ಅಂಗವಿಕಲಗೆ ಯಂತ್ರಚಾಲಿತ ವಾಹನ

0
18
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಸಾಮಾಜಿಕ ನ್ಯಾಯ ಒದಗಿಸುವ ಸದುದ್ದೇಶದಿಂದ ನಮ್ಮ ಕ್ಷೇತ್ರದ ಅರ್ಹ ಅಂಗವಿಕಲರನ್ನು ಗುರುತಿಸಿ ಅವರಿಗೆ ಯಂತ್ರಚಾಲಿತ ವಾಹನ ನೀಡುವ ಮೂಲಕ ಅವರ ಬದುಕಿಗೆ ಶಾಸಕರ ನಿಧಿಯ ಅನುದಾನದಿಂದ ಅನುಕೂಲತೆ ಕಲ್ಪಿಸಲಾಗಿದೆ. ಇದರ ಪ್ರಯೋಜನವನ್ನು ಅವರು ಪಡೆಯಬೇಕೆಂದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಪಟ್ಟಣದ ತಹಶೀಲ್ದಾರ ಕಾರ್ಯಲಯದ ಎದುರು 57 ಫಲಾನುಭವಿಗಳಿಗೆ ಯಂತ್ರಚಾಲಿತ ವಾಹನ ಹಸ್ತಾಂತರಿಸಿ ಮಾತನಾಡುತ್ತಿದ್ದರು. ಒಟ್ಟಾರೆಯಾಗಿ ಈವರೆಗೆ ಸುಮಾರು 325 ಫಲಾನುಭವಿಗಳಿಗೆ ಇಂತಹ ವಾಹನ ನೀಡಿದ್ದೇನೆಂದ ಅವರು, ನನ್ನ ಅವಧಿಯಲ್ಲಿ ಕಷ್ಟದಲ್ಲಿರುವ ಎಲ್ಲ ವರ್ಗದ ಜನರಿಗೆ ಸಾಧ್ಯವಿರುವ ನೆರವನ್ನು ಪ್ರಾಮಾಣಿಕವಾಗಿ ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ಪ.ಪಂ ಅಧ್ಯಕ್ಷ ಶಿರೀಷ ಪ್ರಭು, ತಹಶೀಲ್ದಾರ ಶಿವಾನಂದ ಉಳ್ಳಾಗಡ್ಡೆ ಮತ್ತಿತರರು ಉಪಸ್ಥಿತರಿದ್ದರು.

loading...