ಅಕ್ರಮ ಮರಳು ದಾಸ್ತಾನ, ಲೋಕೋಪಯೋಗಿ ಸುಪರ್ದಿಗೆ

0
19
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಮಿರ್ಜಾನ ಕೋಟೆಯ ಎದುರಿಗಿರುವ ವಿಶಾಲವಾದ ಸ್ಥಳದಲ್ಲಿ ಅಂದಾಜು 18 ಲೋಡನಷ್ಟು ಅಕ್ರಮ ಮರಳು ದಾಸ್ತಾನ ಮಾಡಲಾಗಿದ್ದು, ಅದನ್ನು ಮಿರ್ಜಾನ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗರು ಮೇಲಾಧಿಕಾರಿಗಳ ಆದೇಶದ ಮೇರೆಗೆ ಮುಟ್ಟುಗೋಲು ಹಾಕಿದಲ್ಲದೇ ತಮ್ಮದೇ ಕಣ್ಗಾವಲಲ್ಲಿ ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ಒಪ್ಪಿಸಿದ ಕುರಿತು ವರದಿಯಾಗಿದೆ.
ಈ ಕುರಿತು ಮಿರ್ಜಾನ ಗ್ರಾಮ ಲೆಕ್ಕಾಧಿಕಾರಿ ಶೈಲೇಶ ನಾಯಕ ಪತ್ರಿಕೆಗೆ ಮಾಹಿತಿ ನೀಡಿ, ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಇಲ್ಲಿ ರೇತಿ ಸಂಗ್ರಹಿಸಿದ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ವಾಟ್ಸ್‌ ಆಪ್‌ ಮಾಹಿತಿ ಕಳುಹಿಸಲಾಗಿತ್ತು. ಈ ಮಾಹಿತಿ ಆಧರಿಸಿ ಜಿಲ್ಲಾಧಿಕಾರಿಗಳು ಕುಮಟಾ ಉಪ ವಿಭಾಗಾಧಿಕಾರಿಗಳಿಗೆ ಅಗತ್ಯ ಕ್ರಮ ಜರುಗಿಸಲು ಸೂಚಿಸಿದರ ಅನ್ವಯ ತಹಸಿಲ್ದಾರ ಮೇಘರಾಜ ನಾಯ್ಕ ಸೂಚನೆಯ ಮೇರೆಗೆ ಮಂಗಳವಾರ 8 ಗಂಟೆಗೆ ಮರಳು ದಾಸ್ತಾನಿಗೆ ಮುಟ್ಟುಗೊಲು ಹಾಕಿ ಅದನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಕಂದಾಯ ನಿರಿಕ್ಷಕ ವಿ ಆರ್‌ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಶೈಲೆಶ ನಾಯಕ ಗ್ರಾಮ ಸಹಾಯಕ ಶ್ರೀಕಾಂತ ನಾಯ್ಕ ಉಪಸ್ಥಿತರಿದ್ದರು.
ಈ ನಡುವೆ ಸ್ಥಳಿಯರಾದ ಸಂತೋಷ ನಾಯ್ಕ ಮಾತನಾಡಿ, ಅಕ್ರಮ ಮರಳು ಗಾರಿಕೆ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಸ್ಥಳಿಯರಿಗೆ ಮರಳು ಸಿಗುತ್ತಿಲ್ಲ. ಅಲ್ಲದೇ ದುಪ್ಪಟ್ಟು ಹಣದಲ್ಲಿ ಮರಳು ಸಾಗಿಸುವ ಲಾಭಿ ಕೂಡ ತಾಲೂಕಿನಲ್ಲಿ ನಡೆಯುತ್ತದೆ. ಇದಕ್ಕೆ ಕಡಿವಾಣ ಬೀಳಿದರೆ ಮಾತ್ರ ಬಡಜನರಿಗೆ ಮನೆ ಕಟ್ಟಲು ಕಡಿಮೆ ದರದಲ್ಲಿ ಮರಳು ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

loading...