ಅಕ್ರಮ ಮರಳು ಲೂಟಿ : ತಾಪಂ ಸದಸ್ಯರಿಂದ ತರಾಟೆ

0
10
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ತುಂಗಭದ್ರ ನದಿ ದಡದಲ್ಲಿ ಮರಳು ಗುತ್ತಿಗೆದಾರರು ಅನಧಿಕೃತವಾಗಿ ಮರಳನ್ನು ಲೂಟಿ ಮಾಡುತ್ತಿದ್ದಾರೆ ಜೊತೆಗೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲ ಈ ಬಗ್ಗೆ ಹಮ್ಮಿಗಿ ಬ್ಯಾರೇಜ್‌ನಲ್ಲಿ ಕುಡಿಯುವ ನೀರು ಸಂಗ್ರಹವಿದ್ದರೂ ಏಕೆ ಬೀಡುತ್ತಿಲ್ಲ ಎಂದು ಸೋಮಾವಾರ ತಾ.ಪಂ.ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ ಅಧ್ಯಕ್ಷತೆಯಲ್ಲಿ ತಾ.ಪಂ ಸಬಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾ.ಪಂ ಸದಸ್ಯರು ತಾಲೂಕಾ ದಂಡಾಧಿಕಾಗಳಿಗೆ ತರಾಟೆಗೆ ತೆಗೆದುಕೊಂಡರು.
ಸಾಮಾನ್ಯ ಸಭೆ ಆರಂಭಕ್ಕೆ ಮುನ್ನ ತಾ.ಪಂ.ಸದಸ್ಯ ರುದ್ರಗೌಡ ಪಾಟೀಲ ಮಾತನಾಡಿ ಸಭೆಗೆ ಗೈರಾದ ಎಲ್ಲಾ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೇಯೇ ಕಳೆದ 2 ವರ್ಷದಿಂದ ಸಭೆಗೆ ಗೈರಾದ ವಿರುಧ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು, ನಂತರ ಮರಳು ಟೆಂಡರದಾರು ನದಿಯಲ್ಲಿ ಜೆಸಿಬಿ ಯಂತ್ರಗಳಿಂದ ನಿಯಮ ಬಾಹಿರವಾಗಿ ಮರಳು ತೆಗೆಯುತ್ತಿದ್ದಾರೆ, ಸ್ಟಾಕ್‌ಯಾರ್ಡ್‌ ಹತ್ತಿರ ಮನೆನಿರ್ಮಿಸಿ ಸಿಸಿಕ್ಯಾಮರಾ ಅಳವಡಿಸಿ ಎಂದು ಕಾನೂನು ಇದ್ದರೂ ತಾವು ಏನು ಕ್ರಮ ಕೈಗೊಂಡಿದ್ದಿರಿ? ಇದುವರೆಗೂ ಟಾರ್ಸ್‌ಪೋರ್ಸ್‌ ಸಮಿತಿ ಬಗ್ಗೆ ಅರಿವು ಕೂಡಾ ಇಲ್ಲ ಕೂಡಲೇ ಸಭೆ ಕರೆದು ಹೊಸದಾಗಿ ಸರಕಾರದ ನಿಯಮಾವಳಿ ಪ್ರಕಾರ ಟೆಂಡರ್‌ದಾರರು ಯಾರು ಹಾಗೂ ಮರಳು ಅಗಿಯುತ್ತಿರುವದು ಎಷ್ಟು ಆಳ ಎನ್ನುವುದು ಪರೀಶಿಲಿಸಬೇಕೆಂದರು.
ರಾತ್ರಿಯಿಡೀ ಮರಳು ಲೂಟಿ ಮಾಡುವ ಧಂದೆ ಕೋರರಿಗೆ ಕಾನೂನು ಬದ್ದವಾಗಿ ಕ್ರಮ ಜರುಗಿಸಿ, 20 ಫೂಟುಗಟ್ಟಲೇ ಆಳವಾಗಿ ಮರಳು ಅಗಿಯುವುದರಿಂದ ಕುಡಿಯಲು ನೀರು ಸಂಗ್ರಹವಾಗುತ್ತಿಲ್ಲ. ಮರಳು ಗಣಿಗಾರಿಕೆ ಮತ್ತು ಸ್ಟಾಕ ಯಾರ್ಡ್‌ಗಳನ್ನು ಸದ್ಯದ ಪರಸ್ಥಿತಿಯಲ್ಲಿ ನಿಲ್ಲಿಸಿ ಸಾರ್ವಜನಿಕರಿಗೆ ಕುಡಿಯಲು ನೀರು ಒದಗಿಸುವ ಕೆಲಸವನ್ನು ಮಾಡಬೇಕೆಂದರು.ಗದಗ ಭೀಷ್ಮ ಕೆರಯಲ್ಲಿ ಭೋಟಿಂಗ ಮಾಡಲು ನೀರು ಹರಿಸುತ್ತಿದ್ದು ತಾಲೂಕಿನ ಜನತೆಗೆ ಕುಡಿಯಲು ನೀರು ಇಲ್ಲ ಹಮ್ಮಿಗಿ ಬ್ಯಾರೇಜ್‌ನಲ್ಲಿ 1.6ಕ್ಯೂಸೆಕ್ಸ್‌ ನೀರು ಸಂಗ್ರಹವಿದ್ದರು ಈ ಬಗ್ಗೆ ಅಧಿಕಾರಿಗಳು ತಾಲೂಕಿನ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವಲ್ಲಿ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಹಾಗೂ ನದಿ ದಡದಲ್ಲಿನ ಸುತ್ತಮುತ್ತಲಿನ ರೈತರಿಗೆ ನೀರು ಪಂಪ್‌ಸೆಟ್‌ ಬಳಕೆ ಮಾಡಬಾರದು ಎಂದು ಎಂದು ಡಂಗೂರ ಸಾರಬೇಕಿತ್ತು ಎಂದರು.
