ಅಡ್ಡಿ ಆತಂಕಗಳ ನಡುವೆಯೂ ಯಶಸ್ವಿಗೊಂಡ ಉಜ್ವಲ ಯೋಜನೆ

0
15
loading...

ಕನ್ನಡಮ್ಮ ಸುದ್ದಿ-ಕುಮಟಾ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ ಇತ್ತೀಚೆಗೆ ಗೋಕರ್ಣದ ಮೂಲಿಕೇರಿ, ಮಾದನಗೇರಿ, ಹಿರೇಗುತ್ತಿ, ಪಡುವಣಿ, ಬರ್ಗಿ, ಮುಗ್ವಾ ಮುಂತಾದ ಗ್ರಾಮಗಳಲ್ಲಿ ಸುಮಾರು 10 ಫಲಾನುಭವಿಗಳಿಗೆ ಅವರವರ ಮನೆ ಬಾಗಿಲಿಗೆ ಈ ಯೋಜನೆಯಡಿ ಗ್ಯಾಸ್‌ ಕಿಟ್ಗಳನ್ನು ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಮಾತನಾಡಿ, ಉಜ್ವಲ ಯೋಜನೆ ಬಡವರ ಪರವಾದ ಯೋಜನೆಯಾಗಿದೆ. ಇದರಿಂದ ಕಡುಬಡವರಿಗೆ ತುಂಬಾ ಅನುಕೂಲತೆ ಉಂಟಾಗುತ್ತಿದೆ. ಮಹಿಳೆಯರ ಸ್ವಾಸ್ಥ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಜಾರಿಯಾದ ಈ ಯೋಜನೆಯ ಸೌಲಭ್ಯಗಳಲ್ಲಿ ರಾಜಕೀಯ ತಂತ್ರ ಹೂಡುವುದು ಸರಿಯಲ್ಲ. ಬಡವರಿಗೆ ಅನುಕೂಲತೆ ಒದಗಿಸುವುದು ಎಲ್ಲಾ ರಾಜಕೀಯ ಪಕ್ಷಗಳ ಉದ್ದೇಶವಾಗಿರಬೇಕು. ಬಡವರ ಪರ ಕೆಲಸವನ್ನು ಯಾರೇ ಮಾಡುತ್ತಿದ್ದರೂ ಅವರಿಗೆ ಪ್ರೋತ್ಸಾಹ ನೀಡಬೇಕೇ ವಿನಃ ಅಡ್ಡಿಪಡಿಸುವುದು ಸರಿಯಲ್ಲ. ಜನಪರ ಯಾವುದೇ ಯೋಜನೆಗಳಿದ್ದರೂ ಅವುಗಳನ್ನು ಪ್ರಾಮಾಣಿಕವಾಗಿ ಅವರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಸದಾ ಕಂಕಣಬದ್ಧರಾಗಿರುತ್ತೇವೆ ಎಂದರು.

loading...