇಂಡಿಯಾ)ದ ಕಾರ್ಯದರ್ಶಿ ಡಾ|| ಆರ್‌.ಎಲ್‌. ಚಕ್ರಸಾಲಿ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಇಂಜಿನೀಯರಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ|| ವ್ಹಿ.ವ್ಹಿ. ಕಟ್ಟಿ, ಸಿವಿಲ್‌ ವಿಭಾಗದ ಮುಖ್ಯಸ್ಥರಾದ ಹಾಗೂ ಕಾರ್ಯಕ್ರಮದ ಸಂಚಾಲಕ ಪ್ರೊ. ಜಿ.ವಿ. ಕುರ್ಲಿ ವಿಚಾರ ಸಂಕಿರಣದ ಪಕ್ಷಿನೋಟವನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸುರತ್ಕಲ್‌ನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಡಾ|| ರವಿ ಶಂಕರ್‌ ಮತ್ತು ಡಾ|| ರವಿರಾಜ್‌ ಹೆಚ್‌. ಮೂಲಂಗಿ ಉಪನ್ಯಾಸ ನೀಡಿದರು. ಪ್ರೊ. ಆಶಿಕ್‌ ಬಳ್ಳಾರಿ ಪೇವ್‌ಮೆಂಟ್‌ ಡಿಸೈನ್‌ ಸಾಫ್ಟವೇರ್‌ಗಳ ಕುರಿತಾಗಿ ಪ್ರಾಯೋಗಿಕ ತರಬೇತಿಯನ್ನು ನೀಡಿದರು.
ಪ್ರೊ. ಲಕ್ಷ್ಮಿ ಹೆಚ್‌. ನಿರೂಪಿಸಿದರು. ಪ್ರೊ. ಸೀಮಾ ಬಿ. ಸ್ವಾಗತಿಸಿದರು. ಪ್ರೊ. ಸುಷ್ಮಾ ವಿ. ಆರ್‌. ವಂದಿಸಿದರು. ಸಿವಿಲ್‌ ವಿಭಾಗದ ಪ್ರೊ. ಹರ್ಷ ಜಾಧವ್‌, ಪ್ರೊ. ಗಿರೀಶ್‌ ಸಿ., ಪ್ರೊ. ಎಸ್‌. ಜಿ. ಹಿರೇಮಠ. ಪ್ರೊ. ಹರ್ಷವರ್ಧನ್‌, ಪ್ರೊ ವಿಜಯಲಕ್ಷ್ಮಿ ವಿ, ಪ್ರೊ. ಪಾರ್ವತಿ ಓಣಿ, ಪೊ. ರಾಕೇಶ ಪಾಟೀಲ್‌ ಕಾರ್ಯಾಗಾರದ ಯಶಸ್ಸಿಗೆ ಸಹಕರಿಸಿದರು.

loading...