ಅಂಬೇಡ್ಕರ್ ಕುರಿತು ಅವಹೇಳನ ಸಲ್ಲದು: ಖಾದ್ರಿ

0
27
loading...

ಗಂಗಾವತಿ: ದೇಶಕ್ಕೆ ಸಂವಿಧಾನ ನೀಡಿದ ಡಾ. ಬಿ.ಆರ್.ಅಂಬೇಡ್ಕರ್ ವಿಚಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ದಲಿತ, ಅಲ್ಪಸಂಖ್ಯಾತ ಸೇರಿದಂತೆ ಸರ್ವರಿಗೂ ಸಮಪಾಲು, ಸಮಬಾಳು ಎಂಬ ನೀತಿಯಲ್ಲಿ ಸಂವಿಧಾನ ರಚಿಸಿರುವ ಬಾಬಾಸಾಹೇಬ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡುವ ಕೆಲಸ ನಿರಂತರ ನಡೆಯುತ್ತಿದೆ. ಇದು ಸಲ್ಲದು ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಜಿಲಾನಿಪಾಷಾ ಖಾದ್ರಿ ತಿಳಿಸಿದರು.

ಅಂಬೇಡಕರ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪಿ.ಮೂರ್ತಿ ನೇತ್ರತ್ವದಲ್ಲಿ ಶುಕ್ರವಾರ ನಡೆದ ಸಂಘಟನೆ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈ ಕುರಿತು ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು.ಸಂವಿಧಾನದ ಆಶಯದಂತೆ ಸರ್ವರು ನಡೆದುಕೊಳ್ಳಬೇಕು.ಮುಂಬರುವ ಚುನಾವಣೆಯಲ್ಲಿ ಅಹಿಂದ ವರ್ಗ ಸೇರಿದಂತೆ ದಲಿತಪರ, ಕನ್ನಡಪ ಸಂಘಟನೆಗಳು ಸಜ್ಜನ ರಾಜಕಾರಣಿಗೆ ಬೆಂಬಲಿಸಬೇಕು ಎಂದರು ಕರೆ ನೀಡಿದರು.
ಸಭೆಯಲ್ಲಿಅಂಬೇಡ್ಕರ್ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹ್ಮದ್ ಪೀರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವರಾಜ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು. ಚಲನಚಿತ್ರ ನಟ, ನಿರ್ಮಾಪಕ ಹಾಗೂ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ್ದು, ದಲಿತ ಮತ್ತು ಕೆಲ ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಚರ್ಚಿಸಿ ಸಂಘಟನೆ ಸಂಘಟನೆ ಕುರಿತು ಮಾಹಿತಿ ನೀಡಿದರು.

loading...