ತೋಟಗಾರಿಕೆ ಸಹಾಯಕ ನಿರ್ಧೇಶಕ ಸುರೇಶ ಕುಂಬಾರ ಸಮಗ್ರ ತೋಟಗಾರಿಕೆ ಯೋಜನೆಯಡಿಯಲ್ಲಿ ರೈತರಿಗೆ ಸಹಾಯಧನ ತರಕಾರಿ ಬೀಜಗಳನ್ನು ಬೆಳೆಯಲು ಎಲ್ಲಾ ಸದಸ್ಯರು ಆಯಾ ಪಂಚಾಯತಿ ವ್ಯಾಪ್ತಿಯಲ್ಲಿ ರೈತರಿಗೆ ಇಲಾಖೆಯಿಂದ ತಿಳಿಸಲಾಗಿದೆ ಸದಸ್ಯರು ಆಸಕ್ತಿವಹಿಸಿ ರೈತರಿಗೆ ಸಲಹೆ ನೀಡಬೇಕೆಂದರು.ಈರುಳ್ಳಿ ಬೆಳೆಯುವ ರೈತರಿಗೆ ಹೆಚ್ಚು ಆದಾಯ ಬರುವ ನಿಟ್ಟಿನಲ್ಲಿ ಡಂಬಳ ಗ್ರಾಮದಲ್ಲಿ 3 ಈರುಳ್ಳಿ ಸಂಗ್ರಹಣಾ ಘಟಕ ಪ್ರಾರಂಭಿಸಲಾಗಿದೆ, ಮುಂದಿನ ವರ್ಷ 15 ಸಂಗ್ರಹಣಾ ಘಟಕ ತಯಾರಿಸಲು ನಿರ್ಧರಿಸಲಾಗಿದೆ ಸಂಭಂದಪಟ್ಟವರು ಇದರ ಪ್ರೆಯೋಜನ ಪಡೆದುಕೊಳ್ಳಬೇಕು, ಸಮಗ್ರ ತೋಟಗಾರಿಕೆ ಯೋಜನೆಯಡಿ 5 ಎಕರೆ ಜಮೀನು ಹಾಗೂ 30ಹೆಚ್‌ಪಿ ಟ್ರ್ಯಾಕ್ಟರ್‌ ಹೊಂದಿದ ರೈತರಿಗೆ ಸಬ್ಸಿಡಿ ಸಹಾಯ ಧನದಲ್ಲಿ ನೀರಿನ ಟ್ಯಾಂಕರ್‌ ಒದಗಿಸಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎನ್‌.ಹಳ್ಳಿಗುಡಿ ಸಹಾಯಕ ಕೃಷಿ ನಿರ್ದೆಶಕ ಎಸ್‌.ಬಿ.ನೆಗಳೂರ, ಎಇಇ ಎಂ.ಡಿ.ತೋಗುಣಸಿ, ಸಿಡಿಪಿಓ ಎಸ್‌.ಎಸ್‌.ವಾರದ, ಹೆಸ್ಕಾಂ ಇಂಜನೀಯರ ಎಂ.ಬಿ.ಗವರೋಜಿ, ಇಲಾಖಾಧಿಕಾರಿಗಳು ಸಂಭಂದಪಟ್ಟ ಯೋಜನೆಗಳು ಕುರಿತು ಸಭೆಯಲ್ಲಿ ಮಾಹಿತಿ ಒದಗಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿಗಳಾದ ಭ್ರಮರಾಂಭ ಗುಬ್ಬಿಶೆಟ್ಟಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್‌.ಮುಂಡರಗಿ, ತಾ.ಪಂ.ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ಸದಸ್ಯರಾದ ತಿಪ್ಪವ್ವ ಕಾರಭಾರಿ, ವೆಂಕಪ್ಪ ಬಳ್ಳಾರಿ, ಕುಸುಮಾ ಮೇಟಿ, ಲಲಿತಾ ಎಲಿಗಾರ, ಪುಷ್ಪಾ ಪಾಟೀಲ, ಭರಮಪ್ಪ ನಾಗನೂರ, ರುದ್ರಪ್ಪ ಬಡಿಗೇರ, ಬಿಸಿಎಂ ಬಸವರಾಜ ಬಳ್ಳಾರಿ, ವೈದ್ಯಾಧಿಕಾರಿ ಡಾ.ಕೀರ್ತಿಹಾಸ, ಇನಾಮದಾರ ಸೇರಿದಂತೆ ಇತರರಿದ್ದರು.

loading...